ಸುದ್ಧಿ

ಜಾತ್ಯಾತೀತ, ಪಕ್ಷಾತೀತ, ಧರ್ಮಾತೀತ, ಯುವ ನಾಯಕ ಯು.ಟಿ. ಖಾದರ. ವಿಧಾನಸಭಾ ಸ್ಪೀಕರ್ ರವರು.

ಜಾತ್ಯಾತೀತ, ಪಕ್ಷಾತೀತ, ಧರ್ಮಾತೀತ, ಯುವ ನಾಯಕ ಯು.ಡಿ ಖಾದರ. ವಿಧಾನಸಭಾ ಸ್ಪೀಕರ್ರವರು ಒಡಲಾಳದ ಭಾವನೆ ಮಡಿಲಲ್ಲಿಟ್ಡುಕೊಂಡು ಮಾತನ್ನಾಡುವ ಗಂಭೀರ ಸ್ಖಾಭಾವದ ಖಾದರ್ ಭಾಯ್, ಮಾನವೀಯತೆಯ ನೆಲೆಯಲ್ಲಿ ಯೋಚಿಸುವಂಥಹ ಪ್ರಜ್ಞಾವಂತ ನಾಗರಿಕರಿಗೆ ಬಲು ಅಚ್ಚು- ಮೆಚ್ಷು. ವಿಧಾನ ಸಭಾ ಸ್ಪೀಕರ್ ಆಗಿ ಪಕ್ಷಾತೀತವಾಗಿ ನಡೆದುಕೊಳ್ಳುವ ಖಾದರ್ ಭಾಯ್ ಮಾನವೀಯ ನೆಲೆಗಟ್ಟಿನಲ್ಲಿ ಮಾನವ ಜನಾಂಗಕ್ಕೆ ಮರ್ಯಾದೆ ಕೊಡುವ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿದ್ದು, ಕಾಲ ಕಾಲಕ್ಜೆ ಅದನ್ನು ರುಜುವಾತು ಪಡಿಸುತ್ತಿದ್ದಾರೆ.

(೧) ಕಳೆದ ಕೆಲ ತಿಂಗಳ ಹಿಂದೆ ವಿಧಾನಸೌಧದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಕೆಲ ದೇಶ ದ್ರೋಹಿಗಳ ಬಗ್ಗೆ ಮಾತನ್ನಾಡುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೋಪಾವೇಶದಲ್ಲಿ ” ದೇಶ ವಿರೋಧಿ ಘೋಷಣೆ ಕೂಗಿದ ಮಧಾಂಧರನ್ನು ಗಲ್ಲಿಗೇರಿಸಬೇಕು ಹಾಗೆ ಮಾಡಬೇಕು ಹೀಗೆ ಮಾಡಬೇಕು ” ಎಂದು ರೋಷಾವೇಶದಿಂದ ಮಾತನ್ನಾಡುತ್ತಿದ್ದಾಗ ಕಾಂಗೈನ‌ ಕುನ್ನಿಯೊಂದು ಅಡ್ಡ ಬಾಯಿ ಹಾಕಿತು ಮತ್ತು ಆ ಘಟನೆಯನ್ನು ಅಪರೋಕ್ಷವಾಗಿ ಸಮರ್ಥಿಸಲು ವರಹಾವತಾರದೊಂದಿಗೆ ಎದ್ದು ನಿಂತು ತನ್ನ ಬಾಲೀಷ ತೊದಲು ನುಡಿಯೊಂದಿಗೆ ಏನೇನೋ ಪುಂಗಲಾರಂಭಿಸಿದಾಗ, ಸ್ಪೀಕರ ಯು.ಟಿ.ಖಾದರ್. ಅವರು ಕಾಂಗೈನ ಆ ಶಾಸಕರ ಕುರಿತು ” ಬಸನಗೌಡ ಪಾಟೀಲ ಯತ್ನಾಳ ಅವರು ದೇಶ ದ್ರೋಹಿಗಳ ಕುರಿತು ಮಾತನ್ನಾಡುತ್ತಿದ್ದಾರೆ, ದೇಶ ದ್ರೋಹಿಗಳಿಗೆ ಬೈತಿದ್ದಾರೆ ಅದರಿಂದ ನಿಮಗ್ಯಾಕೆ ಕೋಪ? ಪಾಟೀಲರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ದೇಶ ದ್ರೋಹಿಗಳ ವಿರುದ್ಧ ಹೇಳುತ್ತಿದ್ದಾರೆ ನಿಮಗೇಕೆ ಭಾದೆ? ಪಾಟೀಲರಿಗೆ ಮಾತನ್ನಾಡಲು ಬಿಡಿ. ” ಎಂದು ತರಾಟೆಗೆ ತೆಗೆದುಕೊಂಡರು. ಅಂದರೇ ದೇಶ ದ್ರೋಹಿ ಕೆಲಸ ಮಾಡುವ ವ್ಯಕ್ತಿ ಯಾವ ಧರ್ಮದವನಾಗಿದ್ದರೂ ಅವರ ಪರವಾಗಿ ಮಾತನ್ನಾಡುವುದು ತಪ್ಪು ಎಂಬ ಸಂದೇಶ ಅಂದಿನ ವಿಧಾನಸಭೆಯ ಕಾರ್ಯ ಕಲಾಪದ ಸಂದರ್ಭದಲ್ಲಿ ತೋರಿಸಿಕೊಟ್ಟ ಸಮಾಜವಾದಿ, ಸಮತಾವಾದಿಯಿವರು

