ಸುದ್ಧಿ

ಅಸಾಮಾನ್ಯರಲ್ಲಿ ಒಬ್ಬ ಅಸಾಮಾನ್ಯರು ಡಾ.ಎಂ ಎ ಸಲೀಂ, ದಕ್ಷ ಮತ್ತು ಪ್ರಾಮಾಣಿಕ ಕನ್ನಡದ ಐಪಿಎಸ್ ಅಧಿಕಾರಿ

ಡಾ.ಎಂ ಎ ಸಲೀಂ, ದಕ್ಷ ಮತ್ತು ಪ್ರಾಮಾಣಿಕ ಕನ್ನಡದ ಐಪಿಎಸ್ ಅಧಿಕಾರಿ. ಸಂಚಾರ ನಿಯಂತ್ರಣ ಮತ್ತು ಸುಗಮ ಸಂಚಾರ ವ್ಯವಸ್ಥೆಯಲ್ಲಿ ಅಸಾಮಾನ್ಯ ಸಾಧನೆ ತೋರಿದವರು.

ಬೆಂಗಳೂರಿನ ಟೋಯಿಂಗ್ ಮಾಫಿಯಾ ರದ್ದು ಪಡಿಸಿದ್ದರು, ಲಾರಿಗಳಿಗೆ ನಗರ ಪ್ರವೇಶವನ್ನು ನಿಷೇಧಿಸಿದರು.ಪ್ರತಿಯೊಂದು ಸಿಗ್ನಲ್ಗಳಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಿ ಸಂಚಾರ ಸುಗಮಗೊಳಿಸಿದ್ದರು. ಸಂಚಾರ ದಟ್ಟಣೆಯನ್ನು ನೋಡಿಕೊಂಡು ಸಿಗ್ನಲ್ಲುಗಳನ್ನು ನಿಯಂತ್ರಿಸುವ ವ್ಯವಸ್ಥೆ ಏರ್ಪಡಿಸಿದ್ದರು.ಪೆಟ್ಟಿಯಂಗಡಿಗಳು, ಬೀಡ ಅಂಗಡಿಗಳು, ಗಲ್ಲಿಗಳಲ್ಲಿ ನಿಂತು ಚೆಂಗನೆ ರಸ್ತೆಗೆ ಎಗರಿ ವಾಹನ ಸವಾರರಿಗೆ ತೊಂದರೆ ನೀಡಿ ವಸೂಲಿ ಮಾಡುತ್ತಿದ್ದ ವ್ಯವಸ್ಥೆಯನ್ನು ರದ್ದು ಮಾಡಿದ್ದರು. ಅವರ ಕಾಲದಲ್ಲಿ ಸಂಚಾರ ವಿಭಾಗದ ಸಬ್ ಇನ್ಸ್ಪೆಕ್ಟರ್ ಇನ್ಸ್ಪೆಕ್ಟರ್ ಎಸಿಪಿ ಡಿಸಿಪಿಗಳು ರಸ್ತೆಗಿಳಿದು ಸಂಚಾರ ನಿರ್ವಹಣೆ ಮಾಡಿದ್ದರು. ಸಾರ್ವಜನಿಕರ ದೂರು /ಸಲಹೆಗಳಿಗೆ ತಕ್ಷಣವೇ ಸ್ಪಂದಿಸಿ, ಕುಂದುಕೊರತೆಗಳನ್ನು ನಿವಾರಿಸಲು ಅಧಿಕಾರಿಯೊಬ್ಬರನ್ನು ನಿಯೋಜಿಸಿ ಅವರ ಫೋನ್ ನಂಬರ್ ಗಳನ್ನು ದೂರುದಾರರಿಗೆ ನೀಡುತ್ತಿದ್ದರು.

ಈಗ ಮತ್ತೆ ಬೆಂಗಳೂರಿನ ಎಲ್ಲಾ ಸಂಚಾರ ವಿಭಾಗದ ಪೊಲೀಸರು ಎಎಸ್ಐ ಗಳ ನೇತೃತ್ವದಲ್ಲಿ ನಾಲ್ಕೈದು ಜನ ಪೊಲೀಸರು ರಸ್ತೆಯಲ್ಲಿ, ರಸ್ತೆಯ ತಿರುವುಗಳಲ್ಲಿ, ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲನೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ, ಬೆಂಗಳೂರಿನ ಬಹುತೇಕ ರಸ್ತೆಗಳು ಜಯನಗರ ಬಸವನಗುಡಿ ಚಾಮರಾಜಪೇಟೆಗಳನ್ನು ಹೊರತುಪಡಿಸಿ ಸಂಚಾರ ದಟ್ಟಣೆಯಿಂದ ನರಕ ಸದೃಶವಾಗಿದೆ. ಆಂಬ್ಯುಲೆನ್ಸ್ಗಳಿಗೂ ದಾರಿ ಸಿಗುತ್ತಿಲ್ಲ, ಅದರಲ್ಲಿನ ರೋಗಿಯ ಗತಿ !

