ಬದುಕಿಗೆ ಬುತ್ತಿ ಕಟ್ಟಿ ಕೊಡುತ್ತಿರುವ ಶಂಕರ್ ಕೊಡ್ಲಾ ಅವರು ನೂರ್ಕಾಲ ಬಾಳಲಿ.
ಬದುಕಿಗೆ ಬುತ್ತಿ ಕಟ್ಟಿ ಕೊಡುತ್ತಿರುವ ಶಂಕರ್ ಕೊಡ್ಲಾ. ನೂರು ಕಾಲ ಬಾಳಲಿ. ಇದೇ ವೇದಿಕೆಯಲ್ಲಿ ನೂರು ಕಾಲದ ಸಂಭ್ರಮ ಆಚರಿಸುವಂತಾಗಲಿ ಎಂದು ಆ ಕಾಣದ ದೇವನಲ್ಲಿ ಪ್ರಾರ್ಥಿಸೋಣ. 🙏🙏🙏.
ಶಂಕರ್ ಕೋಡ್ಲಾ
ಶಂಕರ್ ಕೊಡ್ಲಾ ಎಂಬ ಹೆಸರು ಹಿಂದುಳಿದ ಹೈದರಾಬಾದ್ ಕರ್ನಾಟಕ ಸದ್ಯ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಹು ಪ್ರಚಲಿತದಲ್ಲಿರುವ ಹೆಸರು. ಶಿಕ್ಷಣ ರಂಗದಲ್ಲಿ, ಸಹಕಾರ ಕ್ಷೇತ್ರದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ, ಪತ್ರಿಕಾ ರಂಗದಲ್ಲಿ ಟಿವಿ ಚಾನಲ್ ಒಡೆತನದಲ್ಲಿ, ಬಹು ಪ್ರಚಲಿತವಾಗಿರುವ ಹೆಸರು. ಶಂಕರ್ ಕೊಡ್ಲಾ ಇವರು ಹಿರಿಯರಿಗೆ ತಮ್ಮನಾಗಿ ಕಿರಿಯರಿಗೆ ಅಣ್ಣನಾಗಿ, ನೊಂದವರಿಗೆ ಬಂಧುವಾಗಿ, ದಿಕ್ಕು ಕಾಣದೆ ಕುಳಿತಿರುವವರಿಗೆ ದಾರಿ ದೀಪವಾಗಿ, ಹಲವಾರು ಸಮಾಜೋದ್ಧಾರಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ದುಡಿದವರು, ಸದ್ಯ ಕಲಬುರ್ಗಿ ನಗರದಲ್ಲಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮುನ್ನೇಲೆಯಲ್ಲಿರುವ ವ್ಯಕ್ತಿ,
ಶಂಕರ್ ಕೊಡ್ಲಾ ಎಂದರೆ ಆಡು ಮುಟ್ಟದ ಗಿಡವಿಲ್ಲ. ಶಂಕರ್ ಕೊಡ್ಲಾ ಅವರು ತೊಡಗಿಸಿಕೊಳ್ಳದ ಸಾಮಾಜಿಕ ಕ್ಷೇತ್ರವಿಲ್ಲ ಎಂದು ಅಲ್ಲಿಯ ನಾಗರಿಕರು ಸುಶಿಕ್ಷಿತರು ಶಿಕ್ಷಣ ಪ್ರೇಮಿಗಳು ಜನಸಾಮಾನ್ಯರು ಜನಮಾನಸದಲ್ಲಿ ಆಡಿಕೊಳ್ಳುವ ಮನದಾಳದ ಮಾತಾಗಿದೆ.
ಅತಿ ಹಿಂದುಳಿದ ಪ್ರದೇಶ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಹುಟ್ಟಿ ಬೆಳೆದು ಪ್ರಾಥಮಿಕ ಶಿಕ್ಷಣ ಮುಗಿಸಿದ ಕೊಡ್ಲಾ ಅವರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮತ್ತು ತಮ್ಮ ಬದುಕಿಗೆ ದಾರಿ ಹುಡುಕಲು ಕಲಬುರಗಿ ನಗರಕ್ಕೆ ಬಂದರು. ಕಲಬುರಗಿ ನಗರದಲ್ಲಿ ಹಿರಿಯ ಜೀವಿಗಳ, ಸತ್ಸಂಗದ, ಅನುಭವಿಗಳ ಸಾಹಿತಿಗಳ ಸ್ವಾತಂತ್ರ್ಯ ಹೋರಾಟಗಾರರ ಸಂಘದಲ್ಲಿ ಅಷ್ಟೇ ಅಲ್ಲದೇ ಮಠಾಧಿಪತಿಗಳ ದಿವ್ಯ ಸನ್ನಿಧಾನದಲ್ಲಿಯೇ ತಮ್ಮ ಯೌವನದ ಜೀವನವನ್ನು ಉನ್ನತ ವ್ಯಾಸಾಂಗ ದೊಂದಿಗೆ ಕಳೆದರು.
ಡಾ ಬಿ ಆರ್ ಅಂಬೇಡ್ಕರ್ ಅವರ ಪರಮ ಪ್ರೀತಿ ವಿಶ್ವಾಸದ ಹಿಂಬಾಲಕರಾಗಿ ಅವರ ಧೇಯ ಧೋರಣೆಗಳನ್ನು ತಮ್ಮ ಜೀವನದಲ್ಲೇ ಅಳವಡಿಸಿಕೊಂಡರು. ಉರಿಲಿಂಗಪೆದ್ದಿ ಸಂಸ್ಥಾನದ ಪರಮ ಭಕ್ತಾರಾದರು.
