ಟಿಪಿಇಎಂ ಮತ್ತು ಟಿಎಂಪಿವಿ ಹಾಗೂ ಬಜಾಜ್ ಫೈನಾನ್ಸ್ ನಡುವೆ ಮಹತ್ವದ ಒಪ್ಪಂದ.
Passenger Electric Mobility Ltd. and Director, Tata Motors Passenger Vehicles Ltd. and Mr. Siddhartha Bhatt, Chief Business Officer, Bajaj Finance Ltd. ಟಾಟಾದ ಪ್ರಯಾಣಿಕ ಮತ್ತು ಎಲೆಕ್ಟಿçಕ್ ವಾಹನಗಳ ಡೀಲರ್‌ಗಳಿಗೆ “ಹಣಕಾಸು ಸೌಲಭ್ಯ ಯೋಜನೆಗೆ” ಚಾಲನೆ
• ಟಿಪಿಇಎಂ ಮತ್ತು ಟಿಎಂಪಿವಿ ಹಾಗೂ ಬಜಾಜ್ ಫೈನಾನ್ಸ್ ನಡುವೆ ಮಹತ್ವದ ಒಪ್ಪಂದ
ಬೆAಗಳೂರು, ೨೨ ಮೇ ೨೦೨೪ : ಭಾರತದಲ್ಲಿ ಸಾರಿಗೆ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟರ್ಸ್ನ ಅಂಗಸAಸ್ಥೆಗಳಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (TMPV) ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟಿçಕ್ ಮೊಬಿಲಿಟಿ (TPEM) ಸಂಸ್ಥೆಗಳು ತಮ್ಮ ಡೀಲರ್‌ಗಳಿಗೆ ಆಯ್ಕೆಗಳನ್ನು ಸುಧಾರಣೆ ಮಾಡುವುದು ಮತ್ತು ಹಣಕಾಸು ವ್ಯವಸ್ಥೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಭಾರತದಲ್ಲಿನ ಪ್ರಮುಖ ಮತ್ತು ಅತ್ಯಂತ ವೈವಿಧ್ಯಮಯ ಹಣಕಾಸು ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್ ಫೈನ್‌ಸರ್ವ್ ಲಿಮಿಟೆಡ್‌ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿವೆ. ಈ ಸಹಭಾಗಿತ್ವದ ಮೂಲಕ ಬಜಾಜ್ ಫೈನ್‌ಸರ್ವ್ ಲಿಮಿಟೆಡ್ ಟಾಟಾ ಪ್ಯಾಸೆಂಜರ್ ಮತ್ತು ಎಲೆಕ್ಟಿçಕ್ ವಾಹನಗಳ ಡೀಲರ್‌ಗಳಿಗೆ ಹಣಕಾಸು ಪರಿಹಾರಗಳನ್ನು ಪೂರೈಕೆ ಮಾಡಲಿದೆ. ಈ ಒಪ್ಪಂದದ ಹಿನ್ನೆಲೆಯಲ್ಲಿ ಟಿಎಂಪಿವಿ ಮತ್ತು ಟಿಪಿಇಎಂ ಡೀಲರ್‌ಗಳಿಗೆ ಹಣಕಾಸು ಸೌಲಭ್ಯವನ್ನು ಬಜಾಜ್ ಫೈನಾನ್ಸ್ನ ವ್ಯಾಪಕವಾಗಿರುವ ಜಾಲದ ಮೂಲಕ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ.
ಈ ಮಹತ್ವದ ಒಪ್ಪಂದಕ್ಕೆ ಟಾಟಾ ಪ್ಯಾಸೆಂಜರ್ ಎಲೆಕ್ಟಿçಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ನಿರ್ದೇಶಕ ಧೀಮನ್ ಗುಪ್ತಾ ಹಾಗೂ ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ಮುಖ್ಯ ವ್ಯವಹಾರ ಅಧಿಕಾರಿ ಸಿದ್ಧಾರ್ಥ ಭಟ್ ಅವರು ಪರಸ್ಪರ ಸಹಿ ಹಾಕಿದರು.
ಈ ಪಾಲುದಾರಿಕೆ ಬಗ್ಗೆ ಮಾತನಾಡಿದ ಟಾಟಾ ಪ್ಯಾಸೆಂಜರ್ ಎಲೆಕ್ಟಿçಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ನಿರ್ದೇಶಕ ಧೀಮನ್ ಗುಪ್ತಾ ಅವರು, “ನಮ್ಮ ಡೀಲರ್ ಪಾಲುದಾರರು ನಮ್ಮ ವ್ಯವಹಾರದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ತಮ್ಮ ವ್ಯವಹಾರವನ್ನು ಸುಲಭವಾಗಿ ಮುನ್ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರಿಗೆ ನೆರವಾಗುವ ಪರಿಹಾರಗಳನ್ನು ನೀಡುವುದಕ್ಕೆ ನಮಗೆ ಸಂತಸವಾಗುತ್ತಿದೆ. ನಾವು ಒಟ್ಟಾಗಿ ಸೇರಿ ಮಾರುಕಟ್ಟೆಯನ್ನು ಇನ್ನಷ್ಟು ಬೆಳವಣಿಗೆಯಾಗುವಂತೆ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಅಲ್ಲದೇ, ನಮ್ಮ ಹೊಸ ನಿರಂತರ ಪೋರ್ಟ್ಫೋಲಿಯೋದ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡುತ್ತಿದ್ದೇವೆ. ಈ ಎಲ್ಲವನ್ನೂ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹಣಕಾಸು ಸೌಲಭ್ಯವನ್ನು ಒದಗಿಸಲು ಬಜಾಜ್ ಫೈನಾನ್ಸ್ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ಸಂತಸ ಮತ್ತು ಹೆಮ್ಮೆ ಎನಿಸುತ್ತಿದೆ. ಈ ನಮ್ಮ ಪಾಲುದಾರಿಕೆಯು ನಮ್ಮ ಡೀಲರ್‌ಗಳ ಬಂಡವಾಳ ಹೂಡಿಕೆ ಪ್ರಮಾಣವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಲಿದೆ’’ ಎಂದರು.