(೨) ಅಂದು ಕರಾವಳಿ ಪ್ರದೇದಲ್ಲಿ ಶಾಲಾ ಸಮವಸ್ತ್ರದ ಕಿಚ್ಷು ಹೊತ್ತಿಕೊಂಡಾಗಲೂ ದೇಶದ ಕಾನೂನು, ಸಂವಿಧಾನ, ಬಗ್ಗೆ ಮಾತಾಡಿದ ವ್ಯಕ್ತಿ ಇದೇ ಥರಹ ಹಲವಾರು ಸಮಾಜೋಪಯೋಗಿ ಸಮ ಸಮಾಜದ ಬಗ್ಗೆ ಕಾಲ ಕಾಲಕ್ಕೆ ಮಾತನ್ನಾಡುವ ಇವರು, ಮಾನವಾನುಕಂಪವಿರುವ ವ್ಯಕ್ತಿಗಳ ಮೆಚ್ಚಿನ ವ್ಯಕ್ತಿ.


(೩) ಬೋಳಿಯಾರಿನಲ್ಲಿ ನಡೆದ ಪ್ರಕರಣದಲ್ಲಿ ರಾಜಕೀಯ ಮಾಡಿದರೆ ಯಾರಿಗೂ ಒಂದು ಮತವೂ ಹೆಚ್ಚಾಗದು. ಎರಡೂ ಪಕ್ಷದವರು ಸೇರಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರೂ ಆಗಿಲ್ಲ. ಇಂಥಹ ವಿಚಾರಗಳಲ್ಲಿ ರಾಜಕೀಯ ಮಾಡಿ ಸಮಸ್ಯೆ ಸೃಷ್ಠಿಸುವವರುವ ನಿಜವಾದ ದೇಶದ್ರೋಹಿಗಳು. ಎಂದಿರುವ ಯು.ಟಿ.ಖಾದರ್ ಅವರು ನಿಜವಾದ ಭಾರತೀಯರು, ಜಾತ್ಯಾತೀತರು ಎನ್ನಬಹುದಲ್ಲವೇ? ಇಂಥಹ ವ್ಯಕ್ತಿಗಳ ಬೆನ್ನಿಗೆ ನಿಂತು ಬೆಂಬಲಿಸುವುದರಿಂದ ಜಾತ್ಯಾತೀತ ಭಾರತ ದೇಸ ಕಟ್ಟುವ ಕನಸು ನನಸಾಗಬಲ್ಲದು.

Related Articles

Leave a Reply

Your email address will not be published. Required fields are marked *

Back to top button