ಆತ್ಮೀಯ ಯುವತಿಯರೇ ಹುಷಾರ್. ವಿಜಯಲಕ್ಷ್ಮಿ ಧಾರವಾಡಕರ್.
ಆತ್ಮೀಯ ಯುವತಿಯರೇ, ಜೀವನ ನಾವಂದುಕೊಂಡಷ್ಟು ಸುಲಭವಲ್ಲ. ಭಯವಿರಲೀ, ಆದರೇ ಭಯಪಟ್ಟುಕೊಳ್ಳದೇ ಹುಷಾರಾಗಿರಿ. ಈ ಕೆಳಗಿನ ಟಿಪ್ಸ ಪಾಲಿಸಿರಿ.
ಆತ್ಮೀಯ ಯುವತಿಯರೇ ಹುಷಾರ್.
ನಿಮ್ಮಲ್ಲಿ ಒಂದು ವಿನಂತಿ ನೀವು ಎಲ್ಲೇ ವಿದ್ಯಾಭ್ಯಾಸ ಮಾಡುತಿದ್ದರು ಅಥವಾ ಹೊರಗಡೆ ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ಆಗ್ತಾ ಇದ್ದರೆ ನಿಮಗೆ ಯಾರಾದ್ರೂ ತೊಂದ್ರೆ ಕೊಡ್ತಾ ಇದ್ದರೇ ಆ ಕ್ಷಣಕ್ಕೆ ಮನೆಯವರಿಗೆ ತಿಳಿಸಿ. ಕಾಲೇಜ್ ಲೈಫ್ನಲ್ಲಿ ಇದು ಕಾಮನ್ ಅಂತ ಸುಮ್ನೆ ಆಗಬೇಡಿ ನಿಮ್ಮ ತಂದೆ ತಾಯಿಗೆ ತಕ್ಷಣ ತಿಳುಹಿಸಿ. ಯಾವತ್ತೂ ನೀವು ಗಂಡುಹುಡುಗರನ್ನು ಕೆದಕಿ ವಾದ ಮಾಡಕೆ ಹೋಗಬೇಡಿ, ಹಾಗಂತ ಯಾವತ್ತೂ ಸುಮ್ನೆ ಆಗಬೇಡಿ ವಿಷಯವನ್ನು ನಿಮ್ಮ ಕುಟುಂಬದವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ
ಎಂದು ಸುಮ್ನೆ ಆಗಬೇಡಿ. ಹಾಗೆನು ಆಗಲ್ಲ ಎನೆ ಹೊರಗಡೆ ಸಮಸ್ಯೆಗಳಿದ್ದಲ್ಲಿ ನಿಮ್ಮ ಕುಟುಂಬಕ್ಕೆ ತಿಳಿಸಿ. ಜೊತೆಗೆ ಸಹಾಯವಣಿ ಸಂಖ್ಯೆ – 1030. ನೆನಪಿಟ್ಟುಕೊಂಡಿರಿ. ನಿಮ್ಮ ಮೋಬೈಲ್ ನಲ್ಲಿ ಸೇವ್ ಮಾಡಿಟ್ಟುಕೊಂಡಿರಿ. ಸೈಲೆಂಟಾಗಿದ್ದರೆ ಇದ್ದರೇ ಸಮಸ್ಯೆ ಇನ್ನೂ ದೊಡ್ಡದಾಗುತ್ತದೆ. ನಿಮಗೆ ಮುಂದೆ ತುಂಬಾ ದೊಡ್ಡ ಸಮಸ್ಯೆ ಆಗುತ್ತೆ ಅದಕ್ಕೆ ನೀವು ತುಂಬಾ ಜಾಗರೂಕತೆ ಇಂದ ಇರಬೇಕು ತೊಂದ್ರೆ ಆದಮೇಲೆ ಸರ್ಕಾರ ಸಮಾಜವನ್ನು ಟೀಕೆ ಮಾಡಿ ಏನು ಪ್ರಯೋಜನ ಇಲ್ಲ ಅದಕ್ಕೆ ತೊಂದ್ರೆ ಆಗೋ ಮುಂಚೆನೇ ನಾವೇ ತುಂಬಾ ಜಾಗರೂಕರಾಗಿ ಇರಬೇಕು.. ಇದು ನಿಮ್ಮ ತಾಯಿಯಾಗಿ ತುಂಬಾ ಕಾಳಜಿಯಿಂದ ಹೇಳುತ್ತಿದ್ದೇನೆ..
ನಿಮಗೆ ನೀವೇ ರಕ್ಷಕರಾಗಿ ಎಲ್ಲದಕ್ಕೂ ಅಗಿಂದ ಆಗಲೇ ನಿಮ್ಮ ಕುಟುಂಬದ ಗಮನಕ್ಕೆ ತನ್ನಿ. ಯಾವದನ್ನು ಮುಚ್ಚಿಟ್ಟು ಒದ್ದಾಡದಿರಿ….ಅಥವಾ 112 ಪೊಲೀಸರಿಗೆ ತಕ್ಷಣ ಕರೆಮಾಡಿ..
“ಜೀವನಕ್ಕಿಂತ ಜೀವ ಮುಖ್ಯ
ಜೀವ ಇದ್ದರೆ ಜೀವನ”
ಕಲಸನ್ನವರ್ ಅವರು ನಿಮಗಾಗಿ ವಿನಂತಿಸಿದ್ದಾರೆ.
ಕುಟುಂಬದೆದುರು ಹೇಳಲು ಆಗದೆ ಇದ್ದ ಪಕ್ಷದಲ್ಲಿ ನಮಗೆ ಒಂದು ಕರೆ ಮಾಡಿ ನಾವು ನಿಮ್ಮೊಂದಿಗೆ ಸದಾಕಾಲ ಇದ್ದೇವೆ.
ತಮ್ಮೆಲ್ಲರ ಹಿತೈಷಿ.
ವಿಜಯಲಕ್ಷ್ಮಿ ಧಾರವಾಡಕರ್.
ರಾಜ್ಯಾಧ್ಯಕ್ಷೆ.
ಭ್ರಷ್ಟಾಚಾರ ನಿರ್ಮುಲನೆ ಹಾಗೂ ಮಾನವ ಹಕ್ಕುಗಳ ವಿಂಗ್(ರಿ).
ಧಾರವಾಡ.
🤳7846806849.ಸಮಸ್ಯೆಗಳಿಗೆ ಸಮಾಧಾನ..
ಸಾಯಿ ಸಲಹಾ ಕೇಂದ್ರ ಧಾರವಾಡ..



