ನಾವು ಮಾಡಿದ ಪಾಪದ ಫಲ ನಾವೇ ಅನುಭವಿಸಬೇಕು. ಮಾನ್ಯ ಎಚ್.ಡಿ. ದೇವೆಗೌಡರು.

ಮಾನ್ಯ ಎಚ್.ಡಿ. ದೇವೆಗೌಡರು ಮಾಜಿ ಪ್ರಧಾನಿಯವರು ತಮ್ನ ಜೀವಿತಾವಧಿಯಲ್ಲಿ ಎಲ್ಲವನ್ನೂ ನೋಡಿದರು
. ನಾನು ಮಾಡಿದ ಕರ್ಮ ನಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಬರುತ್ತೇ ನಮ್ಮ ಪಾಪದ ಫಲ ಅವರು ಅನುಭವಿಸುತ್ತಾರೆ ಎಂದು ಹಿರಿಯರು ಹೇಳುತ್ತಿದ್ದರು. ಈಗ ನಮ್ಮ ಕರ್ಮದ ಫಲ ನಾವೇ ಭೋಗಿಸಬೇಕು. ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತಾಗಿದೆ. ನಾವು ಮಾಡಿದ ಕರ್ಮದ ಫಲ ನಾವೇ ಅನುಭವಿಸಬೇಕು. ಮತ್ತೊಂದು ಲೋಕವಿಲ್ಲ
ಮಾನ್ಯ ಗೌಡರು ತಮ್ಮ ಜೀವಿತಾವಧಿಯಲ್ಲಿ ರಾಜಕೀಯದಲ್ಲಿ ಎಲ್ಲಾ ಸ್ಥಾನ-ಮಾನ-ಮರ್ಯಾದೆ- ಪ್ರತಿಷ್ಠೇ ಗೌರವ ಪಡೆದುಕೊಂಡವರು. ಅದೆಲ್ಲಾ ಸುಲಭವಾಗಿ ಸಿಕ್ಕಿದ್ದಲ್ಲ ಎಲ್ಲವನ್ನೂ ಹೋರಾಟ ಮಾಡಿಯೇ ದಕ್ಕಿಸಿಕೊಂಡವರು. ಹರೆಯ ವಯಾ್ಸಿನಲ್ಲಿ ಲೆಕ್ಕಾಚಾರದಿಂದಲೇ ಜೀವನ ಮಾಡಿಕೊಂಡು ಬಂದವರು.. ಬದುಕಿನ ಬಗ್ಗೆ ಭಯವಿತ್ತು, ಕಾಳಜಿ ಇತ್ತು ಜೊತೆಗೆ ಜೊತೆಗೆ ಇಷ್ರ್ಯೆ, ಮದ, ಮತ್ಸರವೂ ಚೂರು-ಪಾರು ಇತ್ತು.
1994 ಮೊದಲರ್ಧದಲ್ಲಿ ಕಾಂಗೈನ ದುರಾಡಳಿತದಿಂದ ಮತ್ತು ಲಿಂಗಾಯತರಿಗೆ ಕಾಂಗೈ ಅವಮಾನಿಸಿದೆ ಎಂಬ ಅಕ್ರೋಶ ರಾಜ್ಯದ ಲಿಂಗಾಯತ ಜನಾಂಗದಲ್ಲಿ ಸಿಟ್ಟು ಮಡುಗಟ್ಟಿತ್ತು. ಮಾ.ಮು. ಜೆ.ಎಚ್.ಪಾಟೀಲರು ಹಾಗೂ ಮಾ.ಮು. ದಿ.ರಾಮಕೃಷ್ಣ ಹೆಗಡೆಯವರು ರಾಜ್ಯದ ಲಿಂಗಾಯತರ ಮೆಚ್ಚಿನ ನಾಯಕರಾಗಿದ್ದರು. ಜನತಾದಳ ಪಕ್ಷದಿಂದ ಇವರು ಜೋರಾಗಿ ಪ್ರಚಾರ ಕೈಗೊಂಡು ರಾಜ್ಯದ್ಯಾಂತ ಬಿರುಸಿನ ಪ್ರಚಾರ ಮಾಡಿದ ಪರಿಣಾಮದಿಂದಾಗಿ 1994 ರಲ್ಲಿ ಕರ್ನಾಟಕ ರಾಜ್ಯದಲ್ಲಿ ಜನತಾದಳ ಪಕ್ಷವು ಅಭೂತ ಪೂರ್ವ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣೆ ಹಿಡಿಯಲು ತಯಾರಾಗಿತ್ತು. ದೇವೇಗೌಡರು ರಾಜ್ಯದ 14 ನೇ ಮುಖ್ಯಮಂತ್ರಿ ಪದವಿಗೇರಲು ಸಜ್ಜಾಗಿದ್ದರು.
