ಸುದ್ಧಿ

ನಟ ಕಮಲ್ ಹಾಸನ್ ಅವಹೇಳನ ಹೇಳಿಕೆ ವಿರುದ್ಧ ಕರವೇ ಕಾರ್ಯಕರ್ತರು ಗರಂ

ನಟ ಕಮಲ್ ಹಾಸನ್ ಅವಹೇಳನ ಹೇಳೆಕೆ ವಿರುದ್ಧ ಕರವೇ ಕಾರ್ಯಕರ್ತರು ಗರಂ

ಕನಕಗಿರಿಯ ತಾಲೂಕ ಆಡಳಿತ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ತಾಲೂಕ್ ಅಧ್ಯಕ್ಷ ಶರಣಪ್ಪ ಪಲ್ಲವಿ ಅವರ ನೇತೃತ್ವದಲ್ಲಿ ತಸೀಲ್ದರ್ ವಿಶ್ವನಾಥ್ ಮುರಡಿ ಅವರಿಗೆ ಮನವಿ ಸಲ್ಲಿಸಿದರು. ಕಮಲಹಾಸನ್ ಚಲನ ಚಿತ್ರ ನಟಿ ಕನ್ನಡ ಬಗ್ಗೆ ಹಗುರವಾಗಿ ಮಾತಡಿದ್ದು ಕನ್ನಡಿಗರಿಗೆ ಅವಮಾನ ಮಾಡಿದ್ದು ಮಾಹಾಅಪರಾದ ವಾಗಿದ್ದು ಹಾಗೂ ಕರ್ನಾಟಕದಲ್ಲಿ ತಮಿಳು ಚಿತ್ರಗಳನ್ನು ಕಡ್ಡಾಯವಾಗಿ ಬಂದ್ ಮಾಡುವ ಬಗ್ಗೆ, ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ ) ಕಮಲಹಾಸನ ಚಲನ ಚಿತ್ರ ನಟ ಕನ್ನಡದ ಬಗ್ಗೆ ಹಗುರವಾಗಿ ಮಾತಡಿದ್ದು ಕನ್ನಡದ ಬಗ್ಗೆ ಜ್ಞಾನ ವಿಲ್ಲದ ತನ್ನ ಒಣ ಪ್ರತಿಷ್ಠೆಯ ಸಲುವಾಗಿ ವೇದಿಕೆಯ ಮೇಲೆ ಕನ್ನಡವು ತಮಿಳಿನಿಂದ ಬಂದಿದ್ದು ಎಂದು ಹೇಳಿದ್ದು ಅತ್ಯಂತ ಖಂಡಿನಿಯ. ಇವರು ಕನ್ನಡ ಇತಿಹಾಸದ ಅಲ್ಪಜ್ಞಾನವು ಇಲ್ಲದೆ ಇಂತಹ ಉದಾಸಿನ ಮಾತುಗಳಿಂದ ಪ್ರಚಾರ ಗಿಟ್ಟಿಸುವ ಇಂತಹ ನಟರ ಚಿತ್ರಗಳನ್ನು ಕರ್ನಾಟಕದಲ್ಲಿ ಬಂದಮಾಡಬೇಕು. ಕೂಡಲೇ ಕ್ಷಮೇ ಕೇಳಬೇಕು ಇಲ್ಲವಾದರೆ ಉಗ್ರಹೋರಾಟ ಮಾಡಲಾಗುವುದು ಎಂದು ಮೂಲಕ ಸರಕಾರಕ್ಕೆ ಮನವಿಯ ಮೂಲಕ ಕರವೇ ಕಾರ್ಯಕರ್ತರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷರದ ಶರಣಪ್ಪ ಪಲ್ಲವಿ ಉಪಾಧ್ಯಕ್ಷ ಶರಣಪ್ಪ ಸಜ್ಜನ್ ಮಾಲಿಕೇಶ್ ಕೋಟೆ ರವಿ ಭಜಂತ್ರಿ ಶ್ರೀಧರ್ ಯಾದವ್ ಹುಲಿಗೆಮ್ಮ ನಾಯಕ್ ವಿಶಾಲಾಕ್ಷಿ ರಾಜ್ಮೊಹಮ್ಮದ್ ಗೌರಿಪೂರ್ ರಚಪ್ಪಬ್ಯಲ್ಲಿ ಗಣೇಶ್ ರೆಡ್ಡಿ ಕೊಟ್ರೇಶ್ ಹರೀಶ್ ಪೂಜಾರ್ ಮಂಜುನಾಥ್ ಪತ್ತಾರ್ ಇನ್ನು ಕೆಲವು ಕಾರ್ಯಕರ್ತರು ಹಾಗೂ ಕನ್ನಡ ಪರ ಅಭಿಮಾನಿಗಳು ಉಪಸ್ಥಿತರಿದ್ದರು.
ಗೌತಮ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button