ಸುದ್ಧಿ

🙏 ಕಥೆ ಅಲ್ಲ ಜೀವನ 🙏 ಶ್ರೀಮತಿ ಅಮರಾವತಿ ಹಿರೇಮಠ.

🙏ಕಥೆ ಅಲ್ಲ ಜೀವನ🙏

ಸಾಯಿ ಸಲಹಾ ಕೇಂದ್ರ ( ರಿ )ಧಾರವಾಡ

ಸಂಸ್ಥಾಪಕರು.. ಶ್ರೀಮತಿ ವಿಜಯಲಕ್ಷ್ಮಿ ಆರ್ ಧಾರವಾಡಕರ್ ಅವರ ಅನುಮತಿಯ ಮೇರೆಗೆ ಹೆಣ್ಣು ಮಕ್ಕಳ ಜೀವನದಲ್ಲಿ ನಡೆಯುವ ನೈಜ ಘಟನೆಗಳನ್ನು
ಕಥೆಯ ಮೂಲಕ ಪ್ರಸ್ತುತ ಪಡಿಸುತ್ತಿದ್ದೇನೆ .

ಒಂದು ಗಾದೆ ಇದೆ” ಹೆಣ್ಣಿನ ಬಾಳು ಹಣ್ಣಿನ ಹೋಳು ಜಾರಿ ಬಿದ್ದರೆ ಮಣ್ಣಿನ ಧೂಳು ” ಈ ಗಾದೆ ಸುಮ್ಮನೆ ಮಾಡಿಲ್ಲ್ ನಮ್ಮ ಪೂರ್ವಜರು.ಯಾಕೆ ಈ ಮಾತು ಹೇಳುತ್ತಿದ್ದೇನೆ ಎಂದರೆ ಇತ್ತೀಚೆಗೆ
ಅಂತರ್ಜಾಲದಲ್ಲಿ ನಡೆಯುವ ಪ್ರೀತಿ ಪ್ರೇಮ ಪ್ರಣಯದ ಮದುವೆಗಳು .ಈ ಮದುವೆಗಳಿಗೆ ಅರ್ಥವಿದೆಯೇ ? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಠಿಣವಾಗಿದೆ .
ಏಕೆಂದರೆ ಆಕರ್ಷಣೆಗೆ ಒಳಗಾಗಿ ಹಿಂದೂ ಮುಂದೂ ಯೋಚಿಸದೆ ಮನಸ್ಸನ್ನು ಕೊಟ್ಟು ಬಿಡುವುದು . ಆದರೆ ಅದು ಎಷ್ಟರಮಟ್ಟಿಗೆ ಸತ್ಯ ಎನ್ನುವುದು ನಿಗೂಢ . ಕೆಲವರು ಅಂದ್ರೆ ಹುಡುಗ ಅಥವಾ ಹುಡುಗಿಯ ಹಿಂದಿನ ಸಂಪತ್ತು ಐಶ್ವರ್ಯಕ್ಕೆ ಮೆಚ್ಚಿ ಪ್ರೀತಿಯ ನಾಟಕವಾಡಿ ತಮ್ಮ ಬಲೆಗೆ ಹಾಕಿಕ್ಕೊಳುವುದು ಹಲವಾರು ಪ್ರಕರಣಗಳು ಕೇಳುತ್ತೇವೆ .

