ಸುದ್ಧಿ

ಯಾರಿಗೆ ಯಾರುಂಟು ಎರವಿನ ಸಂಸಾರ – ಶ್ರೀಮತಿ ಅಮರಾವತಿ ಹಿರೇಮಠ.

ಯಾರಿಗೆ ಯಾರುಂಟು ಎರವಿನ ಸಂಸಾರ

ಆಧುನಿಕ ಬೆಳೆದಂತೆಲ್ಲ ಮನುಷ್ಯ ತಾಂತ್ರಿಕ ಜೀವನ ನಡೆಸುತ್ತಿದ್ದಾನೆ.
ತುಂಬಾ ಆಕರ್ಷಕವಾಗಿ ಕಾಣುವ ಅಧುನಿಕ ಜಗತ್ತು ಇಂದಿನ ಯುವ ಪೀಳಿಗೆಗೆ ಬದುಕಿನ ಮೌಲ್ಯವನ್ನು ತಿಳಿಸದೆ ತನ್ನತ್ತ ಸೆಳೆಯುತ್ತಿದೆ .
ಮನುಷ್ಯ‌ ಬೆಳೆದಂತೆ ಸ್ವಾರ್ಥ ಮನೋಭಾವ ಹೆಮ್ಮರವಾಗಿ ಬೆಳೆದು ಹೆತ್ತವರ ಮನಸ್ಸು ಅರಿಯದಷ್ಟು ಕ್ರೂರಿಯಾಗಿ ಸಂಬಂಧಕ್ಕೆ ಎಳ್ಳುನೀರು ಬಿಡುತ್ತಿದ್ದಾನೆ.
“ಯಾಕೆ ಹೀಗೆ ಎನ್ನುವುದಕ್ಕೆ ಉತ್ತರ ಸಿಗುವುದಿಲ್ಲ “
ಏಕೆಂದರೆ ? ಇಂದಿನ ಪರಿಸರದ ವಾತಾವರಣವೇ ಕಾರಣ .
ಎಲ್ಲರೂ ಒಟ್ಟಾಗಿ ಇರುವ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ,” ನಾನು ನನ್ನ ಗಂಡ ಮಕ್ಕಳು” ನಮ್ಮ ಮನೆ ಹೀಗೆ ಇರಬೇಕು ಎಂಬ ಮನೋಭಾವದಲ್ಲಿ ಒಂದು ಮನೆ ಮುರಿದು ನಾಲ್ಕಾರು ಮನೆಗಳು ಬೆಳೆಯುತ್ತಾ ಹೋದಂತೆ , ಮುಂದಿನ ಪೀಳಿಗೆ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ .
ಹೆತ್ತವರ ಜೀವ ಇದ್ದಾಗಲೇ ಜೀವಂತ ಶವವಾಗಿ ಮಾಡಿ ದಿನ ನಿತ್ಯವೂ ಮರಗುವುದಕ್ಕೆ ಬಿಟ್ಟಿದ್ದಾರೆ.
ಹೆತ್ತು ಹೊತ್ತು ಸಾಕಿದ ಜೀವಗಳಿಗೆ ನಾಯಿಗೆ ಇರುವ ಬೆಲೆಯೂ ಇಲ್ಲದಂತಾಗಿದೆ.
ಕೃತಜ್ಞತೆ ಇಲ್ಲದೆ ಪಶುವಾಗಿ ಬಾಳುತ್ತಿರುವುದು ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ .

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಯಾವ ತಪ್ಪಿಲ್ಲ . ಸ್ವಾತಂತ್ರ ಕೊಡುವುದರಲ್ಲಿ ಯಾವ ತಪ್ಪುಲ್ಲ ನಿಜ .ಆದರೆ ತಾವು ಕಲಿತ ಪಾಠಕ್ಕಿಂತ ಹೆಚ್ಚಾಗಿ ‌ಕುತಂತ್ರ ಬುದ್ದಿಯುಳ್ಳವರಾಗಿದ್ದಾರೆ .
ಕಾನೂನು ಹೆಣ್ಣು ಮಕ್ಕಳ ಪರವಾಗಿ ಇದೆಯೆಂದು ತಮ್ಮ ಮನ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ . ಸಣ್ಣ ಸಣ್ಣ ತಪ್ಪುಗಳು ಕೂಡ ಉದ್ವಿಗ್ನ ಸ್ಥಿತಿಗೆ ಹೋಗಿ ಇಂದು ಕೋರ್ಟ್ ಮೆಟ್ಟಿಲೇರಿವೆ . ಹಿಂದಿನಿಂದಲ್ಲೂ ಮಾನ ಮರ್ಯಾದೆಗೆ ಅಂಜಿ ನಡೆಯುವ ಹಿರಿಯ ಜೀವಗಳು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಕೊಂಡು ಕೋರ್ಟ್ ಕಟ್ಟಿ ಹತ್ತಿ ಜೀವಂತ ಸಮಾಧಿ ಆಗುತ್ತಿದ್ದಾರೆ.
ಹೀಗಾಗಿ ಎಷ್ಟೋ ಜೀವಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ .
ಇಲ್ಲಿ ಹೆತ್ತವರದು ಕೂಡ ತಪ್ಪಿದೆ.
ತಮ್ಮಂತೆ ಅಳಿಯನ ತಂದೆ ತಾಯಿ ಅವರನ್ನು ಸರಿಯಾಗಿ ನೋಡಿ ಕೊಳ್ಳಬೇಕು ಎಂದು ತಿಳಿಸಿ ಹೇಳಬೇಕು.
ಹೆಣ್ಣು ಮಕ್ಕಳು ಈ ರೀತಿ ನಡೆದು ಕೊಳ್ಳುವುದರಿಂದ ಹೆಣ್ಣು ಹೆತ್ತ ಮನೆಗೆ ಕಳಂಕ ಬರುವುದು ಎಂಬುದು ಅರಿತು
ಕೊಂಡು ಬಾಳಬೇಕು. ತಂದೆ ತಾಯಿ ಸಂಸ್ಕಾರ ಕೊಟ್ಟಿಲ್ಲ ಅದಕ್ಕಾಗಿ ಹಿರಿಯ
ಜೀವಗಳಿಗೆ ಶಿಕ್ಷೆ ವಿಧಿಸಿ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದಾರೆ ಎಂಬ ಮಾತು ತವರಿಗೆ ಬರುವುದುಂಟು . ಈ ರೀತಿ ನಡೆದು ಕೊಳ್ಳುವುದು ತಪ್ಪಲ್ಲವೇ .

