ರೈತರಿಗೆ ಅಗತ್ಯತೆಗೆ ಅನುಗುಣವಾಗಿ ರಸಗೊಬ್ಬರಗಳನ್ನು ಒದಗಿಸಿ : ಸಂಸದ ಜಿ ಕುಮಾರ ನಾಯಕ ರಾಯಚೂರ.

ರೈತರಿಗೆ ಅಗತ್ಯತೆಗೆ ಅನುಗುಣವಾಗಿ ರಸಗೊಬ್ಬರಗಳನ್ನು ಒದಗಿಸಿ :ಸಂಸದ ಜಿ ಕುಮಾರ ನಾಯಕ
ಜಿಲ್ಲೆಯಲ್ಲಿ ಗರ್ಭಿಣಿ ಸಾವು, ಬಾಲ್ಯವಿವಾಹವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮವಹಿಸಿ:ಸಂಸದರು
ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿದ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕರವರು ಈ ಬಾರಿ ಮುಂಗಾರು ಮಳೆಯು ಸಕಾಲಕ್ಕೆ ಬಂದಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ ರೈತರಿಗೆ ಅಗತ್ಯವಾದ ಡಿ,ಎ,ಪಿ ಯೂರಿಯಾ ಮೊದಲಾದಂತಹ ರಸ ಗೊಬ್ಬರಗಳನ್ನು ಒದಗಿಸಿ, ಮುಂದುವರೆದು ಜಿಲ್ಲೆಯಲ್ಲಿ ಗರ್ಭಿಣಿಯರ ಸಾವು ಬಾಲ್ಯ ವಿವಾಹ ದಿನೇ ದಿನೇ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೊತೆಗೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಾಲ್ಯವನ್ನು ತಡೆಗಟ್ಟಲು ಕ್ರಮವಹಿಸಿ ಜಿಲ್ಲೆಯಲ್ಲಿ ಗರ್ಭಿಣಿಯರ ಪೌಷ್ಟಿಕತೆ ಕುಗ್ಗಿಹೋಗಿದೆ ಈ ಹಿನ್ನೆಲೆ ಗರ್ಭಿಣಿಯರು ಸಾವನ್ನಪ್ಪುತ್ತಿದ್ದಾರೆ, ಗರ್ಭಿಣಿಯವರಿಗೆ ಪ್ರತಿ ತಿಂಗಳು ವೈದ್ಯಕೀಯ ಪರೀಕ್ಷೆಗಳಾದ ರಕ್ತ ಪರೀಕ್ಷೆಯಂತಹ ಮೊದಲಾದ ಟೆಸ್ಟ್ ಗಳನ್ನು ಮಾಡಿಸಿ, ನರೇಗಾ ಕೂಲಿಕಾರ್ಮಿಕರಿಗೆ ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಕೂಸಿನ ಮನೆಯನ್ನು ಕಡ್ಡಾಯವಾಗಿ ನಿರ್ಮಾಣ ಮಾಡಿ ನರೇಗಾದಲ್ಲಿ ಇನ್ನೇನಾದರೂ ಸುಧಾರಣೆಗಳನ್ನು ತರಬೇಕಾದಲ್ಲಿ ನನ್ನ ಗಮನಕ್ಕೆ ತನ್ನಿ ನಾನು ಮೇಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು. ಮುಂದುವರೆದು ನರೇಗಾ ಅಡಿಯಲ್ಲಿ ಪ್ರತಿ ಪಂಚಾಯತಿಯಲ್ಲಿ ಜನರಿಗೆ ಬಯಲು ಶೌಚಾಲಯ ಮುಕ್ತಗೊಳಿಸುವ ಕುರಿತು ಜಾಗೃತಿಯನ್ನು ಮೂಡಿಸಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ಗೌಡ ದಾರ್ಶನಪುರ ಶಾಸಕರುಗಳಾದ ಶ್ರೀ ರಾಜಾ ವೇಣುಗೋಪಾಲಾಯಕ್ ಶ್ರೀ ಶರಣಗೌಡ ಕಂದಕೂರ ಜಿಲ್ಲಾಧಿಕಾರಿಗಳಂತ ಶ್ರೀ ಭೋಯರ್ ಹರ್ಷಲ್ ನಾರಾಯಣರಾವ್ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಂತ ಶ್ರೀ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಅಧಿಕಾರಗಳಾದ ಶ್ರೀ ಪೃಥ್ವಿಕ್ ಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಧ್ಯಮಿತ್ರರು ಈ ಸಭೆಗೆ ಹಾಜರಿದ್ದರು..



