ಪತ್ರಿಕೋದ್ಯಮಸಂಪಾದಕೀಯ

ಕರ್ನಾಟಕ ರಾಜ್ಯ ರೈತ ಸಂಘದಿಂದ ಎಪಿಎಂಸಿ ನಿರ್ದೇಶಕರಿಗೆ ಬೇಡಿಕೆ ಈಡೇರಿಸಲು ಮನವಿ

ಕರ್ನಾಟಕ ರಾಜ್ಯ ರೈತ ಸಂಘದಿಂದ ಎಪಿಎಂಸಿ ನಿರ್ದೇಶಕರಿಗೆ ಬೇಡಿಕೆ ಈಡೇರಿಸಲು ಮನವಿ

ಕನಕಗಿರಿ ಪಟ್ಟಣದಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ರೈತರ ಬೇಡಿಕೆ ಈಡೇರಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯದಿಂದ ಮಾರುಕಟ್ಟೆ ನಿರ್ದೇಶಕರಿಗೆ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.

ಹಲವು ದಿನಗಳಿಂದ ಎಪಿಎಂಸಿ ಪ್ರಾಂಗಣದಲ್ಲಿ ಆಗುತ್ತಿರು ಅನೇಕ ಗೊಂದಲಗಳಿಂದ ರೈತರು ಬೇಸತ್ತು ಹೋಗಿದ್ದಾರೆ ಮತ್ತು ಎಪಿಎಂಸಿಗೆ ಸಂಬಂಧಪಟ್ಟಂತಹ ಅನೇಕ ಕೃಷಿ ಮಾರುಕಟ್ಟೆಯ ಮಾಳಿಗೆಗಳಲ್ಲಿ ಬಟ್ಟೆ ಪಾದರಕ್ಷೆಗಳು ಸೈಕಲ್ ಗಳ ಅಂಗಡಿಗಳು ಮತ್ತು ಇನ್ನು ಇತರ ಅಂಗಡಿಗಳು ಇದ್ದು ಇದನ್ನು ಯಾರು ಲೆಕ್ಕಿಸುತ್ತಿಲ್ಲ ಎಂದು ಆರೋಪಿಸುತ್ತ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಇವರು ಎಪಿಎಂಸಿ ನಿರ್ದೇಶಕರ ಮುಖಾಂತರ ಆಪ್ತ ಕಾರ್ಯದರ್ಶಿ ಬೆಂಗಳೂರು ಇವರಿಗೆ ಕನಕಗಿರಿಯ ಕಾರ್ಯದರ್ಶಿ ಮುಖಾಂತರ ಮನವಿ ಸಲ್ಲಿಸಿದರು.

