*ನಾರಿ ಶಕ್ತಿಯ ಉದಯದಿಂದ ಭಾರತ ಈಗ ವಿಶ್ವಕ್ಕೆ ನಾಯಕ :ರಾಷ್ಟ್ರ ನಿರ್ಮಾಣದಲ್ಲಿ ನಾರಿ ಶಕ್ತಿಯ ಕೊಡುಗೆ ಅಪಾರ : ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ*

*ನಾರಿ ಶಕ್ತಿಯ ಉದಯದಿಂದ ಭಾರತ ಈಗ ವಿಶ್ವಕ್ಕೆ ನಾಯಕ :
ರಾಷ್ಟ್ರ ನಿರ್ಮಾಣದಲ್ಲಿ ನಾರಿ ಶಕ್ತಿಯ ಕೊಡುಗೆ ಅಪಾರ : ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ*
ಸುವರ್ಣ ಪರ್ವ ಸುದ್ದಿ ಕನಕಗಿರಿ :
ಮಹಿಳಾ ಮೀಸಲಾತಿ ಮಸೂದೆ ಒಂದು ಐತಿಹಾಸಿಕ ಹೆಜ್ಜೆ. ನಿಜವಾದ ಸ್ವಾತಂತ್ರ್ಯ ಎಂದರೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ. ಈ ಮಸೂದೆಯೇ ನಮಗೆ ಆ ಶಕ್ತಿಯನ್ನು ನೀಡಲಿದೆ, ಸಂಸತ್ತಿನಲ್ಲಿ ಮಹಿಳೆಯರ ಧ್ವನಿ ಗಟ್ಟಿಯಾಗಲು ಇದು ನಾಂದಿ ಹಾಡಲಿದೆ.
ಈ ಮಹತ್ವದ ನಿರ್ಧಾರಕ್ಕಾಗಿ ಶ್ರೀಮತಿ ಸುಧಾ ಮೂರ್ತಿ ಹಾಗೂ ರಾಜ್ಯಸಭಾ ಸದಸ್ಯರು ಎತ್ತಿದ ಧ್ವನಿ ಈಗ ಫಲಿಸಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಹೇಳಿದರು..
ರಾಜಕೀಯವನ್ನು ಮೀರಿ ಎಲ್ಲಾ ಪಕ್ಷಗಳು ಒಗ್ಗೂಡಿ ಮಹಿಳೆಯರ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವುದು ದೇಶದ ಪ್ರತಿಯೊಬ್ಬ ಮಹಿಳೆಗೂ ಸಂತೋಷ ತಂದಿದೆ. ವಿಧಾನಸಭೆ ಮತ್ತು ಲೋಕಸಭೆಯನ್ನು ಪ್ರವೇಶಿಸುವ ನಿಮ್ಮೆಲ್ಲರ ಕನಸುಗಳಿಗೆ ಈಗ ಹೊಸ ರೆಕ್ಕೆಗಳು ಮೂಡಲಿವೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪರಿಚಯಿಸಲ್ಪಟ್ಟಿರುವ ನಾರಿ ಶಕ್ತಿ ವಂದನಾ ಅಧಿನಿಯಮವು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ನೀತಿ ನಿರೂಪಣೆ ಮತ್ತು ನಾಯಕತ್ವದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವ ಮೂಲಕ, ಇದು ದೀರ್ಘಕಾಲದಿಂದ ಕಡಿಮೆ ಪ್ರಾತಿನಿಧ್ಯ ಹೊಂದಿರುವ ದೇಶದ 50% ಜನಸಂಖ್ಯೆಗೆ ಪ್ರಬಲ ಧ್ವನಿಯಾಗಲಿದೆ.
ಇದು ಕೇವಲ ಸುಧಾರಣೆಯಲ್ಲ, ಇದು ಒಂದು ಪರಿವರ್ತನೆಯಾಗಿದೆ. ಸಬಲೀಕೃತ ಮಹಿಳೆಯರು ಬಲವಾದ ಸಂಸ್ಥೆಗಳು, ಹೆಚ್ಚು ಅಂತರ್ಗತ ಆಡಳಿತ ಮತ್ತು ಹೆಚ್ಚು ಪ್ರಗತಿಪರ ಭಾರತವನ್ನು ರೂಪಿಸುತ್ತಾರೆ. ಭವಿಷ್ಯವು ನಾರಿ ಶಕ್ತಿಗೆ ಸೇರಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ 33% ಮಹಿಳಾ ಮೀಸಲಾತಿ ಈಗ ನನಸಾಗುತ್ತಿದೆ.
2029ರಿಂದ ಸಂಸತ್ತು ಮತ್ತು ವಿಧಾನಸಭೆಗಳ ಪ್ರತಿ 3 ಸ್ಥಾನಗಳಲ್ಲಿ 1 ಸ್ಥಾನ ಮಹಿಳೆಯರಿಗೆ ಮೀಸಲು.
ನಾರಿ ಶಕ್ತಿಯ ಉದಯದಿಂದ ಭಾರತ ಈಗ ವಿಶ್ವಕ್ಕೆ ನಾಯಕವಾಗಿದೆ.ರಾಷ್ಟ್ರ ನಿರ್ಮಾಣದಲ್ಲಿ ನಾರಿ ಶಕ್ತಿಯ ಕೊಡುಗೆ ಅಪಾರವಿದ್ದು, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮೋದಿ ಜೀ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾರಿ ಶಕ್ತಿ ವಂದನಾ ಕಾಯ್ದೆ ಬಗ್ಗೆ ಇದೊಂದು ಪೊಲಿಟಿಕಲ್ ಗಿಮಿಕ್ ಎಂದಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾರಿಶಕ್ತಿಗೆ ಅಪಮಾನ ಮಾಡಿದೆ.
ಸಣ್ಣ ಕನಕಪ್ಪ. ಬಿಜೆಪಿ ಮಂಡಲ ಅಧ್ಯಕ್ಷರು ಕನಕಗಿರಿ ..
ವರದಿಗಾರ ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ಮುಖ್ಯ ವರದಿಗಾರ




