ಸುದ್ಧಿ

ಕೇಂದ್ರ ಹಾಗೂ ರಾಜ್ಯ ಸರಕಾರ ಧೋರಣೆಗಳ ವಿರುದ್ಧ ದಿವ್ಯಾಂಗರ ಪ್ರತಿಭಟನೆ…..ಹಗರಿಬೊಮ್ಮನಹಳ್ಳಿ ವಿಜಯನಗರ ಜಿಲ್ಲೆ

ಕೇಂದ್ರ ಹಾಗೂ ರಾಜ್ಯ ಸರಕಾರ ಧೋರಣೆಗಳ ವಿರುದ್ಧ ದಿವ್ಯಾಂಗರ ಪ್ರತಿಭಟನೆ

ಸೆ.೨೪ ಹಗರಿಬೊಮ್ಮನಹಳ್ಳಿ ವಿಜಯನಗರ ಜಿಲ್ಲೆ

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಹಾಗೂ ಪಾಲಕರ ಒಕ್ಕೂಟ ಹಗರಿಬೊಮ್ಮನಹಳ್ಳಿ ತಾಲೂಕ ಸಮಿತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒತ್ತಾಯಿಸಿ ದಿವ್ಯಾಂಗರ ಬೇಡಿಕೆಗಳಿಗೆ ನಗರದಲ್ಲಿ ಇಂದು ಬಸವೇಶ್ವರ ವೃತ್ತದಲ್ಲಿ ಬೃಹತ್ ರ‍್ಯಾಲಿ ನಡೆಸಲಾಯಿತು ಪ್ರತಿಭಟನೆ ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಸಭೆಯಲ್ಲಿ ಉದ್ದೇಶಿಸಿ ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆ ಮತ್ತು ತಾರತಮ್ಯ ನೀತಿಯನ್ನು ಬಲವಾಗಿ ಖಂಡಿಸಿದರು. ಬೇರೆ ರಾಜ್ಯಗಳಲ್ಲಿ ೪೦೦೦/- ರೂ ಗಳಿಂದ ಹಿಡಿದು ೬೦೦೦/- ರೂ ಗಳವರಗೆ ಮಾಸಾಶನ ನೀಡುತ್ತಿವೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ ೧೪೦೦/-ರೂ ಗಳನ್ನು ಮಾತ್ರ ನೀಡುತ್ತಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಾರತಮ್ಯ ನೀತಿಯನ್ನು ಅನುಸರಿಸುತ್ತಿವೆ ಎಂದು ತಮ್ಮ ಭಾಷಣದಲ್ಲಿ ಸರಕಾರಗಳ ವಿರುದ್ಧ ಕಿಡಿ ಕಾರಿದರು. ಕೂಡಲೇ ರಾಜ್ಯ ಸರಕಾರ ೫೦೦೦/-ರೂ, ಕೇಂದ್ರ ಸರಕಾರ ೫೦೦೦/-ಒಟ್ಟು ೧೦೦೦೦/-ರೂ.ಗಳನ್ನು ದಿವ್ಯಾಂಗರಿಗೆ ಮಾಸಾಶನ ನೀಡಬೇಕೆಂದು ಸರಕಾರಗಳಿಗೆ ಒತ್ತಾಯಿಸಿದರು. ಗ್ರಾಮ ಪಂಚಾಯ್ತಿ ಅನುದಾನದಲ್ಲಿ ಶೇಕಡ ೫% ರಷ್ಟು ಹಣ ಅಂಗವಿಕಲರ ಕಲ್ಯಾಣಕ್ಕೆ ಬಳಕೆ ಯಾಗಬೇಕು, ಪಂಚಾಯ್ತಿಗಳು ಅಂಗವಿಕಲರಿಗೆ ಪ್ರತ್ಯೇಕ ಗುರುತಿನ ಚೀಟಿ ನೀಡಬೇಕು. ಅಂಗವಿಕಲರಿಗೆ ಅನುಕೂಲವಾಗುವ ಮೇಟಿ, ನೀರ್‌ಗಂಟಿ ಇನ್ನಿತರ ಉದ್ಯೋಗಳಿಗೆ ಮೊದಲ ಪ್ರಾಶಸ್ತö್ಯ ನೀಡಬೇಕು, ಶಾಸಕರ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ೧೦ಲಕ್ಷ ರೂ.