ಕನಕಗಿರಿಯಲ್ಲಿ ಹದಿಗೆಟ್ಟ ರಸ್ತೆಗಳು ! ಕ್ಯಾರೆ ಅನ್ನದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು.

ಕನಕಗಿರಿಯಲ್ಲಿ ಹದಿಗೆಟ್ಟ ರಸ್ತೆಗಳು ! ಕ್ಯಾರೆ ಅನ್ನದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು
ಕನಕಗಿರಿ ಪಟ್ಟಣದ ಹಲವಾರು ವಾರ್ಡುಗಳ ರಸ್ತೆಗಳು ಕಾಮಗಾರಿಗೆ ಇಲ್ಲದೆ ಸಾರ್ವಜನಿಕರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಪಟ್ಟಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಹಲವು ರಸ್ತೆಗಳು ಮಳೆಯಿಂದ ಹಾಗೂ ಚರಂಡಿಯಿಂದ ಹೊರಬರುವ ನೀರಿನಿಂದ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮಳೆ ನೀರು ಹಾಗೂ ಚರಂಡಿಯ ನೀರು ನಿಂತು ಸಾಂಕ್ರಾಮಿಣಕ ರೋಗ ಬರುವ ಸಾಧ್ಯತೆ ಹೆಚ್ಚಾಗಿದ್ದು ಈಗಾಗಲೇ ಅನೇಕ ವಾರ್ಡ್ಗಳಲ್ಲಿ ಟೈಫಾಯಿಡ್ ಮಲೇರಿಯಾ ಡೆಂಗು ಅಂತ ಅಪಾಯಕಾರಿ ರೋಗಗಳು ಹಬ್ಬುತ್ತದ್ದು ಇದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿ ನೋಡದ ಹಾಗೆ ಲೆಕ್ಕಿಸದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ ಇದನ್ನು ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗದಂತೆ ರಸ್ತೆಗಳ ಅಭಿವೃದ್ಧಿ ಗೊಳಿಸಬೇಕೆಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಹಾಗೂ ಚರಂಡಿಗಳ ಕಾಮಗಾರಿಕೆಗಳನ್ನು ನಿರ್ವಹಣ ಮಾಡಬೇಕಾಗಿದೆ.
11 ,13 ,14 ,15, 16 ,17, ವಾರ್ಡಿನ ಮುಖ್ಯರಸ್ತೆಯಲ್ಲಿ ಮಳೆ ಬಂದರೆ ಚರಂಡಿ ನೀರು ಹಾಗೂ ಮಳೆಯ ನೀರು ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಈಗಾಗಲೇ ಮನವಿ ಸಲ್ಲಿಸಿದರು ಕೂಡ ಯಾವುದೇ ತರಹದ ಕಾಮಗಾರಿಕೆ ರಸ್ತೆ ನಿರ್ಮೂಲ ಮಾಡುತ್ತಿಲ್ಲ ಎಂದು ಸ್ಥಳೀಯರಾದ ಹೊಳೆಯಪ್ಪ ಪಾಲಿ ಹಾಗೂ ಕಾಂಗ್ರೆಸ್ ಮುಖಂಡರಾದ ನಾಗೇಶಪ್ಪ ಉಪ್ಪಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಇದರಿಂದ 15ನೇ ವಾರ್ಡಿನಲ್ಲಿ ಅನೇಕ ಮಕ್ಕಳಿಗೆ ಟೈಫಾಯಿಡ್ ಮಲೇರಿಯಾ ದಂತ ಅನೇಕ ಜೀವಾ ಅಪಾಯಕಾರಿ ರೋಗ ಲಕ್ಷಣಗಳು ಕಂಡು ಬರುತ್ತಿವೆ.ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ಬೀಚಿಂಗ್ ಪೌಡರ್ ಹಾಗೂ ಪ್ರತಿ ಡ್ರೈನೇಜ್ ಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಎಸೆಯಬೇಕಿದ್ದು ಇಲ್ಲದಿದ್ದಲ್ಲೇ ಪ್ರಾಣಾಂತಕ ರೋಗಗಳಿಗೆ ಸಾರ್ವಜನಿಕರು ತುತ್ತಾಗುತ್ತಾರೆ ಎಂದು ಸ್ಥಳೀಯರಾದ ಹೊಳೆಯಪ್ಪ ಪಾಲಿ ಹಾಗೂ ನಾಗೇಶ್ ಉಪ್ಪಾರ್ ಕಾಂಗ್ರೆಸ್ ಮುಖಂಡರು ತಿಳಿಸಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