ಪ್ರೀತಿ ಕುರುಡು ಎನ್ನುವುದು ನಿಜ . ಪ್ರೀತಿಗೆ ಜಾತಿ ಮತ ಬೇಧವಿಲ್ಲದೆ ಒಲಿಯುವುದು.
ಆದರೆ ಹೆತ್ತವರು ತಮ್ಮ ಮಕ್ಕಳಿಗಾಗಿ ಪ್ರಾಣವನ್ನೇ ಕೊಡಲು ಸಿದ್ಧವಿರುವ ದೇವರು .
ಅಂತಹ ಪ್ರೀತಿಯ ಮೇಲೆ ಕರುಣೆಯಿಲ್ಲದೆ , ನಿನ್ನೆ ಮೊನ್ನೆ ಬಂದ ಎರಡು ದಿನದ ಪ್ರೀತಿಗೆ ಮರುಳಾಗಿ ಎಲ್ಲವನ್ನೂ ತೊರೆದು ಓಡಿ ಹೋಗಿ ಮದುವೆಯಾಗುವುದು ದುರದೃಷ್ಟಕರ ಸಂಗತಿ . ಕ್ಷಣಿಕ ಸುಖಕ್ಕಾಗಿ ಮುಂದಿನ ಭವಿಷ್ಯವೆ ಹಾಳು ಮಾಡಿ ಕೊಂಡು ” ಅಗಸರ ನಾಯಿ ಹಳ್ಳನ್ನು ಕಾಯುವುದಿಲ್ಲ ಇತ್ತ ಮನೆಗೆ ನಿಯತ್ತು ಇಲ್ಲ ” ಎಂಬಂತೆ ಅವರ ಜೀವನ .ಮನೆ ಮನೆತನದ ಸಂಸ್ಕಾರ ಸಂಸ್ಕೃತಿಗೆ ಕಳಂಕ ತರುವ ವಾಟ್ಸಪ್ , ಫೇಸ್ಬುಕ್ ಮತ್ತು ಯುಟ್ಯೂಬ್ ನಲ್ಲಿ , ಶಾಲಾ ಕಾಲೇಜುಗಳಲ್ಲಿ ಕೂಡಿದ ಎರಡು ಮನಸ್ಸುಗಳ ಮಿಲನದ ಅರ್ಥವಿಲ್ಲದ ಮದುವೆಗೆ ಯಾವ ಅರ್ಥವೂ ಇರುವುದಿಲ್ಲ.
ಇಂತಹ ಘಟನೆಗಳ ಆಧಾರಿತ ಒಂದು ಕಥೆ .

ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡ ಎರಡು ಜೀವಗಳು .
ಆರತಿ ಎಂಬ ಹುಡುಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು . ಹುಡುಗ ವಿನಯ್ ಅವನು ಬಾಂಬೆಯ
ಕಟ್ಟಡಗಳ ಮೇಲೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ .
ಇಬ್ಬರು ದಿನ ನಿತ್ಯವೂ ಮೇಸೆಜ್ ಮಾಡುತ್ತಾ ಹೋದಂತೆ ಮನಸ್ಸುಗಳು ಹತ್ತಿರವಾಗ ತೊಡಗಿತ್ತು . ವಿಡಿಯೋ ಕಾಲ ಮಾಡಿ ಒಬ್ಬರನೊಬ್ಬರು ನೋಡಿ ಗಂಟೆಗಟ್ಟಲೆ ಮಾತಾಡುವುದು ಅಭ್ಯಾಸ ಮಾಡಿ ಕೊಂಡರು.
ಹೀಗೆ ದಿನ ಕಳೆದಂತೆ ಮದುವೆ ಮಾಡಿ ಕೊಳ್ಳುವ ನಿರ್ಧಾರ ಮಾಡಿದರು.ಆರತಿ ಮನೆಯಲ್ಲಿ ತಮ್ಮ ತಂದೆ ತಾಯಿಯ ಹತ್ತಿರ ಮದುವೆ ಪ್ರಸ್ತಾಪ ಮಾಡಿದಳು.
” ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಅವನ ಹೆಸರು ವಿನಯ್ “ಮದುವೆಯಾದರೆ ಅವನನ್ನೇ ಮದುವೆಯಾಗುವುದು ಇಲ್ಲಾಂದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು .
ತಂದೆ ತಾಯಿ ವಿಚಾರ ಮಾಡಿ ಆಯ್ತು ಹುಡುಗನನ್ನು ನಾಳೆ ಮನೆಗೆ ಕರೆದುಕೊಂಡು ಬಾ ಎಂದು ಹೇಳಿದರು.
ತಂದೆ ತಾಯಿ ಒಪ್ಪಿಗೆಯಂತೆ ವಿನಯನನ್ನು ಕರೆದು ಕೊಂಡು ಬಂದಳು.
ಹುಡುಗ ನೋಡಲು ಚೆನ್ನಾಗಿ ಇದ್ದಾನೆ ಮೇಲಾಗಿ ಒಳ್ಳೆಯ ಕೆಲಸದಲ್ಲಿದ್ದಾನೆ ಎಂದು ಮಗಳ ಇಚ್ಛೆಯಂತೆ ಮದುವೆ ಮಾಡಿದರು.

