ಸುದ್ಧಿ

ಕೋರ್ಸ್ ಪ್ರಾರಂಭಿಸಲು ಅನುಮೋದನೆ : ಪ್ರಾಂಶುಪಾಲ ಭಜರಂಗಬಲಿ.

ಕೋರ್ಸ್ ಪ್ರಾರಂಭಿಸಲು ಅನುಮೋದನೆ : ಪ್ರಾಂಶುಪಾಲ ಭಜರಂಗಬಲಿ

ಕನಕಗಿರಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಪಂಪಣ್ಣ ಶೆಟ್ಟರ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಜರಂಗಬಲಿ ಪ್ರಕಟಣೆಯಲ್ಲಿ ಕೋರಿರುತ್ತಾರೆ.

ಪಂಪಣ್ಣ ಗುಗ್ಗುಳ ಶೆಟ್ಟರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾದ ಬಜರಂಗಬಲಿ ಅವರು ಪತ್ರಿಕಾ ಪ್ರಕಟಣೆ ಎಲ್ಲಿ
ಪಿ.ಯು.ಸಿ ನಂತರ ಪದವಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತಿಳಿಸುವುದೇನೆಂದರೆ, 2024-25ನೇ ಶೈಕ್ಷಣಿಕ ಸಾಲಿನಲ್ಲಿ BA (BA in Journalism and Mass Communication) (ಪತ್ರಿಕೋದ್ಯಮ), B.Sc (Mathematics, Physics, Chemistry) ಪ್ರಥಮ ವರ್ಷದ ಪದವಿ ಪ್ರವೇಶಾತಿಗಳು ಪ್ರಾರಂಭವಾಗಿದ್ದು, ನಮ್ಮ ಕಾಲೇಜು ಕೊಪ್ಪಳ ವಿಶ್ವವಿದ್ಯಾಲಯ, ಕೊಪ್ಪಳದ ಸಂಲಗ್ನತೆಗೆ ಒಳಪಟ್ಟಿದೆ. ಈಗಾಗಲೇ ಸರ್ಕಾರದಿಂದ Bsc ಕೋರ್ಸ್ ಪ್ರಾರಂಭಿಸಲು ಅನುಮೋದನೆ ದೊರೆತಿದ್ದು, ಪ್ರಸಕ್ತ ಸಾಲಿನ ಕೊಪ್ಪಳ ವಿಶ್ವವಿದ್ಯಾಲಯ ಕೊಪ್ಪಳದಿಂದ B.Sc (Mathematics, Physics, Chemistry) ಕೋರ್ಸ್ ಪ್ರಾರಂಭಿಸಲು ಅನುಮೋದನೆ ದೊರೆತಿದ್ದರಿಂದ ನಮ್ಮ ಕಾಲೇಜಿನಲ್ಲಿ ಈ ವರ್ಷದಿಂದ ನೂತನವಾಗಿ Bsc ಕೋರ್ಸ್ ಪ್ರಾರಂಭ ಮಾಡಲಾಗಿದೆ. ನಮ್ಮ ಕಾಲೇಜು ಸುಸಜ್ಜಿತ ಕಟ್ಟಡದ ಜೊತೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿದೆ ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದರು.

ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Related Articles

Leave a Reply

Your email address will not be published. Required fields are marked *

Back to top button