ಸಂಪಾದಕೀಯ

ಸನಾತನ ಭಾರತಾಂಬೆ ಪುಣ್ಯಭೂಮಿಯಲ್ಲಿ ಜಗ ಮೆಚ್ಚಿದ ಮಗನ ಜನನ ದಿನ.

ಇಂದು ತುಂಬಾ ಶ್ರೇಷ್ಠ ವ್ಯಕ್ತಿ ಜನಿಸಿದ ದಿನ.ಇಡೀ ಜಗತ್ತೇ ಮೆಚ್ಚುವ ವ್ಯಕ್ತಿ ಅಂದರೆ ಅದು ನಮ್ಮ ಪ್ರೀತಿಯ ನಾಯಕ.
ನಮ್ಮ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ,ಅವರು 17 ಸೆಪ್ಟೆಂಬರ್ 1950 ರಲ್ಲಿ,ಉತ್ತರ ಗುಜರಾತಿನ ಮಹೇಸಾನ ಜಿಲ್ಲೆಯ ವಿಧ್ ನಗರದ,ನರೇಂದ್ರಮೋದಿ ಪರಿವಾರದಲ್ಲಿ,
4 ಮಕ್ಕಳ ಪೈಕಿ ಮೂರನೆಯವರಾಗಿ,ಅತ್ಯಂತ ಹಿಂದುಳಿದ,
ಗಾಣಿಗ ಜಾತಿಯ,ಅತಿ ಬಡ ಕುಟುಂಬದಲ್ಲಿ ಜನಿಸಿದರು.

ಬಾಲ್ಯದಿಂದಲೇ ಜೀವನ ಮೌಲ್ಯ,ಸೇವಾ ಮನೋಭಾವ,ಸಮಾಜ ಸೇವೆಯನ್ನು ಧ್ಯೇಯವಾಗಿಸಿಕೊಂಡಿದ್ದರು,
೬೬ ರ ದಶಕದ ಮಧ್ಯದಲ್ಲಿ,ಇಂಡೋ ಪಾಕ್ ಯುದ್ಧ ನಡೆಯುವಾಗ,ಬಾಲಕ ಮೋದಿ ರೈಲು ನಿಲ್ದಾಣಗಳಲ್ಲಿ,
ಸೈನಿಕರಿಗೆ ಸ್ವಯಂ ಪ್ರೇರಣೆಯಿಂದ ಸೇವೆ ಮಾಡಿದ್ದರು.

ಕೆಲ ಹಂತದಿಂದ,ರಾಜಕೀಯ ಉತ್ತುಂಗಕ್ಕೇರಿದ,ಮೋದಿ ಅವರ ಬದುಕಿನ ಪಯಣದ,ಅವಲೋಕನ ಮಾಡಿದರೆ ಸಾಕು,ಅವರ ಸಾಧನೆಯ ಕಥೆಗಳು ತೆರೆದುಕೊಳ್ಳುತ್ತವೆ.ಹೊಸ ಹೊಸ ಯೋಜನೆ ಮತ್ತು ನಾಯಕತ್ವದಲ್ಲಿರಬೇಕಾದ ಆದರ್ಶಗಳನ್ನು ನೋಡುತಿದ್ದರೆ, ನರೇಂದ್ರ ಮೋದಿಜಿಯವರಿಗಿಂತ ರೋಲ್ ಮಾಡೆಲ್ ಬೇರೊಬ್ಬರಿಲ್ಲ.

ಸಮರ್ಥ ವ್ಯಕ್ತಿತ್ವ,ಸ್ಪಷ್ಟ ನಿಲುವು,ಧೈರ್ಯ,ಸಮರ್ಪಣಾ ಭಾವಗಳು,ಒಬ್ಬರೇ ನಾಯಕರಲ್ಲಿ ಹೇಗೆ ಅರಳಬಲ್ಲದು ಎಂಬುದನ್ನು,ಅವರು ಯುವಜನತೆಗೆ ತೋರಿಸಿಕೊಟ್ಟಿದ್ದಾರೆ.

ನಿಷ್ಕಳಂಕ ಸೇವಾ ಮನೋಭಾವವುಳ್ಳ,ಉದಾತ್ತ ನಿಲುವು ಹೊಂದಿರುವ,ಅಪಾರ ಪ್ರೀತಿ ಗಳಿಸಿರುವ,ಏಕೈಕ ವ್ಯಕ್ತಿ ಅಲ್ಲ,ಶಕ್ತಿ ನಮ್ಮ ನರೇಂದ್ರ ಮೋದಿಜಿಯವರು.
ತನ್ನ ಕೆಲಸದ ಮೂಲಕ,ಪ್ರತಿಯೊಬ್ಬ ವೈರಿಗೂ ಉತ್ತರ ಕೊಟ್ಟಿರುವ ವ್ಯಕ್ತಿ ಇವರು.ಅನೇಕ ಯುವಕರಲ್ಲಿ,ದೇಶಾಭಿಮಾನ ತುಂಬುವಲ್ಲಿ ಇವರ ಪಾತ್ರ ಅಪಾರವಾದದ್ದು.