ಮಾಯಾ ನಗರಿ ಮುಂಬೈನಲ್ಲಿ
ಆರತಿ ಮತ್ತು ವಿನಯ್ ದಾಂಪತ್ಯ ಜೀವನ ಒಂದು ಚಿಕ್ಕ ಮನೆಯಲ್ಲಿ ಶುರುವಾಯಿತು.
ಹೊಸ ಹೊಸದರಲ್ಲಿ ಎಲ್ಲವೂ ಸೌಖ್ಯವಾಗಿತ್ತು.
ಬರು ಬರುತ್ತಾ ವಿನಯ್ ಮನೆಗೆ ಲೇಟಾಗಿ ಬರುವುದು.
ಕೆಲಸದ ಮೇಲೆ ಊರಿಗೆ ಅಂತ ಹೇಳಿ ಎರಡೆರಡು ದಿನಗಳು ಬಾರದೆ ಇರುವುದರಿಂದ ಆರತಿಗೆ ಅನುಮಾನ ಶುರುವಾಯಿತು.
ದಿನ ದಿನವೂ ಇದರಿಂದಾಗಿ ಮನಸ್ತಾಪ ಹೆಚ್ಚಾಯ್ತು. ಇವರ ಬಗ್ಗೆ ತಿಳಿದು ಕೊಳ್ಳುವುದು ಉಚಿತ ಎಂದು ಆರತಿ
ವಿನಯನ್ ಮೇಲೆ ಒಂದು ಕಣ್ಣಿಟ್ಟಾಗ ಗೊತ್ತಾಯಿತು . ಇವನ ಇನ್ನೊಂದು ಮುಖ.
ಅವನು ಇನ್ನೊಂದು ಮನೆಗೆ ಹೋಗಿ ಬರುವುದು.
ಆ ಮನೆಯಲ್ಲಿ ಅವನ ಮೊದಲ ಹೆಂಡತಿ ಇರುವುದು.
ಅಷ್ಟೇ ಅಲ್ಲ ಒಬ್ಬ ವಿಧುವೆಯನ್ನು ಪ್ರೀತಿಸಿ ಮದುವೆಯಾಗಿದರಿಂದ ಮದುವೆ ವೇಳೆಗೆ ನಾಲ್ಕು ಜನ ಮಕ್ಕಳು ಇದ್ದವು ಎಂಬುದು ಸತ್ಯ ತಿಳಿಯಿತು.
ಇದರಿಂದ ಆರತಿ ಮನೆಯಲ್ಲಿ ದಿನ ನಿತ್ಯವೂ ಜಗಳ ರಂಪಾಟ ನಡೆಯುತ್ತಿತ್ತು.
ಒಂದು ದಿನ ಆರತಿ ತಂಗಿ ಮನೆಗೆ ಬಂದಾಗ ಮಾನವನಿಂದ ಅಕ್ಕಳ ಬಾಳಿನಲ್ಲಿ ಬಿರುಗಾಳಿ ಬೀಸಿ ಬದುಕು ಎಂತಹ ನರಕ ಆಗಿದೆ ಎಂದು ತನ್ನ ಅಕ್ಕಳನ್ನು ಕರೆದುಕೊಂಡು ಊರಿಗೆ ಬಂದಳು.
ವಿಷಯ ತಿಳಿದು ತಂದೆ ತಾಯಿ ತುಂಬಾ ನೊಂದು ಕೊಂಡರು.ಮತ್ತು ಬುದ್ದಿ ಹೇಳಿ ಕಳಿಸಬೇಕು ಎಂದು ವಿನಯನಿಗೆ ಕಾಲ ಮಾಡಿದರು.
ಆದರೆ ಈ ಸಮಸ್ಯೆಯು ಇನ್ನಷ್ಟು ಉಲ್ಬಣಗೊಂಡು ಆರತಿ ಜೀವನಕ್ಕೆ ಕುತ್ತು ಬರಬಾರದೆಂದು ನ್ಯಾಯಾಲಯ ಮೆಟ್ಟಿಲೇರುವ ಮುನ್ನ ಸಾಯಿ ಸಲಹಾ ಕೇಂದ್ರಕ್ಕೆ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಎಲ್ಲರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರತಿ ಮತ್ತು ವಿನಯ್ ಅವರ ಮನಸ್ತಾಪಕ್ಕೆ ಅಂತ್ಯ ಹಾಡಿ ಅವರಿಬ್ಬರನ್ನು ಒಂದು ಗೂಡಿಸಿ ಮತ್ತೆ ಮಧುರ ಬಾಂಧವ್ಯಕ್ಕೆ ಕಳಿಸಿದ್ದಾಯಿತ್ತು . ಆದರೆ, ಮುಂದಿನ ಇವರ ಭವಿಷ್ಯ ಏನು.ಸರಿಯಾದ ರೀತಿಯಲ್ಲಿ ಬದುಕು ಮಾಡುವರೇ ಎಂಬ ಆತಂಕವೂ ಇದ್ದೆ ಇರುತ್ತದೆ.
