ಆಶ್ರಯರಹಿತ ನೊಂದವರ ಬಹಿರಂಗ ಪತ್ರ………………………………… ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ, ವಿಧಾನಸೌಧ ಬೆಂಗಳೂರು ಇವರಿಗೆ….

……
ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ, ವಿಧಾನಸೌಧ ಬೆಂಗಳೂರು ಇವರಿಗೆ
ಆಶ್ರಯರಹಿತ ನೊಂದವರ ಬಹಿರಂಗ ಪತ್ರ
ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟರವರ ಮುಖಾಂತರ.
ವಿಷಯ : ಇಲಕಲ್ಲ ತಾಲೂಕಾ ಪಟ್ಟಣದ ನಗರಸಭೆ ಸರ್ವೇ ನಂ : 192 / 196/195/ 30 /29 /24 /21 /1 / 4 ಅ / 5 3 /5 /6 ಎ 8 ಬ ೧ 8 /11/ 12 ರಲ್ಲಿ ಸರಕಾರದ ಪಡಾ ಜಮೀನು 0.33ಎಕರೆ 33.00 ಗುಂಟೆ / 0.21/0.39 ಜಾಗದಲ್ಲಿ ಪ್ಲಾಟ್ ಹಂಚಿಕೆ (ನಿವೇಶನ ) ಗೆ ಮಂಜೂರಾತಿ ( ಅಕ್ರಮ -ಸಕ್ರಮ ಯೋಜನೆ ) ಅಡಿಯಲ್ಲಿ ಸಕ್ರಮಿಕರಣಗೊಳಿಸಲು ಸರಕಾರದ ಆದೇಶ ಹಕ್ಕು ಪತ್ರ ಪಡೆಯುವ ಕುರಿತು.
ಉಲ್ಲೇಖ :1.ಜಿ. ಅಬಾ :ಏನ್. ಡಿ. ಸಿ ಆರ್ :54 / 2022 – 23.
2.ಸಂಖ್ಯೆ :ಜಿಅಬಾ /ಎಲ್ ಏನ್ ಡಿ :ಸಿ ಆರ್ :553/2024 -25. ದಿ :30.11.2024.
3.ಎಂ ಡಿ ಆರ್ ಜಿ ಎಚ್ ಸಿ ಎಲ್ 03 ಪಿ ಜಿ ಟಿ 07 2024. ದಿನಾಂಕ :29.3.2025.
ಮಾನ್ಯರೇ,
ಮೇಲ್ಕಂಡ ವಿಷಯ ಹಾಗೂ ಸರಕಾರದ ಉಲ್ಲೇಖಕ್ಕೆ ಅನ್ವಯ ನಾನು ಹನಮಂತ ರಾ. ಮಾದರ. ಪ್ರಜಾಶ್ರೀ ಆನ್ಲೈನ್ ಪತ್ರಿಕೆಯ ಬಾಗಲಕೋಟ ಜಿಲ್ಲಾ ಗ್ರಾಮೀಣ ಚೀಪ್ ರಿಪೋರ್ಟರ್ ನಾವು ಶ್ರೀಮತಿ ರೇಣುಕಾ ಉಮೇಶ ಮಾದರ. ಸಾ. ಹಿರೇಹುನಕುಂಟಿ.ಪೋಸ್ಟ್. ಜಂಬಲದಿನ್ನಿ.ತಾ. ಇಲಕಲ್. ಜಿ. ಬಾಗಲಕೋಟ. ಉಮೇಶ ಎಮ್ ಮಾದರ.ಸಾ: ಹಿರೇಹುನಕುಂಟಿ. ತಾ ಇಲಕಲ್. ಹುಲಗಪ್ಪ ದುರಗಪ್ಪ ಮಾದರ. ಸಾ:ತುಂಬ ಇಲಕಲ್ ಅಲಂಪೂರಪೇಟ. ಜಿಲ್ಲಾ. ಬಾಗಲಕೋಟ. ವಿಶ್ವನಾಥ ಚ ಜಂಬಲದಿನ್ನಿ ಪಾಟೀಲ. ಸಾ: ತುಂಬ. ಪೋಸ್ಟ್. ಇಲಕಲ್ ಅಲಂಪುರಪೆಟ. ಜಿಲ್ಲಾ. ಬಾಗಲಕೋಟ ಮಂಜುಳಾ ಗಂ/ ರವಿಕುಮಾರ. ಸಾ: ಕನಸಾವಿ ತಾ ಲಿಂಗಸಗೂರು. ಜಿ. ರಾಯಚೂರು.