ಆಂಜನೇಯ ಯುವಕ ಮಂಡಳಿ ಮತ್ತು ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿ ರಜತ ಮಹೋತ್ಸವ ಸಮಾರಂಭ..
ಆಂಜನೇಯ ಯುವಕ ಮಂಡಳಿ ಮತ್ತು ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿ ರಜತ ಮಹೋತ್ಸವ ಸಮಾರಂಭ ಯುವವಿಶ್ವೇಶ ಸಮಾಗಮ 27-06-2024 80 30-06-2024 dươ
ಬೆಂಗಳೂರು. ಶ್ರೀ ಆಂಜನೇಯ ಯುವಕ ಮಂಡಳಿ ಎಂಬ ಸಂಸ್ಥೆಯನ್ನು ಪರಮಪೂಜ್ಯರಾದ ಶ್ರೀ 1008 ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಸ್ಥಾಪಿಸಿದರು.
ಶ್ರೀ ಆಂಜನೇಯ ಯುವಕ ಮಂಡಳಿಯು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಮಾರ್ಗದರ್ಶನದಲ್ಲಿ ಧಾರ್ಮಿಕ ಸಾಮಾಜಿಕ ಹಾಗು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆಯನ್ನು ನೀಡುತ್ತಿದೆ.
ಅಂಜನೇಯ ಯುವಕ ಮಂಡಳಿಯು ಅಸ್ತಿತ್ವಕ್ಕೆ ಬಂದು 2024ಕ್ಕೆ 25 ವರ್ಷಗಳು ತುಂಬಿತು. ಈ ಇಪ್ಪತ್ತೈದು ವರ್ಷಗಳಲ್ಲಿ ಮಾಡಿದ ಸೇವೆಯನ್ನು ಶ್ರೀ 1008 ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಸ್ಮರಣೆಯನ್ನು ಮಾಡುತ್ತಾ, ಶ್ರೀಹರಿ ವಾಯು ಗುರುಗಳಿಗೆ ಸಮರ್ಪಣೆ ಮಾಡುವ ರಜತಮಹೋತ್ಸವದ ಸಂಭ್ರಮಾಚರಣೆಯನ್ನು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಸಹಕಾರದೊಂದಿಗೆ ಶ್ರೀ ಕ್ರೋಧಿನಾಮ ಸಂವತ್ಸರ ಜೇಷ್ಠ ಮಾಸ ಕೃಷ್ಣಪಕ್ಷ ಷಷ್ಠಿ ಗುರುವಾರದಿಂದ ನವಮಿ ಭಾನುವಾರ, 2024 ಜೂನ್ 26 ರಿಂದ 30 ವರೆಗೆ ವಿಜೃಂಭಣೆಯಿಂದ ಆಚರಿಸಲು ಶ್ರೀಹರಿಯ ವಾಯು ಗುರುಗಳ ಪ್ರೇರಣಾನುಸಾರ, ನಿರ್ಧರಿಸಲಾಗಿದೆ. ನಾಲ್ಕು ದಿನಗಳ ವೈಭವದ ಉತ್ಸವದಲ್ಲಿ ತಾವು ಕುಟುಂಬ ಪರಿವಾರ ಸಮೇತರಾಗಿ ಭಾಗವಹಿಸಿ ಶ್ರೀ ಅಂಜನೇಯನ ಉಪಾಸ್ಯಮೂರ್ತಿ ಪಟ್ಟಾಭಿರಾಮದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸುತ್ತಿದ್ದೇವೆ.
27 ಜೂನ್ 2024 ಗುರುವಾರ
ಬೆಳಿಗ್ಗೆ 9.00 ಕ್ಕೆ
ಸತ್ಯನಾರಾಯಣ ಪೂಜೆ
- ಧನ್ವಂತರಿ ಹೋಮ ಹಾಗೂ ಭಜನೆ – ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿಯಿಂದ
ಸಂಜೆ 5.00 ರಿಂದ - ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಸೋದೆ ಶ್ರೀವಾದಿರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ಆಗಮನ, ಪೂರ್ಣಕುಂಭ ಸ್ವಾಗತ.
- ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ರಜತ ಪಲ್ಲಕ್ಕಿ ಪ್ರಾಕಾರೋತ್ಸವ
ಸಭಾ ಕಾರ್ಯಕ್ರಮ 6.00 ರಿಂದ
ಅಧ್ಯಕ್ಷತೆ : ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರು, ಸೊಂದ ಶ್ರೀವಾದಿರಾಜ ಮಠಾಧೀಶರು ಮುಖ್ಯ ಅತಿಥಿ : ವಿದ್ವಾನ್ ಶ್ರೀ ಸತ್ಯಧ್ಯಾನ ಆಚಾರ್ ಕಟ್ಟಿ, ಪ್ರಾಂಶುಪಾಲರು, ಜಯತೀರ್ಥ ವಿದ್ಯಾಪೀಠ, ಉತ್ತರಾದಿಮಠ
ಮುಖ್ಯ ಅತಿಥಿ : ಸನ್ಮಾನ್ಯ ಕು. ಶೋಭಾ ಕರಂದ್ಲಾಜೆ, ಮಾನ್ಯ ಕೇಂದ್ರ ಸಚಿವರು, ಭಾರತ ಸರ್ಕಾರ ಮುಖ್ಯ ಅತಿಥಿ : ಶ್ರೀ ಜೆ.ಕೆ. ಸುಧಾಕರ್, ಅಧ್ಯಕ್ಷರು, ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ.)
ಮುಖ್ಯ ಅತಿಥಿ : ಶ್ರೀ ರವೀಂದ್ರ ಹೆಚ್. ದೇಸಾಯಿ, ಕಾರ್ಯದರ್ಶಿ, ಶ್ರೀ ರಾಘವೇಂದ್ರ ನೇವಾ ಸಮಿತಿ (ನೋಂ.). ವರದಿ. ಮಂಜುಳಾ ರೆಡ್ಡಿ



