ಸುದ್ಧಿ

ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ನಿಯಮಬಾಹಿರ ಮುಂಬಡ್ತಿ. ಬೆಂಗಳೂರು.

ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ನಿಯಮಬಾಹಿರ ಮುಂಬಡ್ತಿ

ಅಲ್ಪಸಂಖ್ಯಾತರ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶಕ್ಕೂ ಕ್ಯಾರೆ ಎನ್ನದೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಂಬಡ್ತಿ ನೀಡಲು ಆದೇಶ ಮಾಡಲಾಗಿದ್ದುಇದರಿಂದ
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಪರಿಶಿಷ್ಟ ಜಾತಿಯ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಪ ಸಂಖ್ಯಾತ ಮುಸ್ಲಿಂ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ತರಾತುರಿಯ ಮುಂಬಡ್ತಿ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಮುಖ್ಯ ಶಿಕ್ಷಕರಾಗಿ ಮತ್ತು ಉಪನ್ಯಾಸಕಾರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುಸ್ಲಿಂ ನೌಕರರನ್ಮು ಅಲ್ಪಸಂಖ್ಯಾತರ ಇಲಾಖೆಗೆ ನಿಯಮ ಬಾಹಿರವಾಗಿ ವಿಲೀನ ಮಾಡಿಸಿಕೊಂಡು. ಕೆಎಎಸ್ ದರ್ಜೆಯ ಜಿಲ್ಲಾಧಿಕಾರಿ ಹುದ್ದೆಗೆ ತರಾತುರಿಯಲ್ಲಿ ಮುಂಬಡ್ತಿ ನೀಡಲಾಗುತ್ತಿದೆ.

ವಿಪರ್ಯಾಸವೆಂದರೆ ಈ ಹುದ್ದೆಯಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ನೌಕರರನ್ನು ನಿಯಮ ಬಾಹಿರವಾಗಿ ವಿಲೀನ ಮಾಡಿಕೊಳ್ಳಾಗಿದೆ ಮಾಡಲಾಗಿದೆ ಎಂದು ಪರಿಶಿಷ್ಟ ಜಾತಿಯ ನೌಕರರು ಆರೋಪಿಸಿದ್ದಾರೆ.

ನಿಯಮ ಬಾಹಿರ ವಿಲೀನ ಪ್ರಕ್ರಿಯೆಯಿಂದ ಎಸ್‌ಸಿ ಮತ್ತು ಎಸ್.ಟಿ.ನೌಕರರಿಗೆ ಅನ್ಯಾಯವಾಗುತ್ತದೆ ಎಂದು ಎಸ್.ಸಿ ನೌಕರರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಸ್ಲಿಂ ನೌಕರರನ್ನು ಕಾನೂನು ಬಾಹಿರ ವಿಲೀನಗೊಳಿಸಲಾಗಿದೆ.

ಇದಕ್ಕೂ ಮೊದಲು ಅಲ್ಪಸಂಖ್ಯಾತರ ಇಲಾಖೆ ಹೊರಡಿಸಿದ ಕಾರ್ಯಕಾರಿ ಆದೇಶದ ಪ್ರಕಾರ 71 ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಹುದ್ದೆಯನ್ನು ಶೇಕಡಾ ಐವತ್ತರಷ್ಟು ಮುಂಬಡ್ತಿ ಮೂಲಕ ಹಾಗೂ ಶೇಕಡಾ 50 ರಷ್ಟು ನೇರನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಕಾರ್ಯಾಕಾರಿ ಆದೇಶ ಹೊರಡಿಸಲಾಗಿದೆ ಇದು ವೃಂದ ಮತ್ತು ನೇಮಕಾತಿ ನಿಯಮ ಉಲ್ಲಂಘನೆಯಾಗಿದೆ. ಈಗ ಮುಂದುವರಿದು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಗ್ರೇಡ್ 2 ನ 32 ಹುದ್ದೆಗೂ ಕಾರ್ಯಕಾರಿ ಆದೇಶದ ಮೂಲಕ ಮುಂಬಡ್ತಿ ನೀಡಲು ಮುಂದಾಗಿದ್ದಾರೆ. ವರದಿ ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button