ಈ ಬಗ್ಗೆ ಮಾತನಾಡಿದ ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ಮುಖ್ಯ ವ್ಯವಹಾರ ಅಧಿಕಾರಿ ಸಿದ್ಧಾರ್ಥ ಭಟ್ ಅವರು, “ಬಜಾಜ್ ಫೈನಾನ್ಸ್ನಲ್ಲಿ ನಾವು ವ್ಯಕ್ತಿಗಳಿಗೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ನೆರವಾಗುವ ನಿಟ್ಟಿನಲ್ಲಿ ಅತ್ಯುತ್ತಮ ದರ್ಜೆಯ ಹಣಕಾಸು ಪರಿಹಾರಗಳನ್ನು ನೀಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಬದ್ಧತೆಯನ್ನು ಹೊಂದಿದ್ದೇವೆ. ನಮ್ಮ ಈ ಹಣಕಾಸು ಕಾರ್ಯಕ್ರಮದ ಮೂಲಕ ಟಿಎಂಪಿವಿ ಮತ್ತು ಟಿಪಿಇಎಂನ ಅಧಿಕೃತ ಪ್ಯಾಸೆಂಜರ್ ಮತ್ತು ಎಲೆಕ್ಟಿçಕ್ ವೆಹಿಕಲ್ ಡೀಲರ್‌ಗಳಿಗೆ ಆರ್ಥಿಕ ಬಂಡವಾಳದ ನೆರವನ್ನು ನೀಡಿ ಬೆಳೆಯುತ್ತಿರುವ ಪ್ರಯಾಣಿಕ ವಾಹನಗಳ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸಾಧನೆ ತೋರುವಂತೆ ಮಾಡುವ ಆಶಯ ಹೊಂದಿದ್ದೇವೆ. ನಮ್ಮ ಈ ಪಾಲುದಾರಿಕೆ ಕೇವಲ ಡೀಲರ್‌ಗಳಿಗೆ ಮಾತ್ರವಲ್ಲದೇ, ಭಾರತದ ಸಾರಿಗೆ ಉದ್ಯಮದ ಬೆಳವಣಿಗೆಯನ್ನು ಹೆಚ್ಚು ಮಾಡುವಲ್ಲಿ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದು ತಿಳಿಸಿದರು.
ಐಸಿಇ ಮತ್ತು ಇವಿ ವಿಭಾಗಗಳಲ್ಲಿ ಅತ್ಯಮೋಘ ಸಾಧನೆ ಮಾಡುವ ಮೂಲಕ ಟಿಎಂಪಿವಿ ಮತ್ತು ಟಿಪಿಇಎಂ ಭಾರತೀಯ ಸಾರಿಗೆ ವಾಹನಗಳ ಮಾರುಕಟ್ಟೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ. ತನ್ನ ನ್ಯೂ ಫಾರ್‌ಎವರ್ ತತ್ತ÷್ವದ ಆಧಾರದಲ್ಲಿ ಪ್ರಮುಖ ಉತ್ಪನ್ನಗಳನ್ನು ಅಂದರೆ ವಾಹನಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.
ಬಜಾಜ್ ಫೈನಾನ್ಸ್ ಭಾರತದ ಅತ್ಯಂತ ವೈವಿಧ್ಯಮಯ ಎನ್‌ಬಿಎಫ್‌ಸಿಗಳಲ್ಲಿ ಒಂದಾಗಿದೆ. ಸಂಸ್ಥೆಯು ದೇಶಾದ್ಯಂತ ೮೩.೬೪ ದಶಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಸಾಲ, ಠೇವಣಿ ಮತ್ತು ಪಾವತಿ ಸೇವೆಗಳನ್ನು ನೀಡುತ್ತಿದೆ. ಮಾರ್ಚ್ ೩೧, ೨೦೨೪ ಕ್ಕೆ ಕಂಪನಿಯ ವ್ಯವಹಾರ ೩,೩೦,೬೧೫ ಕೋಟಿ ರೂಪಾಯಿಗಳಷ್ಟಿತ್ತುವರದಿ. ಮಂಜುಳಾ ರೆಡ್ಡಿ



