ಸುದ್ಧಿ

DEEDS ವತಿಯಿಂದ ವಿಚಾರ ಸಂಕೀರ್ಣ – ಮರ್ಲಿನ್ ಮಾರ್ಟಿಸ್

DEEDS ವತಿಯಿಂದ ವಿಚಾರ ಸಂಕೀರ್ಣ – ಮರ್ಲಿನ್ ಮಾರ್ಟಿಸ್,

ಬೆಂಗಳೂರು. DEEDS ವತಿಯಿಂದ DEEDS ವತಿಯಿಂದ ವಿಚಾರ ಸಂಕೀರ್ಣ ಏರ್ಪಡಿಸಲಾಗಿದೆ ಎಂದು ನಿರ್ದೇಶಕರಾದ ಮರ್ಲಿನ್ ಮಾರ್ಟಿಸ್ ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು.
ಉಚಿತ ಕಾನೂನು ಸೇವೆಗಳು, ಮಹಿಳೆಯರ ಸ್ಥಿತಗತಿ, ಸವಾಲುಗಳು ಮತ್ತು ಮಹಿಳಾ ನ್ಯಾಯ ವಿಚಾರಗಳ ಕುರಿತು ದಿನಾಂಕ 20 ರಂದು ಬೆಳಿಗ್ಗೆ 10:30 ರಿಂದ 04:30 ರ ವರೆಗೂ ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯಲ್ಲಿರುವ ವಿಶ್ರಾಂತಿ ನಿಲಯದಲ್ಲಿ ವಿಚಾರ ಸಂಕಿರಣ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯರಾದ ಹೆಚ್ ಶಶಿಧರ್ ಶೆಟ್ಟಿ, ವಕೀಲರಾದ ವಿನಯ್ ಶ್ರೀನಿವಾಸ್, ಸುಮಿತ್ರ ಆಚಾರ್ಯ ಮುಂತಾದ ಗಣ್ಯರು, ಚಿಂತಕರೂ, ವಿಚಾರವಾಧಿಗಳು, ಈ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಸುಮಾರು 70 ರಿಂದ 100 ಜನ ಸೇರುವ ಬಗ್ಗೆ ಮಾಹಿತಿ ತಿಳಿಸಿದರು DEEDS ವತಿಯಿಂದ ನಿರ್ದೇಶಕರಾದ ಮರ್ಲಿನ್ ಮಾರ್ಟಿಸ್, ಗೀತಾಪಾಟೀಲ್, ಜಸಿಂತಾ ಪಿರೇರಾ, ಪಕೀರಮ್ಮ ರವರು ಪತ್ರಿಕಾ ಗೋಷ್ಠಿ ನಡೆಸಿರುತ್ತಾರೆ. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button