ಸುದ್ಧಿ

ಪ್ರಧಾನಿ ನೆಹರು ಅವರ ಪುಣ್ಯಸ್ಮರಣೆ….ಕೆಪಿಸಿಸಿ ಕಚೇರಿಯಲ್ಲಿ. ಬೆಂಗಳೂರು.

ಭಾರತದ ಮೊದಲ ಪ್ರಧಾನಿ ನೆಹರು ಅವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಮುಖಂಡರ ಮಾತುಗಳು

ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರ ಮಾತುಗಳು

ಆಧುನಿಕ ಭಾರತ ದೇಶದ ನಿರ್ಮಾತೃ. ಜಾತ್ಯಾತೀತ ತತ್ವಕ್ಕೆ ಗೌರವ ಕೊಟ್ಟ ಮಹಾನ್ ನಾಯಕ. ಧರ್ಮ ನಿರಪೇಕ್ಷತೆಯನ್ನು ಎತ್ತಿ ಹಿಡಿದವರು. ಡಿಸ್ಕವರಿ ಆಫ್ ಇಂಡಿಯಾ ಮತ್ತು ಗ್ಲಿಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ಪ್ರಪಂಚದಲ್ಲೇ ಪ್ರಸಿದ್ದವಾದ ಪುಸ್ತಕಗಳು ಇವು.

ಸ್ವತಂತ್ರ ಬಂದ ಹೊತ್ತಿನಲ್ಲಿ ಅನೇಕ ಕೋಮು ಗಲಭೆ ನಡೆಯುತ್ರಿದ್ದವು. ಈ ವೇಳೆ ಗಲಭೆ ನಡೆದ ಜಾಗಕ್ಕೆ ಹೋಗಿ ಯಾರನ್ನು ಹೊಡೆಯಬೇಕಾದರೂ ಮೊದಲು ನನ್ನನ್ನು ಹೊಡೆಯಿರಿ ಎಂದು ಗಲಭೆ ನಿಲ್ಲಿಸಲು ಪ್ರಯತ್ನ ಮಾಡಿದವರು.

ನೆಹರು ಅವರು ಏನೂ ಮಾಡಿಲ್ಲ ಎಂದು ಸುಳ್ಳು ಹೇಳಲಾಗುತ್ತಿದೆ. ಮುಂದಿನ ಜನಾಂಗದವರು ನೆಹರು ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಅವರ ಕೆಲಸಗಳ ಬಗ್ಗೆ ಅಧ್ಯಯನ ಮಾಡಬೇಕು.

ಕಾಂಗ್ರೆಸ್ ಕಾರ್ಯಕರ್ತರು ನೆಹರು ಅವರು ಮಾಡಿರುವ ಕೆಲಸಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಮುಂದಿನ ಜನಾಂಗಕ್ಕೆ ಇವರ ಕೆಲಸಗಳು ತಲುಪುವಂತೆ ಮಾಡಬೇಕು.

ನೆಹರು ಬಿತ್ತಿದ ಬೀಜಗಳು ಇಂದು ಮರವಾಗಿ ಬೆಳೆದಿವೆ. ಆ ಮರಗಳನ್ನು ನಾವು ಕಾಪಾಡಬೇಕು. ನಮ್ಮ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ನಾವುಗಳು ನೆಹರು ಅವರ ಹಾದಿಯಲ್ಲಿ ನಡೆಯೋಣ.

ಸಚಿವ ದಿನೇಶ್ ಗುಂಡೂರಾವ್ ಅವರ ಮಾತುಗಳು

ದೆಶದ ಸಾಮಾಜಿಕ ಅಂತರಂಗದ ಶಕ್ತಿಯನ್ನು ಜಗತ್ತಿಗೆ ತೊರಿಸಿದವರು. ಇವರದು ಅತ್ಯಂತ ವೈಜ್ಞಾನಿಕವಾಗಿ ಮುಂದಕ್ಕೆ ತರಲು ಪ್ರಯತ್ನ ಪಟ್ಟವರು. ನೆಹರು ಅವರನ್ನು ಟೀಕೆ ಮಾಡುವವರು ಸ್ವಾತಂತ್ರ್ಯ ಹೋರಾಟದಲ್ಲು ಭಾಗವಹಿಸದೆ ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಬಿಟ್ಟವರು.

ಆರ್ ಎಸ್ ಎಸ್, ಹಿಂದೂ ಮಹಾಸಭಾಗಳ ನಿಜ ಬಣ್ಣವನ್ನು ಬಯಲಿಗೆ ಎಳೆದವರು ನೆಹರು. ನೆಹರು ಅವರನ್ನು ಟೀಕಿಸುವ ಹಕ್ಕು ಇವರಿಗೆ ಇಲ್ಲ. ಇವರು ಕೇವಲ ಪ್ರಧಾನಿಗಳಲ್ಲ ತತ್ವಜ್ಞಾನಿ, ಇತಿಹಾಸಕಾರ, ಹೋರಾಟಗಾರ ಬಹುಮುಖ ಪ್ರತಿಭೆಯುಳ್ಳ ನಾಯಕ.

