ಸುದ್ಧಿ

ಕೆ. ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಕೆ.

ಕೆಎಚ್ ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಕನಕಗಿರಿ ಪಟ್ಟಣದ ತಾಲೂಕ ಆಡಳಿತ ಭವನದ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷಣ ಸಮಿತಿ ವತಿಯಿಂದ ಕೆಎಚ್ ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳಾಗಿ ಸ್ಥಾನವನ್ನು ನೀಡಬೇಕೆಂದು ರಾಜ್ಯಪಾಲರಿಗೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು .

ನಂತರ ಮಾತನಾಡಿದ ಕನಕಪ್ಪ ಮ್ಯಾಗಡೆ ಇವರು ಭಾರತೀಯ ಸಂವಿಧಾನದ ಸಮಾನತೆ (Article 14), ಸಾಮಾಜಿಕ ನ್ಯಾಯ (Preamble) ಹಾಗೂ ಪಿಡ್ಡಿಣ ಚಾಪ್ಸರ್‌ನ ನಿರ್ದೇಶಕ ತತ್ವಗಳು Article 38, 46) ರಾಜ್ಯದ ಹಿಂದುಳಿದ ವರ್ಗಗಳ ಬಲವರ್ಧನೆ ಮತ್ತು ರಾಜಕೀಯಪ್ರತಿನಿಧಿತ್ವವನ್ನು ಖಚಿತಪಡಿಸಲು ರಾಜ್ಯ ಸರ್ಕಾರಗಳಿಗೆ ಮಹತ್ವದ ಜಬ್ದಾರಿಯನ್ನು ನೀಡಿವೆ. ಕರ್ನಾಟಕ ರಾಜ್ಯದಲ್ಲಿ ಮಹತ್ವದ ಸಂಖ್ಯಾಶಕ್ತಿಯುಳ್ಳ ಮಾದಿಗ ಸಮುದಾಯವು ಐತಿಹಾಸಿಕವಾಗಿ ರಾಜಕೀಯ ಆಡಳಿತದ ಉನ್ನತ ಹುದ್ದೆಗಳಲ್ಲಿ ತೀವ್ರ ಅಪ್ರತಿನಿಧಿತ್ವಕ್ಕೆ ಒಳಗಾಗಿದ್ದು, ಇದು ಸಂವಿಧಾನಾತ್ಮಕ ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ವಿರುದ್ಧವಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ, ಪ್ರತಿಯೊಂದು
ಅಡಳತ್ಮಕವಾಗಿ ಹಿಂದುಳಿದ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಮಾದಿಗ ಸಮುದಾಯದ ಹಿರಿಯ ನಾಯಕ, ದೀರ್ಘಕಾಲದ ಸಂಸದ ಪ್ರಸ್ತುತ ಕರ್ನಾಟಕ ಸರ್ಕಾರದ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ರಾಜ್ಯಾದ್ಯಂತ ಅನುಭವ, ರಾಜಕೀಯ ಸಮನ್ವಯಶಕ್ತಿ ಮತ್ತು ಸಾರ್ವಜನಿಕ ಜೀವನದ ಸ್ವಚ್ಛತೆಗಾಗಿ ಹೆಸರುವಾಸಿಯಾಗಿದ್ದಾರೆ ಎಂದರು. ಮತ್ತು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಪ್ರತಿನಿಧಿತ್ವದ ದೃಷ್ಟಿಯಿಂದ ಕೆ.ಎಚ್. ಮುನಿಯಪ್ಪ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ನೇಮಿಸುವುದು ಅತ್ಯಂತ ನ್ಯಾಯಸಮ್ಮತವಾದ ಹೆಜ್ಜೆಯಾಗುತ್ತದೆ. ಈ ನಿರ್ಧಾರದಿಂದ-ಮಾದಿಗ ಸಮುದಾಯದ ದೀರ್ಘಕಾಲದ ಸಾಮಾಜಿಕ-ರಾಜಕೀಯ ಹಿಂದುಳಿದ ಸ್ಥಿತಿಗೆ ಪರಿಹಾರ ಸಿಗುತ್ತದೆ, ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ನೈಜ ಪ್ರತಿನಿಧಿತ್ವದ ಸಮತೋಲನ ಮಾಡುಡುತ್ತದೆ. ಸಂವಿಧಾನ ಮೌಲ್ಯಗಳಾದ ಸಮಾನತೆ. ನ್ಯಾಯ, ಸಮಾನ ಪ್ರಾತಿನಿಧ್ಯ ಬಲಪಡಿಸಲ್ಪಡುತ್ತದೆ. ರಾಜ್ಯದ ಎಲ್ಲಾ ವರ್ಗಗಳ ಏಕತೆ ಮತ್ತು ಆಡಳಿತದಲ್ಲಿ ನಂಬಿಕೆ ಹೆಚ್ಚುತ್ತದೆ.ಆದ್ದರಿಂದ, ಕರ್ನಾಟಕ ರಾಜ್ಯದ ಸಾಮಾಜಿಕ ನ್ಯಾಯದ ತತ್ವಗಳನ್ನು ಜಾರಿಗೆ ತರುವ ಮಹತ್ವದ ನಿರ್ಧಾರವಾಗಿ ಮಾದಿಗ ಸಮುದಾಯದ ನಾಯಕ ಕೆ.ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲು ರಾಜ್ಯಪಾಲರು ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂಬುದು ವಿನಯಪೂರ್ವಕಾವಗಿ ತಹಶೀಲ್್ದ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು .

ಈ ಸಂದರ್ಭದಲ್ಲಿ ಹುಲುಗಪ್ಪ ಪೂಜಾರಿ ತಾಲೂಕ ಅಧ್ಯಕ್ಷರು ಕನಕಗಿರಿ , ಬಸವರಾಜ್ ಇರುವ ಪ್ರಧಾನ ಕಾರ್ಯದರ್ಶಿ, ಯಮನೂರಪ್ಪ ದೊಡ್ಡಮನಿ ಗೌರವಾಧ್ಯಕ್ಷರು, ಶಿವಪ್ಪ ಚಿಕ್ಕ ವಡ್ಡರಕಲ್ ಖಜಾಂಚಿ , ಪಂಪಣ್ಣ ತುಪ್ಪದಲ್ ಸಕಾರ್ಯದರ್ಶಿ, ಸದಸ್ಯರಾದ ಹನುಮಂತ ದೊಡ್ಡಮನಿ, ಸುರೇಶ್ ಕುಂದುಕೊಳು,ಕಂಠಪ್ಪನಾಳ ,ರಾಘವೇಂದ್ರ, ಆಕಾಶ್, ಹುಲಿಗೇಶ, ಲಕ್ಷ್ಮಿಕಾಂತ್ ,ಹನುಮೇಶ್ ,ಲಕ್ಷ್ಮಣ್ ,ಇನ್ನು ಉಳಿದ ಸದಸ್ಯರು ಉಪಸ್ಥಿತರಿದ್ದರು,
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button