ಏಕೆಂದರೆ ಒಂದು ಸಲ ಒಡೆದ ಕನ್ನಡಿ ಮತ್ತೆ ಜೋಡಿಸಲು ಆಗದು ಆದರೂ ಜೋಡಿಸಿದರು ಅದು ಎಷ್ಟರ ಮಟ್ಟಿಗೆ ಹೊಂದಿರುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿರುತ್ತದೆ .
ಪ್ರೀತಿಸಿ ಮದುವೆಯಾದರೆ ಎಂತಹ ಸುಂದರ ಬದುಕು ಎನ್ನಬಹುದು ಆದರೆ ಅದರಲ್ಲಿರುವ ಮೋಸ ಅನೈತಿಕ ಸಂಬಂಧಗಳು ಹೆಣ್ಣಿನ ಬದುಕನ್ನೇ ಬಲಿ ಪಡೆಯುತ್ತೀವೆ ಎಂಬುದು ಅದರೊಳಗೆ ಬಿದ್ದ ಕುರಿಗಳಿಗೆ ಗೊತ್ತು . ಆಕರ್ಷಣೆಯ ಸೌಂದರ್ಯಕ್ಕೆ ಮನಸೋತು ಜೀವನ ಪೂರ್ತಿ ನೆಮ್ಮದಿ ಇಲ್ಲದೆ ಬದುಕಬೇಕಾಗಿದೆ ಇಂದಿನ ಆಧುನಿಕ ಶೈಲಿಯ ಯುವ ಪೀಳಿಗೆಯ ಬದುಕಿನ ಪಯಣ .
ಹಿಂದೆ ಹೀಗಿರಲಿಲ್ಲ ನಮ್ಮ ಪೂರ್ವಜರು ಮಕ್ಕಳ ಮಾತು ಕೇಳುತ್ತಿರಲಿಲ್ಲ ತಾವು ನೋಡಿದ ಕನ್ಯೆಯನ್ನು ಮದುವೆ ಮಾಡಿ ಕೊಳ್ಳುತ್ತಿದ್ದರು.
ಎರಡನೇಯ ಮಾತಿಲ್ಲ್ . ಆದರೆ ಅಲ್ಲಿ ಪ್ರೀತಿಯ ಅನುರಾಗದ ಸಂಗಮವಾಗಿತ್ತು .ತೃಪ್ತಿಕರ ಜೀವನ ಅವರದಾಗಿತ್ತು. ಮನೆಯಲ್ಲಿ ಎಲ್ಲರಿಗೂ ಹೊಂದಿ ಕೊಂಡು ಬಾಳುತ್ತಿದ್ದರು.
ಆದರೆ ಈಗ ಒಂದು ಚಿಕ್ಕ ಪೆಟ್ಟಿಗೆಯಿಂದ ಅಂದ್ರೆ ಮೊಬೈಲ್ ಇಂಟರ್ನೆಟನಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ.
ಯುಟ್ಯೂಬ್ ಚಾನೆಲ್ ನಲ್ಲಿ ಬರುವ ಅಶ್ಲೀಲ ಚಿತ್ರಗಳಿಂದ ಮೀಸೆ ಬರುವ ಮುಂಚೆಯೇ ಪ್ರೀತಿ ಪ್ರೇಮ ಪ್ರಣಯದ ಆಟ ಆಡುತ್ತಿರುವ ಇಂದಿನ ಮಕ್ಕಳು ಮನೆಯಲ್ಲಿ ಕಳ್ಳರು ಇದ್ದಂತೆ ಇದ್ದು ತಮ್ಮ ಆಟ ಆಡುತ್ತಿದ್ದಾರೆ.
ರೇಪ್ ಅಂದ್ರೆ ಏನು ಅಂತ ಗೊತ್ತಿರದ ಆ ದಿನಗಳಲ್ಲಿ ದಾಂಪತ್ಯ ಎಂಬುದು ನಾಲ್ಕು ಗೋಡೆಗಳ ಮಧ್ಯೆಯೇ ಇರುವ ಪವಿತ್ರವಾದ ಬಂಧನ ಇಂದು ಬೀದಿ ಪಾಲಾಗಿದೆ.
ಜನ್ಮ ಕೊಡುವ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಉಪಯೋಗಿಸಿ ಬಿಸಾಡುವುದು.
ಯಾವ ವಯಸ್ಸಿನವರಾದರೇನು
ಕಾಮುಕರಿಗೆ ಬೇಕು ತಮ್ಮ ಅಂಗ ಭೋಗ.
ಇಂತಹ ಜೀವನಕ್ಕೆ ಕಡಿವಾಣ ಹಾಕಬೇಕು ಅಂದ್ರೆ .
ಕೆಲವೊಂದು ಬ್ಯಾನ್ ಮಾಡಬೇಕು.
ಆಗ ಸ್ವಲ್ಪವಾದರೂ ಇಂತಹ ಹಗರಣಗಳು ಕಡಿಮೆ ಆಗಬಹುದು.

