A 0480 ‘ಹಿಂದೂ ಸಾದರು’ ಎಂದೇ ನಮೂದಿಸಬೇಕಾಗಿದೆ – ಸಾದರ ಸಂಘದ ಅಧ್ಯಕ್ಷ . ರವಿಕುಮಾರ ಬೆಂಗಳೂರು.

A 0480 ದಲ್ಲಿ ‘ಹಿಂದೂ ಸಾದರು’ ಎಂದೇ ನಮೂದಿಸಬೇಕಾಗಿದೆ – ಸಾದರ ಸಂಘದ ಅಧ್ಯಕ್ಷ . ರವಿಕುಮಾರ ಬೆಂಗಳೂರು .A 0480 ದಲ್ಲಿ ‘ಹಿಂದೂ ಸಾದರು’ ಎಂದೇ ನಮೂದಿಸಬೇಕಾಗಿದೆ – ಸಾದರ ಸಂಘದ ಅಧ್ಯಕ್ಷ . ರವಿಕುಮಾರ್ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು. ಹಿಂದೂ ಸಾದರ ಸಮುದಾಯವು ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ನಗರ. ಮತ್ತು ಗ್ರಾಮೀಣ ಹಾಗೂ ರಾಮನಗರ ಜಿಲ್ಲೆಯಲ್ಲಿ ಮತ್ತು ನೆರೆಯ ಆಂಧ್ರ ಪ್ರದೇಶದ ಆನಂತಪುರ ಜಿಲ್ಲೆಯಲ್ಲಿ ಹಾಗೂ ತಮಿಳುನಾಡಿನ ಕೃಷ್ಣಗಿರಿಯಲ್ಲಿ ವಾಸವಿದ್ದಾರೆ. ರಾಜ್ಯ ಸರ್ಕಾರ ಶೀಘ್ರದಲ್ಲೇ ರಾಜ್ಯವ್ಯಾಪಿ ನಡೆಸುವ ಹಿಂದುಳಿದ ವರ್ಗಗಳ ಜಾತಿಗಣತಿ ಸಮೀಕ್ಷೆಯಲ್ಲಿ ನಮ್ಮ ಸಮುದಾಯದವರು ಕಡ್ಡಾಯವಾಗಿ ಸರ್ಕಾರ ನಿಗದಿ ಮಾಡಿರುವ ಕಲಂ A 0480 ದಲ್ಲಿ ‘ಹಿಂದೂ ಸಾದರು’ ಎಂದೇ ನಮೂದಿಸಬೇಕಾಗಿದೆ. ಸಮಾಜದ ಬಂದುಗಳು ಬಹುತೇಕವಾಗಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಜೊತೆಗೆ ವಿವಿದ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ನಮ್ಮ ಸಮಾಜದವರು ರಾಜ್ಯದ ಎಲ್ಲೇ ವಾಸವಾಗಿದ್ದರೂ ಕೂಡ ಸರ್ಕಾರದ ವತಿಯಿಂದ ನಡೆಸುವ ಜಾತಿಸಮೀಕ್ಷೆ ವೇಳೆ ಸಂಬಂಧ ಪಟ್ಟ ಅಧಿಕಾರಿಗಳು ತಮ್ಮ ಮನೆ ಬಾಗಿಲಿಗೆ ಬಂದ ಸಂದರ್ಭದಲ್ಲಿ ತಾವೆಲ್ಲರೂ ಸರ್ಕಾರದ ನಿಯಮಾನುಸಾರವಾಗಿ ಕಲಂ A 0480 ರಲ್ಲಿ ಹಿಂದೂ ಸಾದರು ಎಂಬ ಜಾತಿಯನ್ನೇ ನಮೂದಿಸುವ ಮೂಲಕ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೆ ಸಿಗಬಹುದಾದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಬೇಕಾಗಿದೆ ಎಂದರು. ಇದಕ್ಕೆ ಸಂಬಂಧಿಸಿದಂತೆ ಸಂಘದ ವತಿಯಿಂದ ಶೀಘ್ರದಲ್ಲೆ ಕರಪತ್ರಗಳನ್ನು ಮುದ್ರಿಸಿ ಪ್ರತೀ ಮನೆಮನೆಗೂ ತಲುಪಿಸಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ತಿಳಿಸಿದರು . ಹಿಂದೂ ಸಾದರ ಸಮುದಾಯಕ್ಕೆ ಹಿಂದುಳಿದ ವರ್ಗದ 2ಎ ಅಡಿಯಲ್ಲಿ ಸರ್ಕಾರದಿಂದ ದೊರೆಯುವ ಶೈಕ್ಷಣಿಕ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಪಡೆಯಲು ಅರ್ಹತೆ ಹೊಂದಿದ್ದೇವೆ. ಆದ್ದರಿಂದ ರಾಜ್ಯ ಸರ್ಕಾರದ ನಡೆಸುವ ಜಾತಿಸಮೀಕ್ಷೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಅಧಿಕಾರಿಗಳಿಗೆ ಸ್ಪಷ್ಟ ಮತ್ತು ನಿಖರವಾಗಿ ತಾವುಗಳು ಹಿಂದೂ ಸಾದರು ಎಂಬುದಾಗಿ ತಿಳಿಸುವ ಮೂಲಕ ಜನಗಣತಿ ಸಮೀಕ್ಷೆಗೆ ಸಹಕಾರ ನೀಡಬೇಕಾಗಿದೆ ಎಂದು ಸಮಾಜದ ಜನರಿಗೆ ಕರೆ ನೀಡಿದರು.
ಶಿವಶಂಕರ್ ಆರ್. ಪ್ರಧಾನ ಕಾರ್ಯದರ್ಶಿಗಳು
ಉಪಸ್ಥಿತರಿದ್ದರು . ರವಿಕುಮಾರ ಅಧ್ಯಕ್ಷರು. ಹಿಂದೂ ಸಾದರ ಕ್ಷೇಮಾಭಿವೃದ್ಧಿ ಕೇಂದ್ರ ಸಂಘ, ವರದಿ. ಮಂಜುಳಾ ರೆಡ್ಡಿ.



