ಏಪ್ರಿಲ್ 15ರವರೆಗೆ ಎಡದಂಡೆ ಕಾಲುವೆಗೆ ನೀರು ಹರಿಸಲು ಟ್ಯಾಕ್ಟರ್ ರ್ಯಾಲಿಯೊಂದಿಗೆ ಮಾಜಿ ಸಚಿವರು ನರಸಿಂಹ ನಾಯಕ ರಾಜುಗೌಡ

ಏಪ್ರಿಲ್ 15ರವರೆಗೆ ಎಡದಂಡೆ ಕಾಲುವೆಗೆ ನೀರು ಹರಿಸಬೇಕೆಂದು ಇಂದು ಹುಣಸಿಗಿಯಿಂದ ನಾರಾಯಣಪುರ ವರೆಗೆ ಟ್ಯಾಕ್ಟರ್ ರ್ಯಾಲಿಯೊಂದಿಗೆ ಮಾಜಿ ಸಚಿವರು ನರಸಿಂಹ ನಾಯಕ ರಾಜುಗೌಡ
ಮಾರ್ಚ್ 26ರಂದು ಹುಣಸಗಿ ಯಿಂದ ನಾರಾಯಣಪುರ ಬಸವಸಾಗರ ಅಣೆಕಟ್ಟೆ ವರೆಗೆ ಇಂದು ಮಾಜಿ ಸಚಿವರಾದ ನರಸಿಂಹ ನಾಯಕ ರಾಜುಗೌಡ ಹಾಗೂ ಎಲ್ಲಾ ರೈತ ಸಂಘಟನೆಗಳು ಕರವೇ ಸಂಘಟನೆಗಳು ಸಾಮೂಹಿಕವಾಗಿ ನೂರಾರು ಟ್ಯಾಕ್ಟರ್ಗಳೊಂದಿಗೆ ರ್ಯಾಲಿ ನಡೆಸಿದರು
ಲಕ್ಷಾಂತರ ರೈತರು ಬೆಳೆದಿರುವ ಬೆಳೆಗೆ ನೀರು ಬಿಡಲು ಸರಕಾರ ಸಮರ್ಪಕವಾಗಿ ನೀರು ಬಿಡುತ್ತಿಲ್ಲ ಇಲ್ಲಿಯವರೆಗೆ ರೈತರ ಕೊಟ್ಟ ಮನವಿಗೆ ಸ್ಪಂದಿಸದೆ ತಮ್ಮ ನಿರ್ಧಾರ ತೆಗೆದುಕೊಂಡು ಬೇಕಾಬಿಟ್ಟಿ ನಿರ್ಧಾರ ತೆಗೆದುಕೊಂಡು ನೀರು ಬಿಡುವುದು ಇದು ಈ ಭಾಗದ ರೈತರ ದುರ್ದೈವ ಕರವಾಗಿದೆ
ಮಾಜಿ ಸಚಿವ ರಾಜೇಗೌಡರು ಮಾತನಾಡಿ ಈ ಭಾಗದ ಶಾಸಕರು ವಿಧಾನಸಭೆಯಲ್ಲಿ ಇಲ್ಲಿನ ರೈತರ ಬಗ್ಗೆ ನೀರಿನ ಬಗ್ಗೆ ಯಾವುದೇ ಚರ್ಚೆ ಮಾಡದೆ ನೀರಾವರಿ ಸಲಹೆ ಸಮಿತಿ ತೆಗೆದುಕೊಂಡ ನಿರ್ಧಾರ ರೈತರ ಪರವಾಗಿ ಇರಲಿಲ್ಲ ರೈತರಿಗೆ ಬೇಕಾಗಿರುವುದು ಏಪ್ರಿಲ್ 15ರವರೆಗೆ ನಿರಂತರವಾಗಿ ನೀರು ಹರಿಸಬೇಕಿತ್ತು ಇವರು ತೆಗೆದುಕೊಂಡ ನಿರ್ಧಾರ ಮಾರ್ಚ್ 25ಕ್ಕೆ ಎಡದಂಡೆ ಕಾಲುವೆ ಗೇಟ್ ಹಾಕಲಾಯಿತು ಏಪ್ರಿಲ್ ಒಂದರಿಂದ ಆರರವರೆಗೆ ನೀರು ಹರಿಸಿದರೆ ಯಾವೊಬ್ಬ ರೈತರು ಬೆಳೆಯ ಬೆಳೆಯಲು ಸಾಧ್ಯವಿಲ್ಲ ದಯಮಾಡಿ ಹಾಕಿರುವ ಗೇಟ್ ಅನ್ನು ತೆಗೆದು ಏಪ್ರಿಲ್ 15ರವರೆಗೆ ನಿರಂತರ ನೀರ್ ಹರಿಸಬೇಕು ಇಲ್ಲವಾದರೆ ಈ ಭಾಗದ ರೈತರೊಂದಿಗೆ ಉಗ್ರವಾದ ಹೋರಾಟ ಮಾಡಲು ನಿರ್ಧರಿಸಲಾಗುವುದು ಎಂದರು ಇದೇ ಸಂದರ್ಭದಲ್ಲಿ ಬಸವಸಾಗರ ಅಣೆಕಟ್ಟಿಗೆ ಮುತ್ತಿಗಾಕಲು ಮುಂದಾದಾಗ ಪೊಲೀಸರು ಇವರನ್ನು ತಡೆದರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಎರಡು ದಿನ ಕಾಲಾವಕಾಶ ಗಡುವ ನೀಡಿ ವಿಚಾರ ಮಾಡಿ ಮುಂದಿನ ದಿನಗಳಲ್ಲಿ ನಿರಂತರವಾಗಿ ನೀರು ಹರಿಸಬೇಕೆಂದು ಪ್ರತಿಭಟನೆಯು ಪಡೆಯಲಾಯಿತು ಇದೇ ಸಂದರ್ಭದಲ್ಲಿ ಹಿರಿಯ ರೈತ ಮುಖಂಡರು ಹಿರಿಯ ರಾಜಕಾರಣಿಗಳು ಹಾಗೂ ಹಲವು ಸಂಘಟನೆಗಳು ಉಪಸ್ಥಿತರಿದ್ದರು
ಗುಂಡಪ್ಪ ಜೆ ಬೋಗಿ ಬೈಲಕುಂಟಿ ವರದಿ ಯಾದಗಿರಿ



