ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಡಿ.೨೯ಕ್ಕೆ ಪತ್ರಿಕಾ ವಿತರಕರ ಉತ್ಸವ.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಡಿ.೨೯ಕ್ಕೆ ಪತ್ರಿಕಾ ವಿತರಕರ ಉತ್ಸವ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲಾ ಪತ್ರಿಕಾ ವಿತರಕರು ಭಾಗವಹಿಸುವಂತೆ ಮನವಿ ಮಾಡಿದ್ದೇವೆ ಹೊರತು. ಇದರಲ್ಲಿ ಯಾವುದೇ ಸ್ವಾರ್ಥಪರ ಚಿಂತನೆಯಾಗಲಿ ಯಾರಿಗೂ ಸಂತೋಷ ಪಡಿಸುವುದಕ್ಕಾಗಿಯಲ್ಲ.
ಆದರೆ, ಕೆಲವರು ತಮ್ಮ ಹಿತಾಸಕ್ತಿ ಅನುಸಾರವಾಗಿ ಎಲ್ಲಾ ಪತ್ರಿಕಾ ವಿತರಕರ ದಾರಿ ತಪ್ಪಿಸಿ. ತಮ್ಮ ಸ್ವಾರ್ಥಕ್ಕಾಗಿ ಸಂಘವನ್ನು ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಅಂತ ಕೆಲ ಕೆಟ್ಟ ಮನಸ್ಸುವುಳ್ಳ ಕೆಲವರು ನಾವು ಮಾಡುತ್ತಿರುವ ಕಾರ್ಯಕ್ರಮದ ವಿರುದ್ದ ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಮ್ಮ ಒಕ್ಕೂಟದ ಸದಸ್ಯರಾಗಲಿ ಅಥವಾ ಆಗದೆ ಇರುವ ಎಲ್ಲಾ ಪತ್ರಿಕಾ ವಿತರಕರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದು. ಆ ದಿನ ಪೂರ್ತಿ ಕಾರ್ಯಕ್ರಮ ಪತ್ರಿಕಾ ವಿತರಕರ ಕುಟುಂಬದ ಸಂಭ್ರಮಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಏಕೆಂದರೆ ಎಲ್ಲೂ ಕೂಡ ನಮ್ಮ ಪತ್ರಿಕಾ ವಿತರಕರನ್ನು ಅಥವಾ ಕುಟುಂಬದವರನ್ನು ಗುರುತಿಸುವ ಕೆಲಸವನ್ನು ಯಾವ ಸಂಘಟನೆಗಳು ಮಾಡುವುದಿಲ್ಲ, ಅದ್ದರಿಂದ ನಾವೇ ನಮ್ಮ ಕುಟುಂಬದೊಂದಿಗೆ ಸಂಭ್ರಮ ಪಡಬೇಕು ಎಂದು ಪತ್ರಿಕಾ ವಿತರಕರ ಉತ್ಸವ-೨೦೨೪ ಎಂದು ಶೀರ್ಷಿಕೆಯಡಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಹೊರತು ಯಾರನ್ನು ವಿರೋಧಿಸುವ ದೃಷ್ಟಿಯಿಂದ ಅಲ್ಲ.
ಕೆಲವರ ತಮ್ಮ ಸ್ವಾರ್ಥಪರ ಚಿಂತನೆಯಲ್ಲೆ ಸಂಘಗಳ ನಡುವೆ ಜಗಳ ಹುಟ್ಟಿ ಹಾಕಿ, ತಮ್ಮ ಬೆಳೆಕಾಳು ಬೇಯಿಸಿಕೊಳ್ಳುವ ಕೆಲವು ಕೆಟ್ಟ ಹುಳುಗಳು ನಮ್ಮ ನಡುವೆ ನಮ್ಮೊಂದಿಗೆ ಇದ್ದು ಕಾರ್ಯನಿರ್ವಹಿಸುತ್ತಿದ್ದು ಅಂತಹ ಯಾವುದೇ ಕೆಟ್ಟ ಹುಳುಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ನಮದು ಯಾವುದೇ ಸ್ವಾರ್ಥವಿಲ್ಲದ ಕಾರ್ಯ, ಈ ಕಾರ್ಯಕ್ಕೆ ಯಾರೇ ಆಗಲಿ ತಮ್ಮ ಒಳ್ಳೆಯ ಮನಸ್ಸಿನಿಂದ ಬಂದು ಸಹಕಾರ ನೀಡಿದರೆ ನಮ್ಮದು ಮುಕ್ತ ಸ್ವಾಗತವಿದೆ.
ಆದರೆ, ಕೆಲವರು ಒಳ್ಳೆಯ ಕಾರ್ಯಗಳನ್ನು ಮಾಡುವುದಿಲ್ಲ, ಕೇವಲ ಬೇರೆಯವರ ಮೇಲೆ ಗೂಭೆ ಕೂರಿಸಿಕೊಂಡು ಇಲ್ಲಿಯ ತನಕ ಸುಳ್ಳು ಹೇಳಿಕೊಂಡು ಪತ್ರಿಕಾ ವಿತರಕರ ಹೆಸರನಲ್ಲಿ ದುಡ್ಡಿನ ವ್ಯವಹಾರ ಮಾಡಿಕೊಂಡು ಬದುಕುತ್ತಿದ್ದಾರೆ. ಹಾಗಿದ್ದಾಗ ನಮ್ಮ ಒಕ್ಕೂಟದಿಂದ ಮಾಡುತ್ತಿರುವ ಕಾರ್ಯದ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಯಾವ ಯೋಗ್ಯತೆಯಾಗಲಿ, ಅರ್ಹತೆಯಾಗಲಿ ಇಲ್ಲ.
ಮತ್ತೊಮ್ಮೆ ಎಲ್ಲಾ ಪತ್ರಿಕಾ ವಿತರಕರಿಗೆ ಹೇಳುವುದೇನೆಂದರೆ ಇಲ್ಲಿ ಯಾವುದೇ ಸಂಘಟನೆ ಮುಖ್ಯವಲ್ಲ, ಪತ್ರಿಕಾ ವಿತರಕರ ಸಂಕಷ್ಟಕ್ಕೆ ಸ್ಪಂಧಿಸುವ ಮನೋಬಾವ ಇರುವ ಎಲ್ಲಾರು ಒಂದಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ, ಇದರಲ್ಲಿ ಪ್ರತಿಯೊಬ್ಬ ಪತ್ರಿಕಾ ವಿತರಕರು ಮತ್ತು ಕುಟುಂಬದವರು ಭಾಗವಹಿಸಿ ಸಂಭ್ರಮಿಸಿ ಎಂದು ಹೇಳುತ್ತೇನೆ.
ಎನ್. ಮಾಲತೇಶ್
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ
ಶಿವಮೊಗ್ಗ ಜಿಲ್ಲಾ ಘಟಕ