ಮಹಿಳೆಯರಿಗೆ ನಗರ ಸಾರಿಗೆ ಬಸ್ಸುಗಳಲ್ಲಿ ಪುಕ್ಕಟೆ ಪ್ರಯಾಣ ಆರಂಭವಾದಾಗಿನಿಂದ ನಗರದ ಪುರುಷ ಪ್ರಯಾಣಿಕರು, ಹಿರಿಯ ನಾಗರೀಕರು ಬಸ್ಸುಗಳಲ್ಲಿನ ನರಕಯಾತನೆ ತಡೆಯಲಾರದೆ ಮೆಟ್ರೋ ರೈಲನ್ನು ಆಶ್ರಯಿಸಿದ್ದರು. ಮೆಟ್ರೋ ರೈಲು ಪ್ರಯಾಣ ದರ ಗಗನಕ್ಕೇರಿದ ನಂತರ ಮತ್ತೆ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗಿದೆ. ಮೆಟ್ರೋ ರೈಲು ದರ,ಸಾರ್ವಜನಿಕ ಸಾರಿಗೆ ದರಗಳು ಮತ್ತು ಪ್ರಯಾಣದ ಅವಧಿಯನ್ನು ತಗ್ಗಿಸಿದರೆ ರಸ್ತೆಗಳ ಮೇಲಿನ ಒತ್ತಡ ಕಡಿಮೆಯಾದೀತು. ಬೆಲೆ ಏರಿಕೆ, ದರ ಏರಿಕೆ, ತೆರಿಗೆ ಏರಿಕೆಯಿಂದ ನೊಂದು ಬೆಂದು ಹೋಗಿರುವ ಜನರ ಕಷ್ಟ ಹೇಳತೀರದು. ವೋಟು ಪಡೆದ ಜನರಿಗೆ ಬರೆ ಎಳೆಯುತ್ತಿರುವ ಸರ್ಕಾರಕ್ಕೆ ಸಾರ್ವಜನಿಕರ ಹಿತಾಸಕ್ತಿ ಬೇಕಿಲ್ಲ.

ಡಾ.ಎಂ ಎ ಸಲೀಂ ಅವರನ್ನು ಬೆಂಗಳೂರಿನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದ್ದರೆ ಸಂಚಾರ ನಿಯಂತ್ರಣ, ಕಾನೂನು ವ್ಯವಸ್ಥೆ, ಅಪರಾಧ ತಡೆ ಎಲ್ಲದಕ್ಕೂ ನೆರವಾಗುತ್ತಿತ್ತು. ದಕ್ಷ ಪ್ರಾಮಾಣಿಕ ಅಲ್ಪ ಸಂಖ್ಯಾತ ಸಮುದಾಯದ ಅಧಿಕಾರಿ ನಮ್ಮ ಸಿದ್ದರಾಮಯ್ಯನವರ ಸರ್ಕಾರಕ್ಕೆ ಬೇಕಾಗಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ನ್ಯಾಯಾಲಯಗಳಿಗೆ ಸಾಕ್ಷ್ಯ ನುಡಿಯಲು ಬರುವ ಪೊಲೀಸ್ ಅಧಿಕಾರಿಗಳು ಖಾಸಾಗಿಯಾಗಿ ಹೇಳುತ್ತಿದ್ದಾರೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಡಾ.ಎಂ ಎ ಸಲೀಂ ಬೆಂಗಳೂರಿನ ಪೊಲೀಸ್ ಆಯುಕ್ತರಾಗುವುದು ಅತ್ಯವಶ್ಯಕ.

ಬಿಜೆಪಿಯ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿತ್ತು. ಪತ್ರಿಕೆಗಳು, ಮಾಧ್ಯಮಗಳು,ಸಾರ್ವಜನಿಕರು ಒಕ್ಕೊರಲಿನಿಂದ ಸರ್ಕಾರವನ್ನು ಈ ಕುರಿತು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿ, ವ್ಯವಸ್ಥೆಯನ್ನು ಸರಿಪಡಿಸಲು ಡಾಕ್ಟರ್ ಸಲೀಂ ಅವರನ್ನು ಸಂಚಾರಿ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಕೇವಲ 15 ದಿನಗಳಲ್ಲಿ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಶಸ್ತಿಗೂ ಭಾಜನರಾಗಿದ್ದರು. ದುರಂತವೆಂದರೆ ಡಾ.ಸಲೀಮ್ ಅವರನ್ನು ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬದಲಿಸಿಬಿಟ್ಟಿತು.

Chief Minister of Karnataka

Related Articles

Leave a Reply

Your email address will not be published. Required fields are marked *

Back to top button