ನಾವೆಲ್ಲ ಈ ಮೇಲಿನಂತೆ ಇಲಕಲ್ಲ ತಾಲೂಕು ನಗರಸಭೆ ಖಾಯಂ ರಹವಾಸಿ ಆಗಿದ್ದು, ನಮಗೆ ಸ್ವಂತ ಮನೆ ಇರುವುದಿಲ್ಲ, ಬಡವರಾಗಿದ್ದು ಬಾಡಿಗೆ ಶಡ್ದಿನಲ್ಲಿ ಸುಮಾರು 5 ವರ್ಷಗಳ ಕಾಲ ವಾಸಿಸುತ್ತಿದ್ದೇವೆ ಎಂದು ಆರೋಪಿಸಿರುತ್ತಾರೆ. ಸರಕಾರದ ಯಾವುದೇ ಸೌಲಭ್ಯ ಪಡೆದಿರುವುದಿಲ್ಲ. ಈಗಿರುವ ಸರಕಾರದ ಯಾವುದಾದರು ವಸತಿ ಸೌಲಭ್ಯ ಆಶ್ರಯ ಯೋಜನೆ ( ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0) ಅಡಿಯಲ್ಲಿ ಮನೆ ಕಟ್ಟಿಕೊಳ್ಳಲು ನಮಗೊಂದು ಪ್ಲಾಟ್ / ವಸತಿ (ನಿವೇಶನ ) ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿರುತ್ತಾರೆ ಈಗಾಗಿ ಮಾನ್ಯ ಶ್ರೀ ಸಿದ್ದರಾಮಯ್ಯ ಸರಕಾರವು ಸೂಕ್ತ ಕಾನೂನು ಕ್ರಮ ಜರುಗಿಸಬೇಕು.ಇಲಕಲ್ಲ ತಾಲೂಕು ನಗರಸಭೆ, ಪಟ್ಟಣದಲ್ಲಿ ಸರ್ವೇ ನಂ :196/ 195/ 192 /17 2B /18 4/191 /186/ ಅ /185 ಅ /183 ಬಿ / 182 /181 3 / 176 1 176 2/ 170 /167 1 / ರಲ್ಲಿ ನಿವೇಶನ / ಸರಕಾರದ ಪಡಾ ಜಮೀನು ಸರಕಾರ 0.ಎಕರೆ 33 / 0.39/0.21 /ಗುಂಟೆ ನಿವೇಶನ ಮುರಟ ಖಣಿ ಇದ್ದು. ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬ ಗಳಿಗೆ ಇದರಲ್ಲಿ ಈಗಿರುವ ಪ್ರತಿಯೊಬ್ಬರಿಗೊಂದು ಪ್ಲಾಟ್ / ವಸತಿ (ಜಾಗ ) ಸಕ್ರಮಿಕರಣ
ನೀಡಬೇಕೆಂದು ಅರ್ಜಿ ಮಾಡಿಕೊಂಡಿದ್ದಾರೆ. ತಪ್ಪಿದಲ್ಲಿ ಮತ್ತು ಉದಾಸಿನ, ನಿರ್ಲಕ್ಷ್ಯ ತೋರಿದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಮಾನ್ಯ ಕಮಿಷನರ್ ಸಾಹೇಬರು ಬೆಂಗಳೂರು ಇವರ ಕಾರ್ಯಾಲಯದ ಎದುರು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತೀರ್ಮಾನಿಸಲಾಗಿದ್ದು.ಅಕ್ರಮ – ಸಕ್ರಮಿಕರಣಗೊಳಿಸಲು ಸದರಿಯ ವರಲ್ಲಿ ( ಸಂಬಂದಿಸಿದ ಎಲ್ಲಾ ದಾಖಲೆ ಪತ್ರಗಳು ಲಗತ್ತಿಸಲಾಗಿದೆ ) ಮೇ|| ರವರಲ್ಲಿ ಮಂಜೂರಾತಿ ಹಕ್ಕು ಪತ್ರ ಪಡೆದುಕೊಳ್ಳಲು ಆದೇಶಿಸ ಬೇಕೆಂದು ಆಶ್ರಯ ರಹಿತ ನೊಂದ ನಾಗರಿಕರ ಪರವಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಹಣಮಂತ ಮಾದರ. ಪ್ರಜಾಶ್ರೀ ಆನ್ಲೈನ್ ಪತ್ರಿಕೆ ಬೆಂಗಳೂರು
( 7022365401)




