ಸುದ್ಧಿ

ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ.Goutam Yadav.

ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ

ಕನಕಗಿರಿ ತಾಲೂಕಿನ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿಯಲ್ಲಿ ಹೊರ ಮತ್ತು ಒಳರೋಗಿಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿದ್ದು, ಪ್ರಸ್ತುತ ಇರುವ ವೈದ್ಯಾಧಿಕಾರಿಗಳು/ಸಿಬ್ಬಂದಿಗಳ ಮೇಲೆ ಕಾರ್ಯದೊತ್ತಡ ಹೆಚ್ಚಾಗಿರುತ್ತದೆ. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು/ಸಿಬ್ಬಂದಿಗಳ ಕೊರತೆಯಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆ ಉಂಟಾಗುತ್ತಿದೆ ಎಂದು Dr G ಸತೀಶ್ ತಿಳಿಸಿದರು.

ಮತ್ತು ಮುಂದುವರೆದು, ಸದರಿ ಆಸ್ಪತ್ರೆಯು 30 ಆಸಿಗೆಯ ಸಮುದಾಯ ಆರೋಗ್ಯ ಕೇಂದ್ರವಾಗಿದ್ದು ತಾಲೂಕಿನ ಪೌಷ್ಠಿಕ ಪುನಚೇತನ ಕೇಂದ್ರವಾಗಿ ಕಾರ್ಯನಿರ್ವಸುತ್ತಿರುತ್ತದೆ. ಆದರೆ ಸೂಕ್ತ ತಜ್ಞ ವೈದ್ಯರು/ವೈದ್ಯಾಧಿಕಾರಿಗಳು ಮತ್ತು ಶುಶೂಷ ಅಧಿಕಾರಿಗಳು ಕೊರತೆ ಇದ್ದು ರೋಗಿಗಳಿಗೆ ಮುಕ್ತ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಈ ಕಾರಣ ಮೇಲಿನ ವೈದ್ಯರ ಮತ್ತು ಇತರೆ ಸಿಬ್ಬಂದಿಗಳ ಕೊರತೆಯನ್ನು ನೇಮಕ ಮಾಡಿ ಅಥಾವ ನೀಯೊಜನೆ ಮೂಲಕ ಪರಿಹಿರಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕೋರಲಾಗಿದೆ ಎಂದು Dr G, ಸತೀಶ್ ತಿಳಿಸಿದರು.

ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button