ರಾಜ್ಯ

ಘಡಿವಡಿಕಿ ಶ್ರೀವಡಿಕೆಪ್ಪಯ್ಯ ತಾತನವರಿಗೆ ಒಂದೇ ಮಾತರಂ ಲಲಿತಾಕಲಾ ಸಂಸ್ಥೆಯಿಂದ ಕರ್ನಾಟಕ ರಾಜ್ಯ ಭೂಷಣ ಪ್ರಶಸ್ತಿ ಪ್ರಧಾನ

ಘಡಿವಡಿಕಿ ಶ್ರೀವಡಿಕೆಪ್ಪಯ್ಯ ತಾತನವರಿಗೆ ಒಂದೇ ಮಾತರಂ ಲಲಿತಾಕಲಾ ಸಂಸ್ಥೆಯಿಂದ ಕರ್ನಾಟಕ ರಾಜ್ಯ ಭೂಷಣ ಪ್ರಶಸ್ತಿ ಪ್ರಧಾನ

ಕನಕಗಿರಿ ತಾಲೂಕಿನ ಘಡಿವಡಿಕಿ ಗ್ರಾಮದ ಸರ್ವ ಸಮುದಾಯದ ಆರಾಧ್ಯ ದೈವ ಶ್ರೀಮಹಾಲಕ್ಷ್ಮಿ ದೇವಿಯ ಆರಾಧಕರು ಮತ್ತು ಅರ್ಚಕರಾದ ಶ್ರೀಘವಡಿಕೆಪ್ಪಯ್ಯ ತಾತನವರಿಗೆ ಸೋಮವಾರ ಬೆಂಗಳೂರಿನಲ್ಲಿನ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿ ರಂಗತರಂಗ ಕಾರ್ಯಕ್ರಮದಲ್ಲಿ ಒಂದೇ ಮಾತರಂ ಲಲಿತಾಕಲಾ ಅಕಾಡೆಮಿಯಿಂದ ಕೊಡಮಾಡುವ ಕರ್ನಾಟಕ ಭೂಷಣ ರಾಜ್ಯ ಪ್ರಶಸ್ತಿಯನ್ನು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಸರಕಾರದ ನಿವೃತ್ತ ಲೋಕಯುಕ್ತರಾದ ಸಂತೋಷ ಹೆಗಡೆ ಅವರು ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಗಿದೆ.
ಶ್ರೀವಡಿಕೆಪ್ಪಯ್ಯ ತಾತನವರು ಚಿಕ್ಕವರಿಂದಲೂ ಬಡತನದಲ್ಲಿ ಬೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯವರನ್ನು ಕಳೆದುಕೊಂಡು ಸಾಕಷ್ಟು ನೋವು ಉಂಡು ಇಂತಹದರಲ್ಲಿಯೇ ತಮ್ಮ ಕಾಯಕ ನಿಷ್ಠೆಯಿಂದ ಬಂದ ಹಣದಿಂದ ಬಹಳಷಟ್ಟು ಸಮಾಜ ಸೇವೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಹತ್ತು ವರ್ಷಗಳ ಕಾಲ ಬಡವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಬಂದಿದ್ದಾರೆ.
ಗ್ರಾಮದಲ್ಲಿ ೩೦ ಲಕ್ಷ ರೂ.ವೆಚ್ಚದ ಶ್ರೀಘಡಿವಡಿಕೀಶ್ವರ ಶರಣರ ಮಠವನ್ನು ನಿರ್ಮಾಣ ಮಾಡಿಸಿದ್ದಾರೆ. ಮೂರು ದೇವಾಲಯಗಳ ಗೋಪುರಗಳನ್ನು ನಿರ್ಮಿಸಿದ್ದಾರೆ. ಜೀವಂತ ಲಿಂಗೈಕ್ಯರಾದ ಶ್ರೀತಿರುಕಪ್ಪಯ್ಯ ತಾತನವರ ದೇವಾಸ್ಥಾನಕ್ಕೆ ಗ್ಯಾನೈಟ್ ಹಾಕಿಸಿದ್ದಾರೆ. ೧೦ ವರ್ಷಗಳಿಂದ ಶ್ರೀಮಹಾಲಕ್ಷಮಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಎರಡು ದಿನ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಸುತ್ತಾ ಬರುತ್ತಿದ್ದಾರೆ. ಒಂದು ಕೋಟಿ ರೂ.ವೆಚ್ಚದ ಶ್ರೀಮಹಾಲಕ್ಷ್ಮಿ ದೇವಿಯ ಮಹಾ ರಥೋತ್ಸವಕ್ಕೆ ೧೧ ಲಕ್ಷರೂ.ದೇಣಿಗೆ ನೀಡಿದ್ದಾರೆ.
ಈ ಎಲ್ಲ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಶ್ರೀಘಡಿವಡಿಕೆಪ್ಪಯ್ಯ ತಾತನವರಿಗೆ ಬೆಂಗಳೂರಿನ ಒಂದೆ ಮಾತರಂ ಲಲಿತಾಕಲಾ ಸಂಸ್ಥೆಯಿಂದ ಕರ್ನಾಟಕ ಭೂಷಣ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ.
ಹೈ ಕೋರ್ಟ್ ನಿವೃತ್ತ ನ್ಯಾಯಧೀಶರಾದ ಎನ್. ಎಸ್. ಪಾಟೀಲ್, ಚಿತ್ರನಟ ಶ್ರೀಧರ್,ಹಾಗೂ,ಶೃತಿ ಹರಿಹರನ್, ಡಾ.ಅನು ಅಮ್ಮನವರು, ಅಹಲ್ಯ ಫೌಂಡೇಶನ್ ಅಧ್ಯಕ್ಷೆ ಮಹಾಲಕ್ಷ್ಮಿ ಎನ್. ಎಸ್, ಶೇಖ್ ಮಾಸ್ತರ್,ಡಾ. ಸೋಮಶೇಖರ್, ಕಾರ್ಯಕ್ರಮ ಆಯೋಜಕ ರಂಗಭೂಮಿ ಕಿರುತೆರೆ ನಟ ಹಾಗೂ ನಿರ್ದೇಶಕ ವೀರೇಶ ಮುತ್ತಿನಮಠ್
ಇತರರು ಇದ್ದರು.

ಬಾಕ್ಸ್
ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಸನ್ಮಾನ್ಸಿ ಪ್ರೋತ್ಸಾಹಿಸಬೇಕು. ಸಮಾಜದಲ್ಲಿ ಶಾಂತಿ ನೆಲಸಬೇಕು. ಹಿಂದೆ ಕರ್ನಾಟಕ ಸರಕಾರದಲ್ಲಿ ಲೋಕಾಯುಕ್ತನಿದ್ದ ಸಮಯದಲ್ಲಿ ಬಹಳಷ್ಟು ಅನ್ಯಾಯ ಕಂಡೆ. ಅದನ್ನು ಹತ್ತಿಕ್ಕಲು ಪ್ರಯತ್ನಿಸಿದೆ.
ರಾಜಕೀಯ ಸೇವೆ ಆಗಬೇಕು ದಂಧೆ ಆ ಗಬಾರದು ಎಂದರು….

ಸಂತೋಷ್ ಹೆಗಡೆ
ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಸರಕಾರದ ನಿವೃತ್ತ ಲೋಕಯುಕ್ತರು……
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.

Related Articles

Leave a Reply

Your email address will not be published. Required fields are marked *

Back to top button