ಓದು ಬರಹ ಹುಲಿಯ ಹಾಲಿದ್ದಂತೆ ಹುಲಿಯ ಹಾಲು ಕುಡಿದವನು ಘರ್ಜಿಸಲೇಬೇಕು ಎಂಬ ಮಾತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ತಾವು ವಿದ್ಯಾವಂತರಾಗುವುದರೊಂದಿಗೆ ತಮ್ಮ ಜನಾಂಗ ಹಾಗೂ ಹಿಂದುಳಿದ ಜನಾಂಗಗಳೂ ಮಕ್ಕಳು ಕೂಡ ವಿದ್ಯಾವಂತರಾಗಬೇಕು ಎಂಬ ಪ್ರಾಮಾಣಿಕ ಮನೋಭಾವನೆ ಹೊಂದಿರುವ ವ್ಯಕ್ತಿ ಎಂದರೆ ಶಂಕರ್ ಕೋಡ್ಲ ಅವರು.
ಕಲಬುರಗಿ ನಗರದಲ್ಲಿ ಹಾಗೂ ಸೇಡಂ ತಾಲೂಕಿನ ತಮ್ಮ ಸ್ವಗ್ರಾಮದಲ್ಲಿ ಪ್ರಾಥಮಿಕ ತರಗತಿಯಿಂದ ಪದವಿ ತರಗತಿಯವರಿಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಅದರಲ್ಲಿ ಯಶಸ್ವಿಯಾಗಿದ್ದಾರೆ. ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದರು. ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಪಡೆದುಕೊಂಡು ಬಡ ಮತ್ತು ಹಲವಾರು ವಿದ್ಯಾರ್ಥಿಗಳಿಗೆ ಪುಕ್ಕಟೆ ಶಿಕ್ಷಣ ಮತ್ತು ಹಾಸ್ಟೆಲ್ ಸೌಲಭ್ಯ ಮಾಡಿಕೊಟ್ಟರು.
ಸಾಮಾಜಿಕ ಕಾರ್ಯಗಳಲ್ಲಿ, ಪತ್ರಿಕಾ ರಂಗದಲ್ಲಿ, ದೃಶ್ಯ ಮಾಧ್ಯಮದಲ್ಲಿ, ತಮ್ಮ ಚಾಪು ಮೂಡಿಸಿದರು. ಹುಟ್ಟಿದರೆ ಶಂಕರ್ ಕೋಡ್ಲಾ ಅಂತಹ ಮಗ ಹುಟ್ಟಬೇಕು ಎಂದು ಹಲವಾರು ತಾಯಂದಿರು ಹಂಬಲಿಸಿದ್ದು ಉಂಟು.
ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ಹುಟ್ಟಿನಿಂದಲೂ ಸಂಘರ್ಷದ ಜೀವನವನ್ನೇ ನಡೆಸುತ್ತಾ ಬಂದರು. ಎಲ್ಲಿಯವರೆಗೆ ಹೋರಾಟ ಗೆಲ್ಲುವವರೆಗೆ ಹೋರಾಟ, ಸಾಯುವವರೆಗೂ ಹೋರಾಟ ಎಂಬ ಮಂತ್ರವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದ ವ್ಯಕ್ತಿ ಈ ಶಂಕರ್ ಕೊಡ್ಲಾ ಅವರು.
ಸಂಘರ್ಷಮಯ ಜೀವನವನ್ನೇ ಸಾಗಿಸುತ್ತಾ ಹೋರಾಡುತ್ತ ನಡೆದ ಶಂಕರ್ ಕೋಡ್ಲ ಅವರು ಬೆಳ್ಳಗಿರುವುದೆಲ್ಲ ಹಾಲೆಂದು ನಂಬುವ ಮುಗ್ಧ ಸ್ವಭಾವದವರು.
ಸಮಾಜದಲ್ಲಿ ಹುಟ್ಟಿದ 100 ಜನರಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಶಂಕರ್ ಕೊಡ್ಲಾ ಅವರಂತೆ ಜನ್ಮ ತಳೆದಿದ್ದೆ ಆದರೆ ಭಾರತ ದೇಶ ಸುಭಿಕ್ಷೇಯ ನಾಡಾಗುತ್ತದೆ. ಹಲವು 100 ಅಮೆರಿಕಗಳನ್ನು ಮೀರಿಸಬಲ್ಲಂತಾಗುತ್ತದೆ.
ಮುಗ್ಧ ಸ್ವಭಾವದ ಶಂಕರ್ ಕೂಡ ಅವರು ನಮ್ಮ ನಡುವೆ ಇನ್ನೂ 21 ವರ್ಷ ಬದುಕಿ ಬಾಳಲಿ ನೂರು ವರ್ಷದ ಸಂಭ್ರಮ ಇದೇ ವೇದಿಕೆಯಲ್ಲಿಯೇ ವಿಜೃಂಭಣೆಯಿಂದ ನಡೆಯಲಿ ಎಂದು ಹರಸಿ ಹಾರೈಸೋಣ.
ಪತ್ರಕರ್ತರು ವಕೀಲರು ಪ್ರಜಾಶ್ರೀ ಕನ್ನಡ ಪ್ರಾಕ್ಷಿಕ ಪತ್ರಿಕೆ, ಪ್ರಜಾಶ್ರೀ ಯುಟ್ಯೂಬ್ ಚಾನೆಲ್, ಪ್ರಜಾಶ್ರೀ ಲಾ ಇಂಫಾರ್ಮೇಷನ್ ಬೆಂಗಳೂರು. 973113141.