ಇಂದು ಸ್ತ್ತ್ರೀ ಸಬಲೀಕರಣಕ್ಕಾಗಿ,ಅನೇಕ ಯೋಜನೆಗಳನ್ನು ತಂದಿದ್ದಾರೆ.ಬಡ ಮತ್ತು ಮಧ್ಯಮ ಜನಾಂಗದ ಒಳಿತಿಗಾಗಿ,
ಅನೇಕ ಯೋಜನೆ ತಂದಿದ್ದಾರೆ.ಇಂದು ಭಾರತ ವಿಶ್ವ ಮಟ್ಟದಲ್ಲಿ ಹೆಸರು ಮಾಡಲು,ಮೋದಿಯವರ ಪಾತ್ರ ಅಪಾರವಾದದ್ದು.

ಇಂಥ ಮಾಹಾನ್ ಚೈತನ್ಯಕ್ಕೆ,ಶಕ್ತಿಗೆ,ಎಷ್ಟು ನಮನ ಸಲ್ಲಿಸಿದರು ಸಾಲಲ್ಲ.ಪ್ರತಿಯೊಬ್ಬ ಭಾರತೀಯನಿಗೂ,ಮೋದಿಜಿಯವರ ಬಗ್ಗೆ ಪ್ರೀತಿ, ಹೆಮ್ಮೆ,ಗೌರವ, ಹಾಗಾಗಿ ಕಾರ್ಯ ಚತುರರಾದ,
ದೇಶ ಭಕ್ತರಾದ,ದೇಶಕ್ಕಾಗಿ ದಿನದ 18 ಗಂಟೆ ದುಡಿಯುತ್ತಿರುವ ಪ್ರಧಾನ ಮಂತ್ರಿ ಆದಾಗಿಂದ,ಒಂದು ರಜೆಯನ್ನು ಪಡೆಯದೇ ಇರುವ,ನಾನು ನಿಮ್ಮ ಪ್ರಧಾನ ಸೇವಕನೆಂದು,ಹೇಳುವ
ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಿಗೆ 75 ನೇ ವರ್ಷದ
ಹುಟ್ಟು ಹಬ್ಬದ ಶುಭಾಶಯಗಳು
ಹುಟ್ಟುಹಬ್ಬದ ಪ್ರಯುಕ್ತ 17ನೇ ವಾರ್ಡ್ ಗೋಪಾಳ ಕುವೆಂಪು ಪಾರ್ಕ್ ಸ್ವಚ್ಛತಾ ಅಭಿಯಾನ ವಾರ್ಡಿನ ಎಲ್ಲಾ ಪ್ರಮುಖ ನಾಯಕರು ಅನೇಕ ಜವಾಬ್ದಾರಿ ಇರುವ ಸಮಾಜ ಸೇವಕರು ಪಕ್ಷದ ಹಿತೈಷಿಗಳು ವಾರ್ಡಿನ ಅಧ್ಯಕ್ಷರು ಕಾರ್ಯದರ್ಶಿಗಳು ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಮತ್ತೊಮ್ಮೆ ಎಲ್ಲರಿಗೂ ಅತ್ಯಂತ ಪ್ರೀತಿಯ ಅಭಿನಂದನೆಗಳು
ಇಂತಿ
ಉಮೇಶ್ ನಾಯ್ಕ ಎಂ ಬಿ
ಏಳನೇ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಬಿಜೆಪಿ ಶಿವಮೊಗ್ಗ ನಗರ
ಮಾಜಿ ಭೂ ನ್ಯಾಯ ಮಂಡಳಿ ಸದಸ್ಯರು ಶಿವಮೊಗ್ಗ
ಮಾಜಿ ಅಧ್ಯಕ್ಷರು ಶಿವಮೊಗ್ಗ ತಾಲ್ಲೂಕು ಬಂಜಾರ್ ಸಂಘ
ಮಾಜಿ ಸದಸ್ಯರು ನೆಹರು ಯುವ ಕೇಂದ್ರ ಶಿವಮೊಗ್ಗ
.

Related Articles

Leave a Reply

Your email address will not be published. Required fields are marked *

Back to top button