ಮದುವೆಯಾಗಿ ಬಂದ ಹೆಣ್ಣು ಮಕ್ಕಳು ಬುದ್ದಿವಂತರು ವಿದ್ಯಾವಂತರು ಆದರೂ ಸಣ್ಣ ಮನಸ್ಸಿನವರು ಆಗಿರುವುದರಿಂದ ಅತ್ತೆ ಮಾವನವರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಆಗುತ್ತಿಲ್ಲವೇನೋ ಅಥವಾ ತವರು ಮನೆಯಲ್ಲಿ ಸಂಸ್ಕಾರದ ಕೊರೆತೆಯೋ ತಿಳಿಯುವುದಿಲ್ಲ.
ಎಲ್ಲರೂ ಹೀಗೆ ಇರುವುದಿಲ್ಲ. ಹೊಂದಿಕೊಂಡು ಹೋಗುವ ಸೊಸೆಯರು ಇದ್ದಲ್ಲಿ ಅತ್ತೆ ಮಾವನವರು ಹೊಂದಿ ಕೊಳ್ಳುವುದಿಲ್ಲ .
ಆದರೆ ಸಂಸಾರ ಅಂದ ಮೇಲೆ
ಒಬ್ಬರ ಕಾಲು ಒಬ್ಬರಿಗೆ ತಟ್ಟುವುದು ಸಹಜವೇ ಆಗಿದೆ .
ಸಹಜವಾಗಿ ನಡೆಯುವ ಘಟನೆಗಳು ದೊಡ್ಡದಾಗಿ ಮಾಡಲು ಹೋಗಬಾರದು. ಸಂಸಾರ ಅಂದ ಮೇಲೆ ಸಣ್ಣ ಪುಟ್ಟ ತಪ್ಪುಗಳು ಎಲ್ಲರಿಂದಲೂ ಆಗುತ್ತವೆ. ಅವುಗಳು ಅಲ್ಲಿಯೇ ಬಿಟ್ಟು ಮುನ್ನಡೆಯಬೇಕು. ಸ್ವಲ್ಪ ತಾಳ್ಮೆ ತೆಗೆದು ಕೊಂಡರೆ ನಮ್ಮ ಬದುಕು ಸ್ವರ್ಗವೇ ಆಗುವುದು.

