ಸುದ್ಧಿ

ಕನಕಗಿರಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಸ್ಥಾಪನೆಯ ದಿನಾಚರಣೆ*

ಕನಕಗಿರಿಯಲ್ಲಿ ಬಿಜೆಪಿ ಪಕ್ಷದ ಸ್ಥಾಪನೆಯ ದಿನಾಚರಣೆ*

ಕನಕಗಿರಿ ಪಟ್ಟಣದ ದಿನಾಂಕ :- 06-04-2025 ರಂದು
ಭಾರತೀಯ ಜನತಾ ಪಾರ್ಟಿ ಕನಕಗಿರಿ ಮಂಡಲದಲ್ಲಿ
ಬಿ ಜೆ ಪಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕನಕಗಿರಿ ಮಂಡಲ ಬಿಜೆಪಿ ಕಾರ್ಯಾಲಯದ ಮೇಲೆ ಧ್ವಜಾರೋಹಣ ಕಾರ್ಯಕ್ರಮವನ್ನು ಕನಕಗಿರಿ ಮಂಡಲ ಅಧ್ಯಕ್ಷರಾದ ಸಣ್ಣ ಕನಕಪ್ಪ ಇವರ ನೇತೃತ್ವದಲ್ಲಿ, ಮಾಡಲಾಯಿತು. ತದನಂತರ ಪಟ್ಟಣದ ಬೂತ್ ನಂಬರ್ 78 ಕನಕಗಿರಿ 13ನೇ ವಾರ್ಡಿನ ಪಟ್ಟಣ ಪಂಚಾಯತ್ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ ಇವರ ಮನೆಯ ಮೇಲೆ ಪಕ್ಷದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರೆವೇರಿಸಿ ತದನಂತರದಲ್ಲಿ ಮಂಡಲದ ವಿವಿಧ ಬೂತ್ ಗಳಲ್ಲಿ ತಮ್ಮ ತಮ್ಮ ಮನೆಗಳ ಮೇಲೆ ಪಕ್ಷದ ದ್ವಜಾರೋಹಣ ಮಾಡಿದರು.

ನಂತರ ಮಾತನಾಡಿದ ಕನಕಗಿರಿ ಮಂಡಲ ಅಧ್ಯಕ್ಷರಾದ ಸಣ್ಣ ಕನಕಪ್ಪ ಬಿಜೆಪಿ ಪಕ್ಷ ಒಂದು ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ ಈ ಪಕ್ಷವು ಬೆಳೆಯಲು ಒಬ್ಬ ಕಾರ್ಯಕರ್ತನ ಶ್ರಮ ಹಾಗೂ ಹೋರಾಟಗಳು ಅನೇಕ ವಿದ್ದು ಇದರ ಸಿದ್ದಾಂತ ಗಳು ಜನರಲ್ಲಿ ಹೊಸ ಉಮ್ಮಸ್ಸು ಮೂಡಿಸಿದೆ ಮತ್ತು ಪ್ರತಿಯೊಬ್ಬ ಕಾರ್ಯಕರ್ತನು ನಿಷ್ಕಲ್ಮಶವಾಗಿ ಪಕ್ಷದ ಹಿತಕ್ಕಾಗಿ ಅತ್ಯಂತ ಅಮ್ಮ ಉನ್ನತ ಸಮಯವನ್ನು ದೇಶದ ಹಿತಕ್ಕಾಗಿ ಶ್ರಮಿಸಿ ಇರುತ್ತಾನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನಕಗಿರಿ ಮಂಡಲ ಅಧ್ಯಕ್ಷರಾದ ಸಣ್ಣ ಕನಕಪ್ಪ, ಜಿಲ್ಲಾ ಭಾ. ಜ. ಪಾ ಉಪಾಧ್ಯಕ್ಷರಾದ ವಾಗೀಶ್ ಹಿರೇಮಠ, ಮಂಡಲ ಪ್ರ. ಕಾರ್ಯದರ್ಶಿಗಳಾದ ಪ್ರಕಾಶ ಹಾದಿಮನಿ, ಪಟ್ಟಣ ಪಂಚಾಯತ್ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ, ಮುಖಂಡರಾದ ರುದ್ರಸ್ವಾಮಿ, ಹನುಮಂತ ರೆಡ್ಡಿ, ದೊಡ್ಡಬಸವ ಹಿರೇಖೆಡ, ಯುವ ಮೊರ್ಚಾ ಪ್ರ. ಕಾರ್ಯದರ್ಶಿಗಳಾದ ವಿನಾಯಕ ಚಿತ್ತರಕಿ ಮತ್ತು ಪೃಥ್ವಿ ಮ್ಯಾಗೇರಿ, ಒಬಿಸಿ ಮೊರ್ಚಾ ಅಧ್ಯಕ್ಷರಾದ ಹರೀಶ್ ಪೂಜಾರ, ಯುವ ಮುಖಂಡರಾದ ಅರುಣ್ ಬಿ, ವೀರಭದ್ರಪ್ಪ ಗುಗ್ಗಳಶೆಟ್ಟಿ, ಚಂದ್ರು ಚೋಳಿನ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button