ಸುದ್ಧಿ

2013 ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು – ರಘು.

20132013 ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು – ರಘು ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು – ರಘು

ಬೆಂಗಳೂರು . 2013 ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕು ಎಂದು ಸಂಸಸತ್ರ ರಘು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸರ್ಕಾರ ವನ್ನು ಡಿಮಾಂಡ್ ಮಾಡಿದರು ಕರ್ನಾಟಕ ಸರ್ಕಾರವು ಫೆರಿಪೆರಲ್ ರಿಂಗ್ ರಸ್ತೆ ನಿರ್ಮಿಸಲು 20 ವರ್ಷದ ಹಿಂದೆ ಭೂಮಿಯನ್ನು ವಶಪಡಿಸಿಕೊಂಡಿದ್ದ, ಇದುವರೆಗೂ ಯಾವುದೇ ಪರಿಹಾರ ನೀಡಿರುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಫೆರಿಪೆರಲ್ ರಿಂಗ್ ರಸ್ತೆ ಯನ್ನು ನಿರ್ಮಿಸಲು BDA ಸಂಸ್ಥೆಯ ಮುಖಾಂತರ ರೈತರ ಜಮೀನುಗಳಿಗೆ ನೋಟಿಸ್ ನೀಡಿ 20 ವರ್ಷಗಳು ಕಳೆದಿದೆ. ಇದುವರೆಗೆ ಪರಿಹಾರವನ್ನು ನೀಡಿರುವುದಿಲ್ಲ, ರೈತರು ಹಾಗೂ ಭೂಮಾಲಿಕರಾದ ನಾವೂ ಸಹ ಈ ಬೆಂಗಳೂರಿನ ಅಭಿವೃದ್ಧಿಯನ್ನು ನಿರೀಕ್ಷಿಸಿ ಇದುವರೆಗೂ ಸಹಕರಿಸಿದ್ದೇವೆ, ಸರ್ಕಾರದ ಮೇಲೆ ಭರವಸೆಯಿಟ್ಟು ನಾವು ನ್ಯಾಯಯುತ ಪರಿಹಾರಕ್ಕಾಗಿ ಕಾಯುತ್ತಿದ್ದೆವು 2013 ರ ಭೂ ಸ್ವಾದೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದನ್ನು ಕಡೆಗಣಿಸಿ ಸರಕಾರವು ಯೋಜನೆಯನ್ನು ಪ್ರಾರಂಭ ಮಾಡಲು ವಾಮ ಮಾರ್ಗದಲ್ಲಿ ಹೊಸ ಸ್ಕೀಮ್ ನಡಿಯಲ್ಲಿ ಸಚಿವಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದು ರೈತರಿಗೆ ಬಾರಿ ಅನ್ಯಾಯವಾಗಿದೆ.
ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ಅಂಶಗಳು ಹೀಗಿವೆ ಎಂದು
ರಸ್ತೆಯ ಅಗಲ ಕಡಿಮೆ ಮಾಡಿ ನಮ್ಮದರಲ್ಲೇ 35 ಮೀಟರ್ ಕಾರಿಡಾರ್ ನಲ್ಲಿ ಅಭಿವೃದ್ಧಿಪಡಿಸಿದ ಅಂತಾ ಹೆಸರಿನಲ್ಲಿ ನಮಗೆ 8350 ಚದರಡಿ ಕೊಡುವುದು
2). ಟಿ.ಡಿ.ಆರ್.