ಅಂದು ಜನತಾದಳ ಪಕ್ಷದ ಎಲ್ಲಾ ಶಾಸಕರೂ ತಮ್ಮ ನಾಯಕನನ್ನು ಆಯ್ಕೆ ಮಾಡಲು ಶಾಸಕಾಂಗದ ಸಭೆ ಸೇರಿದಾಗ ಗದ್ದಲವಾಯಿತು. ಆ ಗದ್ದಲದಲ್ಲಿ ಗೌಡರ ಸುಪುತ್ರರಾದ ಲಿಂಬೇಕಾಯಿ, ಅದ್ಯಾಯ ದ್ವೇಷ ಇಟ್ಟುಕೊಂಡಿದ್ದರೋ ಏನೋ ವೀಕ್ಷಕರಾಗಿ ಬಂದಿದ್ದ ದಿ.ರಾಮಕೃಷ್ಣ ಹೆಗಡೆಯರಿಗೆ ಚಪ್ಪಲಿಯಿಂದ ಹೊಡೆದೇಬಿಟ್ಟರು.
ಮುಂದೇ ಗೌಡರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು.
ಆಗ ಮಾ.ಮು.ದಿ.ಹೆಗಡೆಯವರು ಯಾರಿಗೋ ಅಧಿಕಾರ ಕೊಡಿಸಲು ಹೋಗಿ ನಾನು ಚಪ್ಪಲಿಯ ಏಟು ತಿನ್ನಬೇಕಾಯಿತು ಎಂದು ನೊಂದುಕೊಂಡರು. ಸಾರ್ವಜನಿಕವಾಗಿ ತಮ್ಮ ಅಳಲು ತೊಡಿಕೊಂಡಿದ್ದರು. ಬಡ ಬ್ರಾಹ್ಮಣನ ನಿಟ್ಟುಸಿರು ಸರಿಯಾಗಿ 30 ವರ್ಷಗಳ ನಂತರ ಲಿಂಬೇಕಾಯಿಗೆ ಸುತ್ತಿಕೊಂಡಿತೋ ಏನೋ? ಅತೀ ಕೆಟ್ಟ ಕೃತ್ಯದಿಂದಾಗಿ ಇಂದು ಪರಪ್ಪನ ಅಗ್ರಹಾರ ಸೇರುವಂತಾಯಿತು.
ರಾಜಕಾರಣಿಗಳು ಅಧಿಕಾರದ ಮದದಲ್ಲಿ ತೋರುವ ಸೊಕ್ಕು, ದಿಮಾಕು, ಮದ, ಠಂಕಾರವನ್ನು ಸಾಮಾನ್ಯ ಜನರಿಂದ ಇಳಿಸಲು ಸಾಧ್ಯವಿಲ್ಲ? ಅಂಥಹ ದುರಹಂಕಾರಿಗಳಿಗೆ ಕಾಲವೇ ಬುದ್ದಿ ಕಲಿಸುತ್ತದೆ ಎನ್ನುವ ಮಾತು ಲಿಂಬೆಕಾಯಿಯ ವಿಷಯದಲ್ಲಿ ನಿಜವಾಯಿತೆನ್ನಬೇಕು.
ಗೌಡರಿಗೆ ಅಚಾನಕ್ಕಾಗಿ ಲಾಟ್ರಿ ಹೊಡೆದು 1 ಜೂನ್ 1996 ರಲ್ಲಿ ದೇಶದ ಪ್ರಧಾನಿಯಾದರು. ಸಿಕ್ಕ ಚಾನ್ಸ ಸರಿಯಾಗಿ ಬಳಕೆ ಮಾಡಿಕೊಂಡು ದೇಶ ಆಳಲು ಹೊರಟರು. ಅಷ್ಧೊತ್ತಿಗಾಗಲೇ ಅಧಿಕಾರದ ಮದವೇರಿಸಿಕೊಂಡಿದ್ದ ಗೌಡರು, ಅದೇ ಅಧಿಕಾರದ ಮದದಿಂದಲೋ, ಏನೋ ಹಳೆಯ ಧ್ವೇಷವಿಟ್ಟುಕೊಂಡು ಪೂರ್ವಾಪರ ವಿಚಾರಿಸದೇ ದಿ.ರಾಮಕೃಷ್ಣ ಹೆಗಡೆಯವರನ್ನು ಫುಟ್ ಬಾಲ್ಗೆ ಒದ್ದಂತೆ ಒದ್ದು ಪಕ್ಷದಿಂದ ಹೊರ ಹಾಕಿದರು. ಅಗ ಕೇಂದ್ರದಲ್ಲಿದ್ದ ಜನತಾ ಪರಿವಾರದ ಹಲವಾರು ಅತಿರಥ ಮಹಾರಥರು ಬಾಯಿ ತೆರೆಯಲೇ ಇಲ್ಲ. ಪ್ರತಿಭಟಿಸುವ ಮಾತು ದೂರವೇ ಉಳಿಯಿತು. ದೇವೇಗೌಡರ 2 ವರ್ಷದ ಅಧಿಕಾರಾವಧಿಯಲ್ಲಿ ರಾಮಕೃಷ್ಣ ಹೆಗಡೆಯರಿಗೆ 2 ಬಾರಿ ಹೀನಾಯ ಅವಮಾನಿಸಿದರು.
ಕಾಲ ಚಕ್ರ ತಿರುಗುತ್ತಲೇ ಇದೆ. ದೇವೇಗೌಡರು ತಮ್ಮ ಕೊನೆಗಾಲದಲ್ಲಿ ತಮ್ಮದೇ ಪಕ್ಷದ, ತಾವೇ ಅಧ್ಯಕ್ಷರಾಗಿದ್ದಾರೆ. ಆದರೇ ತಮ್ಮ ಪಕ್ಷದ ಶಾಸಕ ಪುತ್ರ ಲಿಂಬೇಕಾಯಿಯವರನ್ನು ತಮ್ಮ ಪಕ್ಷದಿಂದ ಹೊರ ಹಾಕುವ ಪತ್ರಕ್ಕೆ ತಮ್ಮ ಕೈಯಾರೇ ಸಹಿ ಮಾಡುವಂಥಹ ದುರಂತ ಒದಗಿ ಬಂದಿದೆ. ಅಷ್ಟೇ ಅಲ್ಲ ಪಾಪದ ಬಂಡವಾಳಕ್ಕೆ ಬಡ್ಡಿ ಸೇರಿಸಿ ಹಿಂದಿರುಗಿಸಬೇಕಾಗಿದೆಯೋ ಎನೋ? ದೇಶದಲ್ಲೆಲ್ಲಾ ಛೀ…. ಥೂ… ಎಂದು ಉಗಿಯುವ ಈ ಸಂದರ್ಭದಲ್ಲಿ ಅಸಹಾಯಕರಾಗಿ ಮರ್ಯಾದೆಗೆ ಹೆದರಿ ಕ್ರಮಕೈಗೊಳ್ಳುವಂತಾಗಿದೆ. ಜೊತೆಗೆ ಮೊಮ್ಮಗನನ್ನೂ ಕೂಡ ಪಕ್ಷದಿಂದ ಹೊರ ಹಾಕುವ ಪತ್ರಕ್ಕೆ ಸಹಿ ಮಾಡುವ ದುರಂತಕ್ಕೆ ಸಾಕ್ಷಿಯಾದರು.
ಅಂದು ಬಡ ಬ್ರಾಹ್ಮಣ ಮಮ್ಮಲ ಮರುಗಿದ ಜೀವಕ್ಕೆ 30 ವರ್ಷಗಳ ನಂತರ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದೇ?



