ಸುದ್ಧಿ

ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ : ರಂಗಾರೆಡ್ಡಿ

ಅನಾದಿಕೃತ ಕಟ್ಟಡವನ್ನು ತೆರವುಗೊಳಿಸಿ : ರಂಗಾರೆಡ್ಡಿ

ಕನಕಗಿರಿ ಪಟ್ಟಣದ ತಾವರಗೇರಿ ಗಂಗಾವತಿ ಮುಖ್ಯ ರಸ್ತೆಯಲ್ಲಿ ಸಂಬಂಧಿಸಿದಂತೆ, ಕನಕಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ಥಾಪನೆಗಾಗಿ ಹಾಗೂ ಭೂ ಸ್ವಾಧೀನ ಅಧಿಕಾರಿಗಳು, ಕೊಪ್ಪಳ ಇವರು ಹೊರಡಿಸಿದ ಆದೇಶ ಸಂಂಎಲ್ಎಕ್ಯೂ 04 ಎಕರೆ 20 ಗುಂಟೆಗಳಂತೆ ಒಟ್ಟು 19 ಎಕರೆ 08 ಗುಂಟೆಗಳು ಒಳಗೊಂಡಿದ್ದು, ಸದರಿ ಜಮೀನಿಗೆ , ಭೂಮಾಲೀಕರಿಗೆ ಭೂ ಪರಿಹಾರ ಧನ (ಮೊತ್ತ ರೂ.61824/-) ನೀಡಲಾಗಿತ್ತು. ಮತ್ತು ಆಸ್ತಿಗೆ ದಕ್ಕೆ ಉಂಟಾಗದಂತೆ ಭದ್ರತೆಗಾಗಿ ಮಾರುಕಟ್ಟೆ ಪ್ರಾಂಗಣದ ಸುತ್ತಗೋಡೆಯನ್ನು ನಿರ್ಮಿಸಿಕೊಳ್ಳಲಾಗಿರುತ್ತದೆ ಎಂದು ಸಮಿತಿಯಿಂದ ಮಾಡಲಾಗಿತ್ತು ಎಂದು ಭೂ ಮಾಲೀಕರಾದ ರಂಗಾರೆಡ್ಡಿ ಮಾದಿನಾಳ ಅವರು ತಿಳಿಸಿದರು. ಈಗ ಮಾರುಕಟ್ಟೆಯ ಪ್ರಾರಂಭದ ಸುತ್ತು ಗೋಡೆಯನ್ನು ಕಟ್ಟದೆ ಉಲ್ಲಂಘನೆ ಮಾಡಿದ್ದಾರೆ ಎಂದು ರಂಗಾ ರೆಡ್ಡಿ ಮಾಜಿನಾಳ್ ಅವರು ಲೋಕಾಯುಕ್ತ ರಿಗೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಬರಹ ಮೂಲಕ ದೂರನ್ನು ಸಲ್ಲಿಸಿರುತ್ತಾರೆ , ಸದರಿ ಆಸ್ತಿಯನ್ನು ಕನಕಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೀಡುವ ಮುಂಚೆ ಸರ್ವೆ ನಂಬರ್ 50/ಬಿ(1) 04 ಎಕರೆ 22 ಗುಂಟೆ ಶ್ರೀ ರಂಗಾರೆಡ್ಡಿ ತಂದೆ ಸುಬ್ಬಾರೆಡ್ಡಿ ಮಾದಿನಾಳ್ ಇವರಿಗೆ ಸಂಬಂದಪಟ್ಟದ್ದಾಗಿರುತ್ತದೆ. ಸಮಿತಿಯು ಸದರಿ ಆಸ್ತಿಯನ್ನು ಖರೀದಿ ಮಾಡಿದ ನಂತರದ ದಿನಗಳಲ್ಲಿ ಅಧಿಸೂಚಿತ ಕೃಷಿಹುಟ್ಟುವಳಿಗಳ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಯಾವುದೇ ನಿಯಮ ಉಲ್ಲಂಘನೆಯಾಗದಂತೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ರ ಪ್ರಕಾರ ಕನಕಗಿರಿ ಪ್ರಾಂಗಣದಲ್ಲಿರುವ ನಿವೇಶನ ಸಂಖ್ಯೆ 57 ರಿಂದ 68 ನಿವೇಶನಗಳನ್ನು 2011 ಮತ್ತು 2014 ಸಮಿತಿಯಿಂದ ಲೈಸನ್ಸ್ ಪಡೆದ ಪೇಟೆಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗಿದೆ.

