ಸುದ್ಧಿ

ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜನಸ್ಪಂದನ ಕಾರ್ಯಕ್ರಮ. ಕನಕಗಿರಿ. ಕೊಪ್ಪಳ ಜಿಲ್ಲೆ.

ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜನಸ್ಪಂದನ ಕಾರ್ಯಕ್ರಮ

ಜನರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹಾರ ನಳಿನ್ ಅತುಲ್

ಕನಕಗಿರಿ ಪಟ್ಟಣದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದ ಎಪಿಎಂಸಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಹಯೋಗದಲ ನೇತೃತ್ವ ವಹಿಸಿ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ನಳಿನ್ ಅತುಲ್ ಗಿಡ ನೆಡುವ ಕಾರ್ಯಕ್ರಮದೊಂದಿಗೆ ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸ್ಥಳದಲ್ಲಿಯೇ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ನಗರ-ಪಟ್ಟಣಗಳಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗ್ರಾಮೀಣ ಪ್ರದೇಶದ ಜನರ ಅಹವಾಲುಗಳಿಗೆ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ನೂರಾರು ಅರ್ಜಿಗಳು ಬರುತ್ತಿವೆ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ತಡವಾದರೂ ಅರ್ಜಿದಾರರ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಬಡವ, ರೈತ, ಕಾರ್ಮಿಕರೆಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಡೆಯುತ್ತಿದೆ ಎಂದರು.

ಮತ್ತು ಕರ್ನಾಟಕ ರಾಜ್ಯ ಸರ್ಕಾರವು ನೀಡಿದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕಾರ್ಯ ಜಿಲ್ಲಾಡಳಿತದಿಂದ ನಡೆದಿದೆ. ಈ ಕುರಿತು ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಕಾರ್ಯ ಅಚ್ಚುಕಟ್ಟಾಗಿ ಮಾಡಿದ್ದಾರೆ. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜನಸ್ಪಂದನೆ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದ್ದು, 1,393 ಅರ್ಜಿ ಸಲ್ಲಿಕೆಯಾಗಿವೆ. ಎಲ್ಲ ಅರ್ಜಿ ಪರಿಹಾರ ಒದಗಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ರೈತರು ಹಾಗೂ ಸರ್ವ ಜನರ ಮನವಿ ಹಾಗೂ ಕೊರತೆಗಳ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ. ಪಟ್ಟಣ ಸೇರಿದಂತೆ ತಾಲೂಕಿನ ನವಲಿ, ಜೀರಾಳ, ಚರ್ಚನಗುಡ್ಡ, ತಿಪ್ಪನಾಳ, ಕರಡೋಣ, ನಿರ್ಲೂಟಿ ಸೋಮಸಾಗರ್ ಹುಲಿಹೈದರ್ ಕೆ ಮಲ್ಲಾಪುರ್ ಚಿಕ್ಕ ಮಾಜಿನಾಳ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಪಹಣಿ ತಿದ್ದುಪಡಿ ಸಮಸ್ಯೆ, ಪೋಡಿ ಸಮಸ್ಯೆ, ಭೂ ವ್ಯಾಜ್ಯ, ಕನಕಾಚಲಪತಿ ದೇವಸ್ಥಾನ ಸ್ಥಳ ಒತ್ತುವರಿ, ನವಲಿ ಹಾಗೂ ಚರ್ಚಿನಗುಡ್ಡೆ ತಾಂಡದ ಜನರಿಗೆ ಹಕ್ಕುಪತ್ರ ನಿವೇಶನ ನೀಡುವ ಕುರಿತು, ರೈತ ಸಂಘದಿಂದ ರಾಸಾಯನಿಕ ಗೊಬ್ಬರ ಬೆಲೆ ಇಳಿಕೆ ಕುರಿತಾಗಿ ಒಟ್ಟಾಗಿ ಕನಕಗಿರಿ ತಾಲೂಕಿನ ಸಂಬಂಧ ಪಟ್ಟಂತಹ 249 ಮನವಿಗಳನ್ನೂ ಸಲ್ಲಿಸಿದರು.

