ಸುದ್ಧಿ

ಬಿ.ಬಿ.ಎಂ.ಪಿ ಅವ್ಯವಹಾರಗಳ ನಡುವೆ ಗ್ರೇಟರ್ ಬೆಂಗಳೂರು ಬೇಡ – ಕೆ ಜಿ. ಶ್ರೀನಿವಾಸ್ ಬೆಂಗಳೂರು.

ಬಿ.ಬಿ.ಎಂ.ಪಿ ಅವ್ಯವಹಾರಗಳ ನಡುವೆ ಗ್ರೇಟರ್ ಬೆಂಗಳೂರು ಬೇಡ – ಕೆ ಜಿ. ಶ್ರೀನಿವಾಸ್ ಬೆಂಗಳೂರು. ಬಿ.ಬಿ.ಎಂ.ಪಿ ಅವ್ಯವಹಾರಗಳ ನಡುವೆ ಗ್ರೇಟರ್ ಬೆಂಗಳೂರು ಬೇಡ ಎಂದು ಕೆ ಜಿ. ಶ್ರೀನಿವಾಸ್ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ದೂರಿದರು. ಬಿ.ಬಿ.ಎಂ.ಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿ.ಬಿ.ಎಂ.ಪಿ) 2005 ರಿಂದ 2017ರ ಅವಧಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ ಪೌರಕಾರ್ಮಿಕರ ಇ.ಎಸ್.ಐ. ಮತ್ತು ಪಿ.ಎಫ್. ನಿಧಿಗಳ ಬಗ್ಗೆ ಉಂಟಾಗಿರುವ ಭಾರಿ ಅವ್ಯವಹಾರ ಕುರಿತು ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು (ACB/ಬೆಂ.ನರಾ/ಮೊ.ಸಂಖ್ಯೆ 40/2017), ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುಮಾರು ₹384 ಕೋಟಿ ಮೌಲ್ಯದ ಇ.ಎಸ್.ಐ. ಮತ್ತು ಪಿ.ಎಫ್. ನಿಧಿ, ಹಾಗೂ 6,600 ನಕಲಿ ಪೌರಕಾರ್ಮಿಕರ ವೇತನದ ರೂಪದಲ್ಲಿ ₹550 ಕೋಟಿ ಮೊತ್ತದ ವಂಚನೆಯ ಆರೋಪ ಕೇಳಿಬಂದಿದೆ.
ಈ ಸಂಬಂಧ ಈಗಾಗಲೇ ಬಿ.ಬಿ.ಎಂ.ಪಿ ಯಿಂದ ತಾತ್ಕಾಲಿಕ ತನಿಖಾ ತಂಡ ರಚನೆ ಗೊಂಡಿದ್ದು, ತನಿಖೆಗೆ ಸಹಕಾರ ನೀಡಲಾಗುತ್ತಿದೆ. ಆದರೆ, ನಕಲಿ ಪೌರಕಾರ್ಮಿಕರ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಖಾಯಂ ಗೊಳಿ ಸುವ ಪ್ರಕ್ರಿಯೆ ಆರಂಭಿಸಿದ್ದರೆ, ನೈಜವಾಗಿ ದುಡಿದ ಕಾರ್ಮಿಕರು ವಂಚಿತರಾಗುವ ಭೀತಿ ಇದೆ ಎಂದು ಶ್ರೀನಿವಾಸ್ ಅವರು ತಿಳಿಸಿದರು.
“ಅನಧಿಕೃತವಾಗಿ ಗೈರು ಹಾಜ ರಿರು ವವರು ಮತ್ತು ಒಂದು ವರ್ಷದೊಳಗಿನ ನೇರ ಪಾವತಿ ಪೌರ ಕಾರ್ಮಿಕ ರನ್ನೂ ಖಾಯಂಗೊಳಿ ಸುವ ಪ್ರಕ್ರಿಯೆಯಲ್ಲಿ ಪರಿಗಣಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ನ್ಯಾಯೋಚಿತ ವಲ್ಲ. ಪ್ರಕರಣದ ತನಿಖೆ ಮುಕ್ತಾಯ ವಾಗಿ, ನಕಲಿ ಪೌರಕಾರ್ಮಿಕರ ಪಟ್ಟಿ ಅಧಿಕೃತವಾಗಿ ಪ್ರಕಟ ವಾಗು ವವರೆಗೆ ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿಯಬೇಕು,” ಎಂದು ಆಗ್ರಹಿಸಿದರು.
ಇದಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ತನಿಖಾ ತಂಡ ಹಾಗೂ ಬಿ.ಬಿ.ಎಂ.ಪಿಯ ಕಾನೂನು ವಿಭಾಗದ ಮುಖ್ಯಸ್ಥರೊಂದಿಗೆ ತಕ್ಷಣ ಜಂಟಿ ಸಭೆ ಕರೆಯಬೇಕು ಮತ್ತು ಖಾಯಂಗೊಳಿಸುವ ಪ್ರಕ್ರಿಯೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಸರ್ಕಾರದ ಮೇಲೆ ಆಗ್ರಹ ವ್ಯಕ್ತ ಪಡಿಸಿದರು. ಬಿ.ಬಿ.ಎಂ.ಪಿ ಯಲ್ಲಿ ಆಂಧ್ರದ ಕಾರ್ಮಿಕರು ಅತಿ ಹೆಚ್ಚು ಇದ್ದಾರೆಂದು ಮತ್ತು ತಮಿಳುನಾಡಿನ ಜನ ಇದ್ರೆ ಕನ್ನಡಿಗರಿಗೆ ಉದ್ಯೋಗ ವಿಲ್ಲ ಎಂದರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button