3) ಎಫ್ ಎ ಆರ್
4)ಬೇರೆ ಬಡಾವಣೆಯಲ್ಲಿ 40% ಜಮೀನು ( ಅವರವರ ಜಮೀನಿನ ಮೌಲ್ಯವನ್ನು ಪರಿಗಣಿಸುವುದು)
ಇವೆಲ್ಲಾ ಅಂಶಗಳು 2013 ರ ಭೂ ಸ್ವಾದೀನ ಕಾಯ್ದೆಯ ವಿರುದ್ಧವಾಗಿದೆ ಹಾಗೂ ರೈತರಿಗೆ ಬಗೆಯುವ ದ್ರೋಹವಾಗಿದೆ ಎಂದರು. ಜನರಿಂದ ಆಯ್ಕೆಯಾದ ಸರ್ಕಾರ ಇದನ್ನು ಮಾಡಬಾರದು ನಾವು ವಿದೇಶದವರಲ್ಲ, ವಿರೋಧ ಪಕ್ಷದವರಲ್ಲ. ನಾವು ಈ ದೇಶದ ಸತ್ ಪ್ರಜೆಗಳು, ನಾವು ಯೋಜನೆಗೆ ಜಮೀನು ನೀಡಲು ಸಿದ್ಧರಿದ್ದೇವೆ, ನಮಗೆ ನ್ಯಾಯವಾದ ಪರಿಹಾರ ನೀಡವುದು ಸರ್ಕಾರದ ಜವಾಬ್ದಾರಿ ಅದುದರಿಂದ ಮಾನ್ಯ ಉಪ ಮುಖ್ಯಮಂತ್ರಿಗಳು ಇದನ್ನು ಪುನರ್ ಪರಿಶೀಲನೆ ಮಾಡಲೇಬೇಕು.
ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ 2013 ರ ಭೂ ಸ್ವಾದೀನ ಕಾಯ್ದೆಯಂತೆ ಪರಿಹಾರವನ್ನು ನೀಡಿ ರೈತರಿಗೆ ಅನ್ಯಾಯವಾಗುವುದನ್ನು ಸರಿಪಡಿಸರಿಪಡಿಸಬೇಕೆಂದು ತಿಳಿಸಲು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಮುಟ್ಟಿಸುವ ಕೆಲವು ತಮ್ಮ ಮಾಧ್ಯಮಗಳ ಮೂಲಕ ತಲುಪಿಸಲು ವಿನಂತಿಸುತ್ತೇವೆ. ಹಾಗೆಯೇ ಅಧಿಕಾರಿ ವರ್ಗವು ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡಬೇಕೆಂದು2015 ರಲ್ಲೇ ಉಚ್ಚ ನ್ಯಾಯಾಲಯಕ್ಕೆ 2013 ರ ಕಾಯ್ದೆಯಂತೆ ಪರಿಹಾರ ನೀಡುತ್ತೇವೆಂದು ಅಫಿಡವಿಟ್ ಹಾಕಿದ್ದ ಬಿ ಡಿ ಎ ಇಂದು ನಾಟಕ ಮಾಡುತ್ತಿದ್ದಾರೆ.
ಇನ್ನು ಟೈಪಿಂಗ್ ಮಾಡುವ ಸಿಬ್ಬಂದಿಯಿಂದ ಹಿಡಿದು IAS ಐ ಎಸ್/ ಕೆ ಏ ಎಸ್ ಅಧಿಕಾರಿಗಳು ನೀವುಗಳು ರೈತರನ್ನು ಖುದ್ದಾಗಿ ಬೇಟಿಯಾಗಿ ಅವರನ್ನು 1894 ರ ಭೂ ಸ್ವಾದೀನ ಕಾಯ್ದೆಯಂತೆ ಪರಿಹಾರ ತೆಗೆದುಕೊಳ್ಳಲು ದುಂಬಾಲು ಬೀಳುತ್ತಿದ್ದೀರಿ. ನೀವುಗಳು 7 ವೇತನ ಆಯೋಗದ ಪ್ರಕಾರ ಸಂಬಳ ಪಡೆಯುವುದನ್ನ ನಿರಾಕರಿಸಿ 5-6ನೇ ವೇತನ ಆಯೋಗದ ಪ್ರಕಾರ ಸಂಬಳವನ್ನು ಮತ್ತು ಇತರೆ ಸೌಲಭ್ಯಗಳನ್ನು ಪಡೆಯುವಿರಾ? ಬಿ ಡಿ ಎ ಅಧಿಕಾರಿಗಳು ನಮ್ಮ ಹಳ್ಳಿಗಳಿಗೆ 20-30 ಜನ ಪೊಲೀಸರನ್ನು ಕರೆದುಕೊಂಡು ಬಂದು ಕಂದಾಯ ಇಲಾಖೆಯ ಕಚೇರಿಗಳಲ್ಲಿ ಕುಳಿತುಕೊಂಡು ರೈತರನ್ನು ಅಲ್ಲಿಗೇ ಕರೆಸಿಕೊಂಡು ಭಯದ ವಾತಾವರಣ ಸೃಷ್ಟಿಸಿ ಅವರೇ ನಿರ್ಣಯಿಸಿರುವ ಸಂಧಾನಿತ ಮೊತ್ತ ವನ್ನು ನಮೂದಿಸಿ ಒಂದು ಅರ್ಜಿಯನ್ನು ಸಿದ್ಧಪಡಿಸಿದ್ದು, ರೈತರೇ ಕೇಳಿಕೊಂಡು ಅರ್ಜಿ ಕೊಟ್ಟ ರೀತಿಯಲ್ಲಿ ಅದಕ್ಕೆ ಸಹಿಯನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಇದನ್ನು ಈ ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿ ಸಿದರು.
ಅದಕ್ಕಾಗಿ ದಿನಾಂಕ 13 ರಂದು ಮಂಗಳವಾರ 12-30ಕ್ಕೆ ಸುಮಾರು 50 ರಿಂದ 100 ಜನ ರೈತರೊಂದಿಗೆ BDA ಬಿ ಡಿ ಎ ಕಚೇರಿಗೆ ಬರುತ್ತಿದ್ದೇವೆ. ಅಲ್ಲಿ ಸಭೆಯನ್ನು ಆಯೋಜಿಸಿ ಸಂಸ್ಥೆಯು ಸರ್ಕಾರಕ್ಕೆ ಏನು ಮಾಹಿತಿಯನ್ನು ನೀಡಿದೆಯೋ ಅದನ್ನು ಪಾರದರ್ಶಕವಾಗಿ ಜಮೀನು ಮಾಲೀಕರಾದ ರೈತರೊಡನೆ ಹಂಚಿಕೊಂಡು ಚರ್ಚಿಸಬೇಕೆಂದು ವಿನಂತಿಸುತ್ತೇವೆ ಎಂದರು. ಇಲ್ಲವಾದಲ್ಲಿ ಅಲ್ಲಿಂದಲೇ ರೈತ ಚಳವಳಿಯ ಮೂಲಕ ಪ್ರತಿಭಟನೆ ಮಾಡಬೇಕಾಗುತ್ತದೆಂದು, ಸರಕಾರದ* ಮೇಲೆ ಭರವಸೆಯಿಂದ ನಾವುಗಳು ನ್ಯಾಯಾಲಯದ ಮೊರೆ ಹೋಗಲಿಲ್ಲ, ನೀವು ಈ ರೀತಿ ಮೋಸ ಮಾಡಲು ಮುಂದುವರಿಸಿದರೆ ನಾವುಗಳು ಪ್ರತಿಯೊಬ್ಬರಿಗೂ ಖುದ್ದಾಗಿ ನ್ಯಾಯಾಲಯಗಳಲ್ಲಿ ಧಾವೆಯನ್ನು ಹೂಡಲು ಅಭಿಯಾನವನ್ನು ಹಮ್ಮಿಕೊಳ್ಳುತೇವೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆಂದು ತಿಳಿಸಿದರು. ಸಂತ್ರಸ್ತರಾದ ರಘು ಜಯರಾಮ್, ಕಾವೇರಪ್ಪ, ಗಣೇಶ್, ನರಸಯ್ಯ, ಮುಂತಾದವರು ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.
ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button