ಕೊಡೇಕಲ್ಲ ಮಹಾಶಿವರಾತ್ರಿ ಕಾಲಜ್ಞಾನ ನುಡಿ 2025.

ಕೊಡೇಕಲ್ಲ ಮಹಾಶಿವರಾತ್ರಿ ಕಾಲಜ್ಞಾನ ನುಡಿ 2025
ಶರಣು ದೇವರ ದೇವ ಶರಣುಸತಿ ಭಿನ್ನಹ
ಮರುಳ ಶಂಕರನೆ ಮತಿಗೂಡು/ವಚನವ
ತಿರುಳೊಳಾಗಿದ್ದು ತಿಳುವೆನ್ನ//
ಶರಣನಾದವರುˌಭಕ್ತರಾದವರು ನಿಷ್ಠೆಯಿಂದ ಕಾರ್ಯಮಾಡುವಾಗ ಗುರುವಾದವನು ಭಕ್ತನನ್ನು ಪರೀಕ್ಷಿಸುತ್ತಾನೆ ಆ ಭಕ್ತಿಯಲ್ಲಿ ವ್ಯತ್ಯಾಸವಾಗಿರುವದನ್ನು ಭಕ್ತ ತಿಳಿಯದಿದ್ದರೆ ಗುರುವೆ ಬಂದು ಭಕ್ತನನ್ನು ಸರಿದಾರಿಗೆ ತಂದು ಮಾರ್ಗದರ್ಶನ ಮಾಡುತ್ತಾನೆ ಎಂಬುದು ಈ ನುಡಿಯ ತಾತ್ಪರ್ಯವಾಗಿದೆ ಅಂದರೆ ಒಳ್ಳೆಯವರಿಗೆˌಉತ್ತಮರಿಗೆ ಪರೀಕ್ಷೆಯ ಕಾಲವಿದು ಆದರೆ ಒಳ್ಳೆಯವರು ಎದರದೆ ಭಕ್ತಿ ಮಾರ್ಗದಲ್ಲಿರುವವರಿಗೆ ಗುರುವೆ ಅಂತ ಪರೀಕ್ಷೆಯಿಂದ ಪಾರುಮಾಡುತ್ತಾನೆ.
ಈ ನುಡಿಯನ್ನು ರೈತ ಸಮುದಾಯಕ್ಕೆ ನೋಡುವುದಾದರೆ ಜಗತ್ತಿಗೆ ಅನ್ನವ ನೀಡುವ ರೈತರಿಗೆ ಮಳೆಬೆಳೆಗಳನ್ನು ಸಮಯಕ್ಕೆ ಸರಿಯಾಗಿ ಆಗಬೇಕಾದರೆ ಮೊದಲು ನಿಶ್ಚಲ ನಂಬಿಗೆ ಬೇಕು ಅಂತವರಿಗೆ ಪರೀಕ್ಷೆಕಾಲ ಒದಗಿಬಂದು ಮಳೆ ಬೆಳೆ ಕಡಿಮೆಯಾದರು ನಂತರ ಉತ್ತಮರಿಗೆ ಗುರುವೆ ಕಷ್ಟದಿಂದ ದೂರಮಾಡಿ ಮಳೆˌಬೆಳೆಯನ್ನು ನೀಡುತ್ತಾನೆ ಎಂಬುದಾಗಿದೆ ಕೊನೆಗೆ ರೈತರಿಗೆ ಉತ್ತಮ ಫಲಗಳು ದೊರಕುವದು ಆದ್ದರಿಂದ ರೈತರು ಗುರು ಬಸವನ ಮೇಲೆ ಅತ್ಯಂತ ಭಕ್ತಿಯಿಟ್ಟು ನಡೆಯಬೇಕೆಂದು ತಿಳಿಸಲಾಗುವದು.
ವ್ಯಾಪಾರಸ್ತರುˌಉದ್ದಿಮೆದಾರರು ಭಕ್ತಿ ಮಾರ್ಗದಲ್ಲಿದ್ದರು ಸಹ ಪರೀಕ್ಷೆ ಇದ್ದೆ ಇರುವದು ಆದರೆ ಉತ್ತಮರನ್ನು ರಕ್ಷಿಸಲು ಗುರುವೇ ಆಗಮಿಸಿ ರಕ್ಷಿಸುವನು.
ನಾಗರಿಕರಿಗೆˌಮಾನವ ಕುಲಕೋಟಿಗೆ ಇದರ ಸಂದೇಶವೇನೆಂದರೆ ಸರಿ ಮಾರ್ಗದಲ್ಲಿದ್ದವರಿಗೆ ಪರೀಕ್ಷೆಕಾಲ ಬಂದರು ಸಹ ಅವರಿಗೆ ಗುರುಮಾರ್ಗದರ್ಶನದಿಂದ ಒಳ್ಳೆಯದೆ ಆಗುತ್ತದೆ ಎಂಬುದಾಗಿದೆ.
ಸರ್ವ ಮಾನವರಿಗೆ ಒಳ್ಳೆಯದಾಗಬೇಕೆಂದರೆ ಉತ್ತಮ ಮಾರ್ಗˌಕಷ್ಟದಲ್ಲಿದ್ದವರಿಗೆ ಕೈಲಾದಷ್ಟು ಸಹಾಯˌಹಸಿದವರಿಗೆ ಅನ್ನ ನೀಡುವ ಸಂಸ್ಕ್ರತಿ ನಮ್ಮದಾದರೆ ಸ್ವಲ್ಪ ಪರೀಕ್ಷೆ ಬಂದರು ಸಹ ನಮಗೆ ಗುರುದರ್ಶನದಿಂದˌಮಾರ್ಗದರ್ಶನದಿಂದ ಉತ್ತಮ ಫಲವೆ ದೊರೆಯುವದು ಎಂಬುದಾಗಿದೆ.
ಸರ್ವರಿಗೂ ಮಹಾಶಿವರಾತ್ರಿಯ ಶುಭಾಶಯಗಳು
ಸರ್ವೇಜನಃ ಸುಃಖಿನೋ ಭವಂತು🙏
ವಿವರಣೆ
ಶ್ರೀ ಬಸವರಾಜಯ್ಯ ಸ್ವಾಮಿಗಳು ಭದ್ರಗೋಳ ಕೊಡೇಕಲ್ಲ