ರೈತರ ಹಾಕ್ಕೋತಾಯಗಳು

೧) ಕನಕಗಿರಿ ಎಪಿಎಂಸಿ ಬ್ಲೂ ಪ್ರಿಂಟ್ ಪ್ರಕಾರ ಎಪಿಎಂಸಿ ಸುತ್ತ ಕಾಂಪೌಂಡ್ ಅನ್ನು ನಿರ್ಮಿಸಬೇಕು.
೨) ಎಪಿಎಂಸಿ ಕಂಪೌಂಡನ್ನು ತೆರವುಗೊಳಿಸಿದವರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಬೇಕು.
೩) ಕನಕಗಿರಿ ಎಪಿಎಂಸಿಯಲ್ಲಿ ಬ್ಲೂ ಪ್ರಿಂಟ್ ನಿಯಮ ಉಲ್ಲಂಘನೆ ಮಾಡಿರುವವರಿಗೆ ಸೂಕ್ತ ಕ್ರಮ ಜರುಗಿಸಿಲ್ಲ ಯಾಕೆ?
ಎಪಿಎಂಸಿ ಲೈಸೆನ್ಸ್ ಪಡೆದು ಕೃಷಿಯೇತರ ಬಾಡಿಗೆ ನೀಡಿರುವವರು ವಿರುದ್ಧ ಕ್ರಮ ಜರುಗಿಸಿಲ್ಲ ಯಾಕೆ?
೪) ಕನಕಗಿರಿ ಎಪಿಎಂಸಿಯಲ್ಲಿ ಎಷ್ಟು ಜನ ಲೈಸೆನ್ಸ್ ಹೋಲ್ಡರ್ ಇದ್ದಾರೆ ಅವರ ಹೆಸರಿನೊಂದಿಗೆ ಮಾಹಿತಿಯನ್ನು ನೀಡಬೇಕು.
೫) APMC ಕನಕಗಿರಿಯ ಪ್ಲಾಟ್ ನಂಬರ್ 36ರಲ್ಲಿ ಅನಧಿಕೃತವಾಗಿ ನೆಲಮಹಾಡಿ ನಿರ್ಮಿಸಿರುತ್ತಾರೆ.
ಇದಕ್ಕೆ ಪರ್ಮಿಷನ್ ಕೊಟ್ಟಿರುವವರು ಯಾರು ಮತ್ತು ನೆಲ ಮಾಡಿ ಕಟ್ಟಲು ಎಪಿಎಂಸಿ ಆದೇಶ ಇದ್ದರೆ. ಒಂದು ಪ್ರತಿ ನಮಗೆ ನೀಡಿ ಇಲ್ಲವಾದರೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಟ್ಟಡವನ್ನು ಡೆಮಾಲಿಶ್ ಮಾಡಲು ರೈತ ಸಂಘ ಒತ್ತಾಯ.
೬) ಕನಕಗಿರಿ ಎಪಿಎಂಸಿಯಲ್ಲಿ ಬಿಳಿ ಚೀಟಿ ವ್ಯವಹಾರ ಯಥೇಚ್ಛವಾಗಿ ನಡೆಯುತ್ತಿದೆ. ಇದರಿಂದ ರೈತರಿಗೆ ಮೋಸ ಆಗುತ್ತಿದೆ. ಅಧಿಕಾರಿಗಳು ತಡೆಗಟ್ಟಬೇಕು.

ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಮುತ್ತಿಗೆ ಹಾಕಲು ರಾಜ್ಯ ರೈತ ಸಂಘ ಹಸಿರು ಸೇನೆಯವರು ಎಚ್ಚರಿಕೆಯನ್ನು ನೀಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೃಷ್ಣಪ್ಪ ಚಲವಾದಿ ಹಿರಿಯ ರೈತ ಮುಖಂಡರು.ಸಗರಪ್ಪ ಕಂಪ್ಲಿ ಹಿರಿಯ ರೈತ ಮುಖಂಡರು. ಸಣ್ಣಹನುಮನಗೌಡ ಬಸರಿಹಾಳ್ ಅಧ್ಯಕ್ಷರು. ಮರಿಯಪ್ಪ ಹುಗ್ಗಿ ಕನಕಪುರ ಅಧ್ಯಕ್ಷರು.
ದುರ್ಗಪ್ಪ ತಿಪ್ಪನಾಳ ಹಿರಿಯ ರೈತ ಮುಖಂಡರು .
ತಿಪ್ಪಾರೆಡ್ಡಿ ಹುಲಿಹೈದರ್.
ಮರಿಯಪ್ಪ ಕಾರ್ಯದರ್ಶಿಗಳು ಕನಕಪುರ.
ಪಾಮಣ್ಣ ಪೂಜಾರ್ ಗೌರವಾಧ್ಯಕ್ಷರು .
ಕೃಷ್ಣ ಕಾಕಿ. ವೀರೇಶ್ ಬಾವಿಕಟ್ಟಿ.. ನಾಗೇಶ್ ಪೂಜಾರ್. ಕನಕಪ್ಪ ಸಿರಿವಾರ್. ಇನ್ನಿತರ ರೈತ ಮುಖಂಡರು ಭಾಗವಹಿಸಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button