ಸುದ್ಧಿ

** ಕನಕಗಿರಿ ಪಟ್ಟಣದಲ್ಲಿ ಆದರ್ಶ ಮೂರ್ತಿ ಶ್ರೀರಾಮನವಮಿ ಆಚರಣೆ**

ಆದರ್ಶ ಮೂರ್ತಿ ಶ್ರೀರಾಮನವಮಿ ಆಚರಣೆ*

ಕನಕಗಿರಿ ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಂದು ರಾಮನವಮಿ ಪ್ರಯುಕ್ತವಾಗಿ ಹನುಮನ ದೇವಸ್ಥಾನ ಹಾಗೂ ಕನಕಗಿರಿ ಆರಾಧ್ಯ ದೈವ ವಾದ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಅಭಿಷೇಕ ಹಾಗೂ ತುಳಸಿ ಅರ್ಚನಾ ರಾಮ ಭಜನೆ ಬಂದ ಭಕ್ತರಿಗೆ ಪಾನಕ ಹಾಗೂ ಪ್ರಸಾದವನ್ನು ಅನ್ನ ಸಂತಾಪನೆಯನ್ನು ಮಾಡಿಸಲಾಯಿತು.

ಇನ್ನೂ ಹನುಮ ಮಾಲಾಧಾರಿಗಳಿಂದ ವಿಶೇಷ ಪೂಜೆ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ರಾಮ ಹಾಗೂ ಹನುಮನ ಭಾವಚಿತ್ರವನ್ನು ರಾಜ ಬೀದಿಯಲ್ಲಿ ವಿಜೃಂಭಣೆಯಿಂದ ಭಜನಾ ಸಂಕೀರ್ತನೆ ಜೈಕಾರವನ್ನು ಕೂಗುತ್ತಾ ಮೆರವಣಿಗೆ ಮುಖಾಂತರ ಕರ ತರಲಾಯಿತು ಮತ್ತು ವ್ಯಾಸರಾಯರ ಸ್ಥಾಪಿಸುವಂತಹ ಶ್ರೀ ಕಂಠೀರಂಗ ಆಂಜನೇಯ ಸ್ವಾಮಿ ಮತ್ತು ಸಂಜೀವರಾಯ ಗುರು ಮುಖ್ಯಪ್ರಾಣ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ಹಾಗೂ ವಿವಿಧಡೆ ಪಾನಕವನ್ನು ಮತ್ತು ಕೋಸಂಬರಿ ಯನ್ನು ಹಂಚಿ ರಾಮನವಮಿಯ ಹಬ್ಬವನ್ನು ಆಚರಿಸಲಾಯಿತು ಜೊತೆಗೆ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಕ್ತರು ಹನುಮ ಮಾಲಧಾರಿಗಳು ಪಾಲ್ಗೊಂಡಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ:8867257737

Related Articles

Leave a Reply

Your email address will not be published. Required fields are marked *

Back to top button