ಯಾವ ತಂದೆ ತಾಯಿಯೂ ಮಕ್ಕಳಿಗೆ ಕೆಟ್ಟದು ಬಯಸುವುದಿಲ್ಲ .
ತಮ್ಮ ತನು – ಮನ – ಧನ ಧಾರೆಯೆರೆದು ಬರಿದಾದ ಕಾಯದೊಂದಿಗೆ ಬದುಕುತ್ತಾರೆ.
ತಾವು ಮಾಡಿದ ಸಾಲದಿಂದ ಎಷ್ಟೊಂದು ತಾಪತ್ರೆಗಳು ಕಳೆದರೂ ಮಕ್ಕಳ ಮುಂದೆ ತೋರಿಸಿಕೊಳ್ಳುವುದಿಲ್ಲ .
ಮಕ್ಕಳು ದೊಡ್ಡವರು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದಾರೆ ಎಂದು ಅವರಿಗೆ ಗೌರವ ಕೊಡುವುದಲ್ಲದೆ ತಮ್ಮ ನೋವುಗಳು ಅವರಿಗೆ ಹೇಳದೆ , ಅವರನ್ನು ನೋಡಿ ತುಂಬಾ ಖುಷಿ ಪಡುತ್ತಾರೆ .
ಆದರೆ ಮಕ್ಕಳು ತಂದೆ ತಾಯಿಯ ಮನಸ್ಸು ಓದುವುದಿಲ್ಲ . ಅವರ ಅಂತರಾಳದ ನೋವು ಸಂಕಟಗಳನ್ನು ತಿಳಿದು ಕೊಳ್ಳುವುದಿಲ್ಲ .
ಅವರುಗಳು ನಡೆದು ಬಂದ ದಾರಿ ಎಂತಹದು ಎಂಬುದನ್ನು ಅರಿತು ಕೊಳ್ಳದಷ್ಟು ಬೆಳೆದಿರುವರು .
ಏಕೆಂದರೆ ? ತಾವು ಪಟ್ಟ ಪಾಡು ಮಕ್ಕಳಿಗೆ ಬರಬಾರದು ಎಂದು ಯಾವ ಕಷ್ಟಗಳು ತಟ್ಟದಂತೆ ಬೆಳೆಸಿದ್ದು ಹೆತ್ತವರು ಮಾಡುವ ತಪ್ಪು.ಹೀಗಿರುವಾಗ ಅವರಿಗೆ ಅಂದು ಏನು ಪ್ರಯೋಜನ.ಇರಲಿ ಕಾಲವೇ ಉತ್ತರ ಕೊಡುವುದು.

ಹೆತ್ತು ಹೊತ್ತು ಸಾಕಿ ಮಕ್ಕಳ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿ ಕೊಂಡು ಜೋಪಾನವಾಗಿ ಬೆಳೆಸಿದ ಮಕ್ಕಳು ಅವರ ಕನಸುಗಳಿಗೆ ಮಣ್ಣೆರಚಿ ಬೀದಿ ಬೀದಿಗಳಲ್ಲಿ ಅಲೆಯುವಂತೆ ಮಾಡಿದ್ದಲ್ಲದೆ ಎಲ್ಲಿಯೇ ಇದ್ದರೂ ನೆಮ್ಮದಿಯಿಂದ ಬದುಕಲು ಬಿಡದಂತೆ ‌ಸಮಸ್ಯಗಳು ಸೃಷ್ಟಿ ಮಾಡಿದ್ದಾರೆ.
ಆದರೆ ಈ ರೀತಿ ಮಾಡುವುದು ತಪ್ಪು.
ಕಾಣದ ದೇವರಿಗೆ ಕೈಮುಗಿಯುವುದಕ್ಕಿಂತ ಕಣ್ಣಿಗೆ ಕಾಣುವ ದೇವರಿಗೆ ಕೈಮುಗಿಯದಿದ್ದರು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು .
ಅವರಿಂದಲೇ ನಾವು ಈ ಭೂಮಿಗೆ ಬಂದಿದ್ದು ಎಂಬುದನ್ನು ಮರೆಯಬಾರದು.
ತಮ್ಮನ್ನೇ ಸಮರ್ಪಿಸಿ ಬಾಳುವ ಹೆತ್ತವರಿಗೆ ಪ್ರೀತಿಸಿ ಗೌರವಿಸಿ ಆಧರಿಸಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.
ಏಕೆಂದರೆ ಸಾಕಷ್ಟು ಹಿರಿಯ ಜೀವಗಳು ನನ್ನ ಮುಂದೆ ಕಣ್ಣೀರು ಹಾಕಿರುವ ಘಟನೆಗಳು ನಡೆದಿವೆ.

ಇಂದಿನ ಪರಿಸ್ಥಿತಿ ನಾಳೆ ನಿಮಗೂ ಬರಬಹುದು ಎಂಬುದು ಅರಿತು ಬಾಳಿದರೆ
ಜೀವನ ಸಾರ್ಥಕ.
ಜೀವ ಇದ್ದಾಗಲೇ ಪ್ರೀತಿಸಿ ಗೌರವಿಸಿ ಆಧರಿಸಿ.
ಇದ್ದಾಗ ನೋಡದೆ ,
ಸತ್ತ ಮೇಲೆ ಫೋಟೋಕೆ ಹಾರ ಹಾಕಿ . ಊರಿಗೆ ಊಟ ಹಾಕಿ ತಿಥಿ ಮಾಡಿದರೆ ಭಗವಂತ ಮೆಚ್ಚುವನೆ ಮನುಜ .
ಸಂಸ್ಕಾರವು ಅಲ್ಲ ಸಂಸ್ಕೃತಿಯು ಅಲ್ಲ .
ಧರ್ಮವು ಅಲ್ಲ .
ಇದನ್ನರಿತು ಬಾಳಿದರೆ ಬಾಳಿಗೊಂದು ಅರ್ಥವಿದೆ .

🙏🙏🙏🙏🙏🙏🙏🙏

ಶ್ರೀಮತಿ ಅಮರಾವತಿ ಹಿರೇಮಠ
9108259250

Related Articles

Leave a Reply

Your email address will not be published. Required fields are marked *

Back to top button