ಮಡಿವಾಳ ಸಮಾಜದ ಅರ್ಹ ವ್ಯಕ್ತಿಗೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು – ಸಿ. ನಂಜಪ್ಪ.
ಮಡಿವಾಳ ಸಮಾಜದ ಅರ್ಹ ವ್ಯಕ್ತಿಗೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಡಬೇಕು – ಸಿ. ನಂಜಪ್ಪ
ಬೆಂಗಳೂರು .ಮಡಿವಾಳ ಸಮಾಜದ ಅರ್ಹ ವ್ಯಕ್ತಿಗೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಡಬೇಕು – ಸಿ. ನಂಜಪ್ಪ ನಾವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕಾಂಗ್ರೆಸ್ ಪಕ್ಷ ವನ್ನು ಡಿಮ್ಯಾಂಡ್ ಮಾಡಿದರು. ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯವಾಗಿದೆ. ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಹಿಂದುಳಿದಿರುವಿಕೆ, ಆರ್ಥಿಕ ದುರ್ಬಲತೆ, ಕಡಿಮೆ ಪ್ರಮಾಣದ ಜನಸಂಖ್ಯೆ ಹಾಗೂ ರಾಜಕೀಯ ಪ್ರಾತಿನಿಧ್ಯ ಮತ್ತು ಸ್ಥಾನಮಾನ ಇಲ್ಲದಿರುವುದು ಈ ಸಮುದಾಯ ಹಿಂದುಳಿಯಲು ಪ್ರಮುಖ ಕಾರಣಗಳಾಗಿವೆ.
ಸ್ವಾತಂತ್ರ್ಯಾ ನಂತರದ 77 ವರ್ಷಗಳ ಬಳಿಕವೂ ಸಹ ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯಕ್ಕೆ ಯಾವುದೇ ರೀತಿಯ ರಾಜಕೀಯ ಪ್ರಾತೀನಿಧ್ಯ ಹಾಗೂ ಸ್ನಾನಮಾನ ಲಭೀಸದಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ವರ್ತಮಾನದಲ್ಲಿನ ಚುನಾವಣೆ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡ ಹಾಗೂ ಬಲಾಡ್ಯ ಸಮುದಾಯಗಳ ನಡುವೆ ಸೆಣಸಾಡಿ ರಾಜಕೀಯ ಪ್ರಾತೀನಿಧ್ಯ ಪಡೆಯುವುದು ಅತ್ಯಂತ ಸಣ್ಣ ಸಮುದಾಯವಾದ ಮಡಿವಾಳ ಸಮಾಜಕ್ಕೆ ಸಾಧ್ಯವಿಲ್ಲದ ಸಂಗತಿಯಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾದ ನಂತರ ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆತದ್ದು ಅತೀ ವಿರಳ ಹಾಗೂ ಅಲ್ಪ ಮಾತ್ರ 1980 ರಲ್ಲಿ ಜನತಾ ಪಕ್ಷದಿಂದ ಮಡಿವಾಳ ಸಮುದಾಯದ ವಿದ್ಯಾಧಾರ ಗುರುಜಿಯವರನ್ನು ಎಂ.ಎಲ್.ಸಿ. ಮಾಡಲಾಗಿತ್ತು. ತದನಂತರ 2008 ರಲ್ಲಿ ಶ್ರೀ ಎನ್. ಶಂಕರಪ್ಪ ರವರನ್ನು ಬಿಜೆಪಿ ಪಕ್ಷವು ಎಂ.ಎಲ್.ಸಿ. ಯಾಗಿ ಮಾಡಿತ್ತಾದರೂ ಕೇವಲ 2 ವರ್ಷಗಳಲ್ಲಿ ಅವರ ಸ್ಥಾನಪಲ್ಲಟ್ಟ ಮಾಡುವ ಮೂಲಕ ಮಡಿವಾಳ ಜನಾಂಗದ ರಾಜಕೀಯ ಪ್ರಾತೀನಿಧ್ಯವನ್ನು ಕಸಿದುಕೊಂಡಿತ್ತು. ತದನಂತರ ಮಡಿವಾಳ ಸಮುದಾಯಕ ಯಾವುದೇ ರಾಜಕೀಯ ಸ್ಥಾನಮಾನ ಲಭ್ಯವಾಗಿರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಇದುವರೆವಿಗೂ ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತೀನಿಧ್ಯ ದೊರೆತಿರುವುದಿಲ್ಲ. ಈ ಜನಾಂಗದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಾತೀನಿಧ್ಯದ ಅವಶ್ಯಕತೆ ಇರುತ್ತದೆ. ಆದ್ದರಿಂದ, ಪುಸ್ತುತ ನಡೆಯುತ್ತಿರುವ ಎಂ.ಎಲ್.ಸಿ. ನಾಮ ನಿರ್ದೇಶನದಲ್ಲಿ ಮಡಿವಾಳ ಜನಾಂಗ ಅರ್ಹ ವ್ಯಕ್ತಿಯೊಬ್ಬರಿಗೆ ಪ್ರಾತೀನಿಧ್ಯ ನೀಡಬೇಕೆಂದು ಸಮಸ್ತ ಮಡಿವಾಳ ಜನಾಂಗದ ಪರವಾಗಿ ನಿವೇದಿಸಿಕೊಳ್ಳುತ್ತೇನೆ ಎಂದು ಸಿ. ನಂಜಪ್ಪ ನವರೂ ತಿಳಿಸಿದರು . ವರದಿ. ಮಂಜುಳಾ ರೆಡ್ಡಿ.