ಅಂಗೈಯಲ್ಲಿ ಅರಮನೆ ಇದ್ದಂತೆ , ಇಂದು ಅಂಗೈಯಲ್ಲಿ ಜಗತ್ತನ್ನು ನೋಡುವ ಭಾಗ್ಯ ಕಲ್ಪಿಸಿ ಕೊಡುವ ಒಂದು ಚಿಕ್ಕ ಮೊಬೈಲು. ಗಾತ್ರ ಚಿಕ್ಕದಾದರೂ ಕೆಲಸ ಬಹಳ ದೊಡ್ಡದಾಗಿದೆ.
ಇತ್ತೀಚೆಗೆ ಅಂದರೆ ಎರಡು ವರ್ಷದಿಂದ ಕೆಲವೊಂದು ಬದಲಾವಣೆ ಆಗಬೇಕಾಯಿತು.ಏಕೆಂದರೆ ಕೊರೊನಾದಿಂದ ಶಾಲಾ ಕಾಲೇಜು ಮತ್ತು ಆಫೀಸ್ ಕೆಲಸಗಳು ಮನೆಯಲ್ಲಿಯೇ ಕುಳಿತು ಮಾಡಲಾಗಿತ್ತು.
ಮಕ್ಕಳು ಶಾಲೆಗೆ ಹೋಗದ ಕಾರಣ ಆನ್ಲೈನ್ ಪಾಠಗಳು ಶುರುವಾಯಿತು. ಹೀಗಾಗಿ ಮಕ್ಕಳಿಗೆ ಮೊಬೈಲ್ ಕೊಡಿಸುವುದು ಅನಿವಾರ್ಯವಾಗಿತ್ತು .ಒಂದು ರೀತಿಯಲ್ಲಿ ಒಳ್ಳೆಯದು.
ಆದರೆ ಅದನ್ನು ಮಕ್ಕಳು ಯಾವ ರೀತಿ ಉಪಯೋಗಿಸುತ್ತಾರೆ ಎನ್ನುವುದು ಮುಖ್ಯ.ಅದಕ್ಕಾಗಿ ಮಕ್ಕಳು ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಕುಳಿತಾಗ ತಂದೆ ತಾಯಿಗಳು ಮಕ್ಕಳ ಕಡೆ ಗಮನ ಹರಿಸಿ.
ಹಳ್ಳಿಗಳಲ್ಲಿ ಅನಕ್ಷರಸ್ಥ ಹೆಣ್ಣು ಮಕ್ಕಳು ಅಕ್ಷರಾಭ್ಯಾಸ ಇಲ್ಲದಿದ್ದರೂ ಅದರೊಳಗಿರುವ ಚಿತ್ರಗಳು ನೋಡಿ ತಿಳಿದುಕೊಳ್ಳಬಹುದು.ಮತ್ತು ಮಕ್ಕಳು ಏನು ಮಾಡುತ್ತಿದ್ದಾರೆ.
ಅವರ ಹಾವ ಭಾವ ತಿಳಿದು ಕೊಳ್ಳುವುದರಿಂದ ಮುಂದೆ ಆಗುವ ಅನಾಹುತಗಳು ತಪ್ಪಿಸಬಹುದು.ಅದಕ್ಕಾಗಿ ಹಳ್ಳಿಯ ಹೆಣ್ಣು ಮಕ್ಕಳು ಮೊಬೈಲ್ ಬಳಕೆ ಮಾಡಿ ಏನಿದೆ ಎಂದು ತಿಳಿದು ಕೊಳ್ಳುವುದು ಒಳ್ಳೆಯದು.ಮತ್ತು ತಾವು ಕೂಡ ಮೊಬೈಲ್ ಬಳಕೆ ಮಾಡುವುದು ಕಲಿಯಬೇಕು.
