ಸುದ್ಧಿ

ಬೆಂಬಲ ಬೆಲೆಗೆ ಆಗ್ರಹಿಸಿ ಕೊಪ್ಪಳ ಬಂದ್. ಪಂಪಣ್ಣ ನಾಯಕ ಕನಕಗಿರಿ.

ಬೆಂಬಲ ಬೆಲೆಗೆ ಆಗ್ರಹಿಸಿ ಕೊಪ್ಪಳ ಬಂದ್

ಕನಕಗಿರಿ: ತೊಗರಿಗೆ ರಾಜ್ಯ ಸರಕಾರದಿಂದ ಹೆಚ್ಚು ವರಿಯಾಗಿ 500 ರೂ. ಬೆಂಬಲ ಬೆಲೆ ನೀಡಬೇಕು. ಇಲ್ಲವಾದರೆ ಕೊಪ್ಪಳ ಜಿಲ್ಲಾ ಬಂದ್ ಗೆ ಕರೆ ನೀಡಲಾಗುವುದು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿ, ಕೇಂದ್ರ ಸರಕಾರ ನಿಗದಿ ಮಾಡಿರುವ ಪ್ರತಿ ಕ್ವಿಂಟಾಲ್ ಗೆ 8 ಸಾವಿರ ರೂ.ಯಂತೆ ತೊಗರಿ ಖರೀದಿ ಮಾಡುವ ರಾಜ್ಯ ಸರಕಾರದ ಕ್ರಮ ಖಂಡನೀಯ. ಕೂಡಲೇ ಸರಕಾರ ಕೇಂದ್ರದ 8 ಸಾವಿರ ರೂ.ಗೆ ಕನಿಷ್ಠ 500 ರೂ.‌ಸೇರಿಸಿ ಪ್ರತಿ ಕ್ವಿಂಟಾಲ್ ಗೆ 8500 ರೂ.‌ಯಂತೆ ತೊಗರಿ ಖರೀದಿ ಮಾಡಬೇಕು. ಈ ಬಗ್ಗೆ ಈಗಾಗಲೇ ಕನಕಗಿರಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಸರಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದು ರೈತರಿಗೆ ಮಾಡಿದ ಅನ್ಯಾಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ತೊಗರಿ ಬೆಳೆಯಲಾಗಿದೆ. ರಾಜ್ಯ ಸರಕಾರ ೫೦೦ ರೂ. ಪ್ರೋತ್ಸಾಹ ಧನ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಬೇಕು. ಕಳೆದ ವರ್ಷ ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್ ಗೆ 7550 ರೂ.‌ನೀಡಿತ್ತು. ರಾಜ್ಯ ಸರಕಾರ ತನ್ನ ಪಾಲಿನ 450 ರೂ.‌ನೀಡಿತ್ತು. ಕಳೆದ ವರ್ಷದಂತೆ ಈ ಬಾರಿ ಕೇಂದ್ರದ ಸರಕಾರದ 800 ಸಾವಿರ ರೂ.‌ಬೆಂಬಲ ಬೆಲೆಗೆ ೫೦೦ ರೂ.‌ಸೇರಿಸಿ,‌ ತೊಗರಿ ‌ಖರೀದಿ ಮಾಡಬೇಕು. ಸರಕಾರ ಜನೆವರಿ 20 ರ ಒಳಗೆ ನಿರ್ಧಾರ ಕೈಗೊಳ್ಳದಿದ್ದರೆ ಕೊಪ್ಪಳ ಬಂದ್, ಕಲ್ಯಾಣ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು. ಜೊತೆಗೆ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲೇ ಬಂದರೂ ಕಪ್ಪುಬಟ್ಟೆ ಪ್ರದರ್ಶಿಸಲಾಗುವುದು ಎಂದು ಪಂಪಣ್ಣ ನಾಯಕ ಎಚ್ಚರಿಸಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ ಪೋನ್ ನೋ 8867257737


ಪಂಪಣ್ಣ ನಾಯಕ

Related Articles

Leave a Reply

Your email address will not be published. Required fields are marked *

Back to top button