ಜೈಲಿನಲ್ಲಿ ಇದ್ದಾಗ ಇಂದಿರಾ ಗಾಂಧಿ ಅವರಿಗೆ ಪತ್ರ ಬರೆದು ಅದರ ಮೂಲಕ ಪ್ರಪಂಚದ ಆಗು ಹೋಗುಗಳ ಬಗ್ಗೆ ಬರೆದು ಜ್ಞಾನ ನೀಡಿದವರು. ಭಗತ್ ಸಿಂಗ್ ಅವರು ಸಹ ನೆಹರು ಅವರ ಅಭಿಮಾನಿ.

ದೇಶದ ಜನರಿಗೆ ಆಕರ್ಷಕ ಶಕ್ತಿ ಇವರು. ಇವರ ಮಾತುಗಳು ಜನರನ್ನು ಹೆಚ್ಚು ಸೆಳೆಯುತ್ತಿದ್ದವು. ರೋಮಾಂಚನಕಾರಿ ಭಾಷಣಕಾರ ಇವರು.

ದೇಶದ ಘನತೆಯನ್ನು ತಮ್ಮ ಆಡಳಿತದ ಮೂಲಕ ಹೆಚ್ಚು ಮಾಡಿದವರು. ಅಭಿವೃದ್ಧಿಯ ಮಂತ್ರ ಜಪಿಸಿದವರು. ಸಾವರ್ಕರ್ ರೀತಿ ಬ್ರಿಟಿಷರ ಬಳಿ ಕ್ಷಮೆ ಕೇಳಲಿಲ್ಲ. ಹಿಂದೂಮಹಾಸಭಾ ಈ ದೇಶದ ಚುಕ್ಕಾಣಿ ಹಿಡಿದಿದ್ದರೆ ಕಾಶ್ಮೀರ ಈ ದೇಶದ ಭಾಗ ಆಗುತ್ತಿರಲಿಲ್ಲ. ನೆಹರು ಇದ್ದ ಕಾರಣ ಕಾಶ್ಮೀರ ನಮ್ಮ ದೇಶಕ್ಕೆ ಸೇರಿತು.

ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ

ನೆಹರು ಅವರು ಕೇವಲ ಈ ದೇಶದ ಮೊದಲ ಪ್ರಧಾನಿ ಮಾತ್ರವಲ್ಲ. ಈ ದೇಶವನ್ನು ಕಟ್ಟಿದ ಶಿಲ್ಪಿ. ದೇಶದ ಸಮತೋಲನ ಅಭಿವೃದ್ಧಿಗೆ ಇವರು ತೆಗೆದುಕೊಂಡ ನಿರ್ಧಾರ ಗಳು ಮಹತ್ವ ಹೊಂದಿವೆ. ಅವರ ತೀರ್ಮಾನಗಳು, ಆಡಳಿತ ನಿರ್ಧಾರಗಳು ಅವರನ್ನು ನಾವು ಸ್ಮರಣೆ ಮಾಡಲೇಬೇಕು ಅಷ್ಟರ ಮಟ್ಟಿಗೆ ಅವರ ಕೆಸಲಸಗಳು ದೇಶವನ್ನು ಕಟ್ಟಲು ನೆರೆವಾಗಿವೆ. ಈ ದೇಶಕ್ಕೆ ಸಂವಿಧಾನ ಸೇರಿದಂತೆ ಅನೇಕ ಕೊಡುಗೆಗಳನ್ನು ನೆಹರು ಅವರು ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುಳ ನಾಯ್ಡು ಅವರ ಮಾತುಗಳು

ನಾಯಕತ್ವಕ್ಕೆ ನೆಹರು ಅವರೇ ಸ್ಪೂರ್ತಿ. ಅವರ ಜೀವನವೇ ನಮಗೆ ಸಂದೇಶ. ಅವರು ಮಾಡಿದ ಕೆಲಸಗಳು ದೇಶವನ್ನು ಬಲಿಷ್ಠ ಮಾಡಿವೆ. ಅವರ ಕೆಲಸ, ಸಾಧನೆಗಳನ್ನು ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಐಐಟಿ, ಬಿಇಎಲ್, ಎಚ್ ಎಎಲ್ ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಟ್ಟಿದವರು. ನಾವೆಲ್ಲಾ ನೆಹರು ಅವರ ಹೆಸರನ್ನು ಉಳಿಸುವ ಪ್ರಯತ್ನ ಮಾಡೋಣ .

ದೇಶದ ಒಗ್ಗೂಡಿಸುವ ಕೆಲಸ ಮಾಡಿದವರು ನೆಹರು. ಕೇವಲ ಗಡಿಗಳನ್ನು ಒಗ್ಗೂಡಿಸಲಿಲ್ಲ. ಜನರ ಜೀವನ ಒಗ್ಗೂಡಿಸಿದರು. ಇವರು ತಂದ ಪಂಚ ವಾರ್ಷಿಕ ಯೋಜನೆಗಳನ್ನು ಮೋದಿ ಸರ್ಕಾರ ಹಾಳು ಮಾಡಿದೆ, ಪ್ರಜಾಪ್ರಭುತ್ವ ವನ್ನು ಹಾಳುಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಈ ಹುನ್ನಾರಗಳನ್ನು ಅರಿಯಬೇಕು. ದೇಶದ ಸಾರ್ವಭೌಮತ್ವ ಉಳಿಯಲು ಕೆಲಸ ಮಾಡಬೇಕು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button