ಸದರಿ ಇದರ ಕುರಿತಾಗಿ ರಂಗಾರೆಡ್ಡಿ ತಂದೆ ಸುಬ್ಬಾರೆಡ್ಡಿ ಮಾದಿನಾಳ ಇವರು ಅಧಿಕಾರಿಗಳಿಗೆ ದೂರು ದಾಖಲಿಸಿದ್ದರು ಕೂಡ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ವ್ಯವಹಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಹಾಗೂ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ರಂಗಾರೆಡ್ಡಿ ಅವರು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಕೂಡಲೇ ಅಧಿಕಾರಿಗಳು ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ರಂಗಾರೆಡ್ಡಿ ಮೂಲಿಮನಿ ಲೋಕಾಯುಕ್ತ ಹಾಗೂ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಅವರಲ್ಲಿ ದೂರನ್ನು ಸಲ್ಲಿಸಿರುತ್ತಾರೆ.

, ಕಾಂಪೌಂಡ್ ಕಟ್ಟುವ ಸಂದರ್ಭದಲ್ಲಿ ಈ ಸಮಿತಿಯಿಂದ ನಿವೇಶನ ಸಂಖ್ಯೆ 57 ರಿಂದ ನಿವೇಶನ ಸಂಖ್ಯೆ 80 ರವರೆಗೆ ನಿದೇಶನ ಹಂಚಿಕೆ ಪಡೆದ ಪೇಟೆಕಾರ್ಯಕರ್ತರು ಈ ಸಮಿತಿಯಿಂದ ಹಂಚಿಕೆ ಪಡೆಯುವಾಗ ಉಪ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟ್ರೇಶನ್ ಮಾಡಿಸುವ ಅವಧಿಯಲ್ಲಿ ಚೆಬಂದಿ ತೋರಿಸುವಾಗ ಕನಕಗಿರಿ-ತಾವರೆಗೇರಿ ರಸ್ತೆ ಎಂದು ನಮೂದಿಸಿರುತ್ತಾರೆ. ಸದರಿ ನಿವೇಶನಗಳನ್ನು ಹಂಚಿಕೆ ಪಡೆದ ವರ್ತಕರು ತಮ್ಮ ಕಟ್ಟಡಗಳ ಕಟ್ಟುವ ಪೂರ್ವದಲ್ಲಿ ಕಟ್ಟಡ ನಕ್ಷೆಯನ್ನು ತಾಂತ್ರಿಕ ವಿಭಾಗದಿಂದ ಪಶ್ಚಿಮ ದಿಕ್ಕಿಗೆ ಕಟರ್ಸ ಇರುವಂತೆ ಅನುಮತಿ ಪಡೆದಿದ್ದು, ಆದರೆ ಸದರಿ ವರ್ತಕರು ಪಶ್ಚಿಮ ಮತ್ತು ಪೂರ್ವ ದಿಕ್ಕಿಗೆ ಶಟರ್ಸಗಳನ್ನು ನಿಯು ಉಲ್ಲಂಘಿ ಕಂಡು ಬಂದಿರುತ್ತದೆ ಇದನ್ನು ಅಧಿಕಾರಿಗಳು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ದ ಪಟ್ಟಣ ಪಂಚಾಯಿತಿಯವರು ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಸಮಿತಿಯ ಸುತ್ತುಗೋಡೆಗೆ ಅನಧಿಕೃತ ಚಿಕ್ಕ ಮಳಿಗೆಗಳು ಅಂಟಿಕೊಡಿದ್ದು ಸದರಿ ಅನದೀಕೃತೆ ಚಿಕ್ಕ ಮಳಿಗೆಗಳನ್ನು ತೆರೆವುಗೋಳಿಸಿದ್ದರಿಂದ ಸಮಿತಿಯ ಸುತ್ತುಗೋಡೆಯು ಈ ಮುಂಚೆ ಮರಸ್ತಿಯಲ್ಲಿದ್ದು ಕಂಡುಬಂದಿರುತ್ತದೆ.

ಮುಂದುವರೆದು, ಸದರಿ ನಿವೇಶನದ ಮಾಲೀಕರಿಗೆ ಸಮಿತಿಯ ಸುತ್ತುಗೋಡೆಯನ್ನು ಪೂರ್ಣ ಪ್ರಮಾಣದಲ್ಲಿ ತೆರುವುಗೊಳಿಸಿ ಪೂರ್ವ ದಿಕ್ಕಿಗೆ ಮೆಟ್ಟಿಲುಗಳನ್ನು ನಿರ್ಮಿಸಿಕೊಂಡಿರುವುದಕ್ಕೆ ನೋಟಿಸ್ ಜಾರಿ ಮಾಡಿ, ಅವರಿಂದ ಲಿಖಿತ ಹೇಳಿಕೆ ಪಡೆದು ಸದರಿಯವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಕೃಷಿ ಮಾರುಕಟ್ಟೆ ಅಧಿಕಾರಿಗಳು ತಿಳಿಯಪಡಿಸಲಾಗಿದೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button