ಈ ವೇಳೆ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಎಸ್ಪಿ ಯಶೋದಾ ವಂಟಗೋಡಿ, ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ತಹಸೀಲ್ದಾ‌ರ್ ವಿಶ್ವನಾಥ ಮುರುಡಿ ಡಿವೈಎಸ್ಪಿ ನಿಂಗನಗೌಡ ಪಾಟೀಲ್ ಡಿಡಿ ಕಾವ್ಯರಾಣಿ ತೋಟಗಾರಿ ಇಲಾಖೆಯ ಕೃಷ್ಣ ಹುಕ್ಕುಂದ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ದತ್ತಾತ್ರೇಯ ಹೆಗಡೆ ಕನಕಗಿರಿ ಪಿಐ ಎಂ ಡಿ ಫೈಝಿಲ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಅತಿ ಹೆಚ್ಚು ಸಮಸ್ಯಗಳ ಮನವಿ ಸಲ್ಲಿಕೆ

*. ತಾಲೂಕ ಮಟ್ಟದ ಕೃಷಿ, ತೋಟಗಾರಿಕೆ, ವಿದ್ಯುತ್, ನೊಂದಾವಣಿ ಕಚೇರಿ, ಬಸ್ ಡಿಪೋ ಮುಂತಾದ ಇಲಾಖೆಗಳ ಕಾರ್ಯ ಚಟುವಟಿಕೆಗಳನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಬೇಕು.

*. ಕನಕಗಿರಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯ ಅಧಿಕಾರಿಗಳ ಕೊರತೆ ಮತ್ತು ನರ್ಸ್ ಗಳ ಕೊರತೆಯನ್ನು ನೀಗಿಸಬೇಕು.

*. ತಾಲೂಕಿನಿಂದ ಸಂಪರ್ಕ ಕಲ್ಪಿಸುವ ಪ್ರತಿಯೊಂದು ಗ್ರಾಮಗಳ ರಸ್ತೆ ಸುಧಾರಣೆ ಆಗಬೇಕು.

*. ಹುಲಿಹೈದ‌ರ್ ರೈತ ಸಂಪರ್ಕ ಕೇಂದ್ರದ ನಿರ್ಮಾಣಕ್ಕೆ ಅವಶ್ಯಕತೆ ಇರುವ ಅನುದಾನವನ್ನು ಬಿಡುಗಡೆಗೊಳಿಸಲು ರಾಜ್ಯ ಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕು.

*. ಚಿಕ್ಕಮಾದಿನಾಳ ಅಥವಾ ಮುದ್ಲಾಪುರ ಗ್ರಾಮ ಪಂಚಾಯಿತಿಯನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು.

*. ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಬಸ್ ಗಳ ವ್ಯವಸ್ಥೆಯನ್ನು ಮಾಡಬೇಕು.

*. ರೈತರಿಗೆ ತೊಂದರೆಯಾಗದಂತೆ ಕೃಷಿ ವ್ಯಾಜ್ಯಗಳನ್ನು ಸರಿಯಾದ ಸಮಯದಲ್ಲಿ ಪರಿಹಾರ ಮಾಡಿಕೊಡಬೇಕು.

*. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ದೊರೆಯುತ್ತಿರುವ ಕೃಷಿ ಉಪಕರಣಗಳ ದರವನ್ನು ಮೊದಲಿನಂತೆ ಯಥಾವತ್ತಾಗಿ ಮುಂದುವರಿಸಬೇಕು.

*. 2023 -24 ರ ಭೀಕರ ಬರಗಾಲದಿಂದ ತತ್ತರಿಸಿದ ರೈತರಿಗೆ, ಬ್ಯಾಂಕುಗಳು ಸಾಲ ಮರುಪಾವತಿಗಾಗಿ ನೋಟಿಸ್ ಗಳನ್ನು ಮೇಲಿಂದ ಮೇಲೆ ಕಳುಹಿಸುತ್ತಿವೆ. ಆದ್ದರಿಂದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ರಾಜ್ಯ ಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕು.

*. ಶಿಕ್ಷಕರ ಕೊರತೆ ಅಪಾರ ಇರುವುದರಿಂದ ಅತಿಥಿ ಶಿಕ್ಷಕರನ್ನು ಮತ್ತು ಆಯಾಮ್ಮ ಯಾಗಿ ಸೇವೆ ಸಲ್ಲಿಸುತ್ತಿರುವ ವೇತನವನ್ನು ಹೆಚ್ಚು ಮಾಡಬೇಕು

*. ಅಕ್ರಮವಾಗಿ ಮರಳು ಸಾಗಾಣಿಕೆ ಅಕ್ರಮ ಮಧ್ಯ ಮಾರಾಟ ಮಟ್ಕ ವಿವಿಧ ಬಗೆಯ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು.

*. ಪುರಾತನ ಶಾಲಾ ಕೊಟ್ಟಡಿಗಳನ್ನು ಕೆಡವಿ ನೂತನ ಕಟ್ಟಡಗಳನ್ನು ಪ್ರಾರಂಭಿಸಬೇಕು

*. ಬಿಸಿಎಂ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಆಹಾರವನ್ನು ಉತ್ತಮವಾದ ವಸತಿ ಹಾಗೂ ಲೈಬ್ರರಿ ಗಳನ್ನು ಪ್ರಾರಂಭಿಸಬೇಕು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button