ಆಧ್ಯಾತ್ಮಿಕ ಚಿಂತಕ ಸಂಜಯ್ ಪರಾಶರ ಅವರಿಂದ ಭಗವದ್ಗೀತಾ ಅಭಿಯಾನ.

ಆಧ್ಯಾತ್ಮಿಕ ಚಿಂತಕ ಸಂಜಯ್ ಪರಾಶರ ಅವರಿಂದ ಭಗವದ್ಗೀತಾ ಅಭಿಯಾನ.
ಸಂಜೆ ಎಕ್ಸ್‌ಪ್ರೆಸ್ ಸುದ್ದಿ. ಬೆಂಗಳೂರು ಜನವರಿ 20; ಭಗವದ್ಗೀತೆಯಲ್ಲಿನ ವಿವಿಧ ದೇವರು ರೂಪದ ಭಗವಂತನ ರೂಪಗಳು ಕಾಲ ಕ್ರಮೇಣ ನಿಜ ಸ್ವರೂಪದಲ್ಲಿ ಮನುಷ್ಯನ ಎದುರುಗಡೆ ಕಾಣಿಸಿಕೊಳ್ಳಲಿವೆ ಈ ದೇಶದ ಜನರಿಗೆ ತಿಳಿಸುವ ದೊಡ್ಡ ಅಭಿಯಾನ ಆರಂಭಿಸಿರುವುದಾಗಿ ಧಾರ್ಮಿಕ ಪ್ರವಚನಕಾರ,ಆದ್ಯಾತ್ಮಿಕ ಚಿಂತಕ ಶ್ರೀಸಂಜಯ್ ಪರಾಶರ್ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈಗ ಸಮಯ ಬಂದಿದೆ; ಪುರುಷೋತ್ತಮ ಸಂಗಮ ಯುಗದ ನಿಜ ಭಗವಂತನ ತಿಳಿದುಕೊಳ್ಳಿ,ಜ್ಞಾನಿಗಳಾಗಿ ಒಬ್ಬ ರಚನೆಕಾರನ , ಆತ್ಮ, ಪರಮಾತ್ಮನ ಬಗೆಗೆ ತಿಳಿಸುವ ದೊಡ್ಡ ಸತ್ಯ ಸಂಗತಿಯನ್ನು ಇಡೀ ಭಾರತದಾದ್ಯಂತ ವಿವರಿಸುವ ಅಭಿಯಾನವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಭಗವದ್ಗೀತೆಯಲ್ಲಿ ನಿರೂಪಿಸಲಾಗಿರುವ ಎಲ್ಲ ದೈವ ಸ್ವರೂಪದ ಪಾತ್ರಗಳು ಅಮೂರ್ತ ಸ್ವರೂಪವನ್ನು ಹೊಂದಿಲ್ಲ, ಅವುಗಳು ದೇವರ ರೂಪದಲ್ಲಿ ಕಾಣಿಸಿಕೊಳ್ಳಲಿವೆ,ಕಾವೇರಿ ನದಿಯನ್ನು ದೇವಿಯ ಸ್ವರೂಪದಲ್ಲಿ ನಾವು ಕಾಣುತ್ತೇವೆ.ಪ್ರತಕ್ಷವಾಗಿ ದೇವಿಯ ಸ್ವರೂಪದಲ್ಲಿ ಕಂಡರೆ ಯಾವ ರೀತಿ ನಾವು ಪೂಜಿಸಲಿದ್ದೇವೆ ಅದೇ ರೀತಿ ಭಗವದ್ಗೀತೆಯಲ್ಲಿನ ದೈವ ಸ್ವರೂಪದ ಪಾತ್ರಗಳು ನಮಗೆ ಕಾಣಿಸಿಕೊಳ್ಳುವ ಕ್ಷಣ ದೂರವಾಗಿಲ್ಲ ಎಂದರು
ಇತೀಚೆಗೆ ಕುರುಕ್ಷೇತ್ರದಲ್ಲಿ ನಡೆದ ಭಗವದ್ಗೀತೆಯ ಗೀತಾ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಪಾತ್ರಗಳ ಬಗ್ಗೆ ತಿಳಿಸುವ ದೊಡ್ಡ ಸತ್ಯ ಸಂಗತಿಯನ್ನು ಇಡೀ ಭಾರತದಾದ್ಯಂತ ವಿವರಿಸುವ ಅಭಿಯಾನವನ್ನು ಮಾಡಲಾಗುತ್ತದೆ ಎಂದು ಹೇಳಿದರು. ವರದಿ. ಮಂಜುಳಾ ರೆಡ್ಡಿ



