ಸುದ್ಧಿ

ದಶಮಾಪುರ ಸಿಡಿಲು ಬಡಿದು ರೈತರ ಸಾವು. ಹಗರಿಬೊಮ್ಮನಹಳ್ಳಿ.

ದಶಮಾಪುರ ಸಿಡಿಲು ಬಡಿದು ರೈತರ ಸಾವು
ಹಗರಿಬೊಮ್ಮನಹಳ್ಳಿ ದಿನಾಂಕ 06.10.2024ರಂದು ಹ.ಬೊ.ಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಮಧ್ಯಾಹ್ನ 12.30 ರ ಸಮಯದಲ್ಲಿ ಹೊಲದಲ್ಲಿ ಮೆಕ್ಕೆಜೋಳ ತೆನೆ ಮುರಿಯಲಿಕ್ಕೆ ಹೋದ ಸಮಯದಲ್ಲಿ ಸಿಡಿಲು ಬಡಿದು ಬಣಕಾರ ನಾರಪ್ಪ ವಯಸ್ಸು 62 ಮತ್ತು ಬಣಕಾರ ಪ್ರಶಾಂತ ವಯಸ್ಸು 38 ದಾರುಣ ಸಾವಿಗೀಡಾಗಿದ್ದಾರೆ. ಬಣಕಾರ ನಾರಪ್ಪ ಮೂವರು ಮಕ್ಕಳನ್ನು ಅಗಲಿ ದೂರವಾಗಿದ್ದರೆ, ಬಣಕಾರ ಪ್ರಶಾಂತ ಹೆಂಡತಿ ಹಾಗೂ ಗಂಡು ಮಗುವನ್ನು ಅಗಲಿದ್ದಾರೆ. ಮಧ್ಯಾಹ್ನ 12.30 ರ ಸಮಯದಲ್ಲಿ ಈರ್ವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಜೋರಾಗಿ ಮಳೆ ಬಂದಿದೆ. ಆಗ ಹೊಲದ ಹತ್ತಿರದಲ್ಲಿರುವ ಮರದ ಹತ್ತಿರ ಆಸರೆಗಾಗಿ ನಿಂತಿದ್ದಾರೆ ಆ ಸಮಯದಲ್ಲಿ ಬರ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹ.ಬೊ.ಹಳ್ಳಿ ತಹಶೀಲ್ದಾರರಾದ ಆರ್. ಕವಿತಾ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸಾವನ್ನಪ್ಪಿದ ಉಭಯರಿಗೂ ಸರಕಾರದಿಂದ ತಲಾ 5 ಲಕ್ಷ ರೂಪಾಯಿ ಪ್ರಕೃತಿ ವಿಕೋಪ ನಿಧಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರು, ಘಟನಾ ಸ್ಥಳದಲ್ಲಿ ಗ್ರಾಮ ಅಭಿವೃದ್ದಿ ಅಧಿಕಾರಿ ಪ್ರಭಾಕರ ಕೊಪ್ಪದ್ ಹಾಜರಿದ್ದರು.

ಮಹೇಶ್ ಮಾದೂರು

Related Articles

Leave a Reply

Your email address will not be published. Required fields are marked *

Back to top button