ಕಲಿಯುವುದರಿಂದ ಅನುಕೂಲವಿದೆ.
ಉತ್ತಮ ರೀತಿಯಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಹಲವಾರು ವಿಷಯಗಳು ತಿಳಿದು ಕೊಳ್ಳಲು ಸಾಧ್ಯವಾಗುವುದು.
ಅದಕ್ಕಾಗಿ ಆದಷ್ಟು ಮಕ್ಕಳ ಮೇಲೆ ನಿಗಾ ವಹಿಸಬೇಕು.
ಹೆಚ್ಚಿನ ಮೊಬೈಲ್ ಒಡನಾಟದಲ್ಲಿ ಹೊಂದಿರುವ ಮಕ್ಕಳಲ್ಲಿ ಜಾಗೃತಿ ಮೂಡಿಸಿ.
ಇದು ಎಲ್ಲಾ ತಂದೆ ತಾಯಿಯರ ಕರ್ತವ್ಯವಾಗಿದೆ.
ಮೊಬೈಲ್ ಬಳಸುವುದು ತಪ್ಪಲ್ಲ ಆದರೆ ಅದರಿಂದಾಗಿ ಮಕ್ಕಳ ಭವಿಷ್ಯ ಹಾಳಾಗಬಾರದೆಂದು ತಮ್ಮ ತಮ್ಮ ಮಕ್ಕಳ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು” ಸಾಯಿ ಸಲಹಾ ಕೇಂದ್ರದ ಸಂಸ್ಥಾಪಕರಾದ ಶ್ರೀಮತಿ ವಿಜಯಲಕ್ಷ್ಮೀ ಧಾರವಾಡಕರ್ ಅವರು ಪಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನೈಜ ಘಟನೆಗಳನ್ನು ಆಧರಿಸಿದ ಸಂಕ್ಷಿಪ್ತವಾಗಿ ಬರೆದ ಲೇಖನ
ಕಥೆಯಲ್ಲ್ ನಿಜವಾದ ಜೀವನ.

ಜ್ಞಾನ ದೀವಿಗೆ ಅಭಿವೃದ್ಧಿ ಸಂಸ್ಥೆ( ರಿ )
ಶ್ರೀಮತಿ ಅಮರಾವತಿ ಹಿರೇಮಠ
🙏🙏

Related Articles

Leave a Reply

Your email address will not be published. Required fields are marked *

Back to top button