ಎಲ್ಲೆಂದಡೆ ಬಿದ್ದ ದೇವಸ್ಥಾನದ ಬ್ಯಾರಿಕೇಡ್ ಗಳು

ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಮುಖಂಡ ಸದಾನಂದ ಸಮಗಂಡಿ ಆಗ್ರಹ
ಕನಕಗಿರಿ : ಪಟ್ಟಣದ ಐತಿಹಾಸಿಕ ಸುಪ್ರಸಿದ್ಧ ಶ್ರೀ ಕನಕಚಲಪತಿ ಲಕ್ಷ್ಮೀನರಸಿಂಹ ದೇವಸ್ಥಾನದ ಬ್ಯಾರಿಕೇಡುಗಳು ಎಲ್ಲೆಂದಡೆ ಬಿದ್ದಿರುವ ದೃಶ್ಯ ಪಟ್ಟಣದಲ್ಲಿ ಕಂಡುಬಂದಿದ್ದು, ಇದರ ವಿರುದ್ಧ ಕಾಂಗ್ರೆಸ್ ಮುಖಂಡ ಸದಾನಂದ ಸಮಗಂಡಿ ಆಕ್ರೋಶ ವ್ಯಕ್ತಪಡಿಸಿದರು. ಕನಕಾಚಲಪತಿ ದೇವರ ಆರಾಧಕನಾದ ಭಕ್ತನೊಬ್ಬ ದೇವಸ್ಥಾನದ ಟ್ರಾಫಿಕ್ ನಿರ್ವಹಣೆ, ಜಾತ್ರೆಯಲ್ಲಿ ಮತ್ತು ವಿಶೇಷ ಹಬ್ಬದ ದಿನಗಳಲ್ಲಿ, ಜನ ಸಂದಣಿ ನಿಯಂತ್ರಣ ಸುವ್ಯವಸ್ಥೆಗಾಗಿ ಬ್ಯಾರೆಕೇಡ್ ಗಳನ್ನು ಕೊಡಿಸಿರುತ್ತಾರೆ , ಆದರೇ ದೇವಸ್ಥಾನದ ಆಡಳಿತ ಮಂಡಳಿ ಇದನ್ನು ಸರಿಯಾಗಿ ನಿರ್ವಹಿಸುವುದರಲ್ಲಿ ವಿಫಲಗೊಂಡಿದೆ, ಬೇಜವಾಬ್ದಾರತೆಯಿಂದ ಬ್ಯಾರಿಕೇಡ್ ಗಳನ್ನು ಎಲ್ಲೆಂದರಲ್ಲಿ ಬೀಸಾಡಿದ ದೃಶ್ಯ ಕಂಡು ಬಂದಿದೆ. ಪಟ್ಟಣದ 2km ದೂರದಲ್ಲಿರುವ ಮಲ್ಲಯ್ಯ ತಾತ ದೇವಸ್ಥಾನದ ಆವರಣದಲ್ಲಿ ಸುಮಾರು ದಿನಗಳಿಂದ ಬಿದ್ದಿರುವಂತಹ ದೃಶ್ಯ ಕಂಡು ಬಂದಿದೆ. ಈ ವಿಷಯ ಸಂಬಂಧಿಸಿದಂತ್ತೆ ಕೆಲ ಭಕ್ತರು ನೋಡಿ ದೇವಸ್ಥಾನದ ಆಡಳಿತ ಸಂಪೂರ್ಣ ಬೇಜವಾಬ್ದಾರಿ ಹೊಂದಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ . ಕೂಡಲೇ ದೇವಸ್ಥಾನದ ಬ್ಯಾರಿಕೆಡ್ಗಳನ್ನು ದೇವಸ್ಥಾನವು ಸರಿಯಾಗಿ ಆಡಳಿತದ ಸುವ್ಯವಸ್ಥೆಯಲ್ಲಿ ನಿರ್ವಹಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಸದಾನಂದ ಸಮಗಂಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು…ಬಾಕ್ಸ್ ಫೋಟೊ ಭಕ್ತ ನೊಬ್ಬರು ದೇವಸ್ಥಾನಕ್ಕೆ ಟ್ರಾಫಿಕ್ ಸಮಸ್ಯೆ ಆಗಬಾರದೆಂದು ಬ್ಯಾರಿ ಕೇಡಗಳನ್ನು ಕೊಡಿಸಿದ್ದಾರೆ.ಅದನ್ನು ಸರಿಯಾಗಿ ಬಳಸುವುದರಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಸ್ವಚ್ಛತೆ ಕಾಪಾಡುವ ಕರ್ತವ್ಯವು ಇದೆ. ಪಟ್ಟಣದ 2 ಕಿ.ಮೀ ದೂರದಲ್ಲಿ ಇರುವ ಶ್ರೀ ಮಲ್ಲಯ್ಯ ತಾತನ ದೇವಸ್ಥಾನದ ಮುಂದೆ ಬಿದ್ದಿದ್ದು , ಇದನ್ನು ಈ ಕೂಡಲೇ ಅಧಿಕಾರಿಗಳು ನಿರ್ಲಕ್ಷಿವಹಿಸದೆ ಬ್ಯಾರಿ ಕೇಡ್ ಗಳನ್ನು ಸರಿಯಾದ ರೀತಿ ಸದ್ದುಪಯೋಗಿಸಬೇಕು… *ಸದಾನಂದ ಸಮಗಂಡಿ ಕಾಂಗ್ರೆಸ್ ಮುಖಂಡ ಕನಕಗಿರಿ.***ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737*