ಗಳನ್ನು ಕಡ್ಡಾಯವಾಗಿ ಬಳಸಬೇಕು. ರಾಜ್ಯದ್ಯಾಂತ ಉಚಿತ ಬಸ್‌ಪಾಸ್ ನೀಡಬೇಕು, ಎಸ್.ಸಿ, ಎಸ್ಟಿ ಗಳಿಗೆ ಇರುವ ಮದುವೆ ಪ್ರೋತ್ಸಾಹ ಧನದಂತೆ ಅಂಗವಿಕಲರು ಇತರರು ಮದುವೆಯಾದಲ್ಲಿ ೩ ಲಕ್ಷರೂ.ಗಳ ಪ್ರೋತ್ಸಾಹ ಧನ ನೀಡಬೇಕು. ಅಂಗವಿಕಲರು ಅಂಗವಿಕಲರನ್ನು ಮದುವೆಯಾದಲ್ಲಿ ೬ ಲಕ್ಷ ರೂ.ಗಳ ಪ್ರೋತ್ಸಾಹ ಧನ ನೀಡಬೇಕೆಂದು ರಂಗಪ್ಪದಾಸರ್ ಸರಕಾರಗಳಿಗೆ ಒತ್ತಾಯಿಸಿದರು. ದಿವ್ಯಾಂಗರ ಮನವಿ ಪತ್ರವನ್ನು ಉಪತಹಶೀಲ್ದಾರ್ ಶಿವಕುಮಾರ್‌ಗೌಡ ಸ್ವೀಕರಿಸಿದರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಶಾಸಕರ ಆಪ್ತ ಸಹಾಯಕ ದೊಡ್ಡ ಬಸಪ್ಪರೆಡ್ಡಿ ಪ್ರತಿಭಟನಾಕಾರರಿಗೆ ಪ್ರತಿಕ್ರಿಯಿಸಿ ಮಾತನಾಡುತ್ತಾ ನಿಮ್ಮಗಳ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ನಿಮಗೆ ಏನಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ಶೀಘ್ರದಲ್ಲಿಯೇ ಸರಿಪಡಿಸಿ ಕೊಡಲಾಗುವುದು ಎಂದು ಸ್ಥಳೀಯ ಶಾಸಕರ ಪರವಾಗಿ ಆಶ್ವಾಸನೆ ನೀಡಿದರು.

ಪ್ರತಿಭಟನೆಯಲ್ಲಿ ಬಿ.ರೇಣುಕಾ ಅಧ್ಯಕ್ಷರು, ಕಾರ್ಯದರ್ಶಿ ಡಿ.ಕಲೀಲ್ ಭಾಷ, ಉಪಾದ್ಯಕ್ಷರಾದ ಜವಳಿ ಕೊಟ್ರೇಶಪ್ಪ, ಕೆ.ಹುಲುಗಪ್ಪ, ಬಸವರಾಜ, ಗಂಗಮ್ಮ ಸಹ ಕಾರ್ಯದರ್ಶಿಗಳಾದ ಮಾರುತಿ ಮಾದೂರು, ಹೋಟೇಲ್ ಗಂಗಣ್ಣ ಮಾದೂರು, ನಾಗರಾಜ, ಅಂಜಿನಪ್ಪ ಭಾಗವಹಿಸಿದ್ದರು.

                                                   ವರದಿ : ಮಹೇಶ್ ಮಾದೂರು

Related Articles

Leave a Reply

Your email address will not be published. Required fields are marked *

Back to top button