ಸುದ್ಧಿ

ಅಕಾಲಿಕ ಮಳೆ,ನೆಲಕಚ್ಚಿದ ಭತ್ತ, ಆತಂಕದಲ್ಲಿ ರೈತ. ತುರವಿಹಾಳ ಸಿಂಧನೂರ್

ಅಕಾಲಿಕ ಮಳೆ,ನೆಲಕಚ್ಚಿದ ಭತ್ತ, ಆತಂಕದಲ್ಲಿ ರೈತ

ತುರ್ವಿಹಾಳ:ಪಟ್ಟಣದ ಮಾದಾಪುರ್ ಕ್ಯಾಂಪ್ ನಲ್ಲಿ ಅಕಾಲಿಕ ಮಳೆ ಗಾಳಿಯಿಂದ ಕೆಲವು ರೈತರ ಭತ್ತ ಬೆಳೆಗಳು ನೆಲಕ್ಕೆ ಬಿದ್ದು ನಾಶವಾಗಿದೆ ಇದರಿಂದ ಸಂಕಷ್ಟಕ್ಕೆ ಎದುರಾಗಿದ್ದೇವೆ ಎಂದು ರೈತರು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು.
ಮಳೆಯಿಂದ ಭತ್ತ ನೆಲಕ್ಕುರಳಿ ಖರ್ಚು ಮಾಡಿದ ಹಣ ಕೈ ಸುಟ್ಟು ಕೊಂಡಂತಾಗಿದೆ. ನಮ್ಮ ನೋವು ಯಾರಿಗೆ ಹೇಳೋಣ ಎಂದು ಹೇಳಿದರು.

ಗುರುವಾರದಂದು ಸುರಿದ ಮಳೆ ಒಡೆತದಿಂದ ಭತ್ತ ನೆಲಕಚ್ಚಿದ ಹೊಲಗಳಿಗೆ ಈ ಭಾಗದ ರೈತರು ಬಹಳ ಕಷ್ಟಪಟ್ಟು ಜಮೀನುಗಳಿಗೆ ನೀರುಣಿಸಿ ಭತ್ತ ಬೆಳೆದಿದ್ದಾರೆ. ಆದರೆ ಈಗ ಮಳೆರಾಯನ ಆರ್ಭಟಕ್ಕೆ ಭತ್ತದ ಬೇಳೆ ಉರುಳಿ ನೆಲಕ್ಕೆ ಬಿದ್ದಿದೆ.
ನೋಡಲು ಚಾಪಿ ಆಸಿದಂತೆ ಆಸಿದೆ . ಇದರಿಂದ ಬಹಳಷ್ಟು ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸುವಂತೆಯಾಗಿದೆ ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ಎದುರು ನೋಡುವಂತ ಪರಿಸ್ಥಿತಿ ಉಂಟಾಗಿದೆ ಅಕಲಿಕವಾಗಿ ಸುರಿಯುತ್ತಿರುವ ಮಳೆಗೆ ಪಟ್ಟಣದ ಮಾದಪುರ ಕ್ಯಾಂಪಿನ ಸೇರಿದಂತೆ ಇನ್ನೂ ವಿವಿಧ ಗ್ರಾಮಗಳಲ್ಲಿ ಭತ್ತದ ಬೆಳೆ ನೆಲಕಚ್ಚಿದ್ದು ರೈತರು ಹಾನಿ ಅನುಭವಿಸುವಂತಾಗಿದೆ.
ಈ ಬಾರಿ ಮಳೆರಾಯನ ಆರ್ಭಟಕ್ಕೆ ಭತ್ತ ಬೆಳೆದ ರೈತರು ಉತ್ತಮ ಇಳುವರಿ ಹೊಂದಬಹುದು ಎಂಬ ಆಶಾಭಾವನೆಯಲ್ಲಿದ್ದರೂ. ಇನ್ನೇನೂ ಕೊಯ್ದು ಬಿಡೋಣ ಅನ್ನುವಷ್ಟರಲ್ಲಿ ಸುರಿತ್ತಿರುವ ಧಾರಾಕಾರ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರೈತರಿಗೆ ಭತ್ತದ ಬೆಳೆ ಜೀವನಾಡಿಯಾಗಿದೆ ಸರ್ಕಾರ ಆವರ್ತ ನಿದಿಯಲ್ಲಿರುವ ಅನುದಾನ ಬಿಡುಗಡೆ ಮಾಡಿ ಬೆಳೆ ಹಾನಿಯಿಂದ ರೈತರಿಗೆ ಪರಿಹಾರ ನೀಡಬೇಕು.ರೈತ ಮುಖಂಡ ಶೇಖರಪ್ಪ ಆಗಲ್ದಾಳ್

Oplus_131072

Related Articles

Leave a Reply

Your email address will not be published. Required fields are marked *

Back to top button