ಸುದ್ಧಿ

** ಆರೋಗ್ಯಕರ ದೇಹವನ್ನು ಹೊಂದಲು ಯೋಗ ಮುಖ್ಯ**

ಆರೋಗ್ಯಕರ ದೇಹವನ್ನು ಹೊಂದಲು ಯೋಗ ಮುಖ್ಯ*

ಕನಕಗಿರಿ ಪೊಲೀಸ್ ಠಾಣೆ ಆವರಣದಲ್ಲಿ ಸಿಬ್ಬಂದಿಗಳಿಗೆ ಯೋಗ ಅಭ್ಯಾಸ

ಕನಕಗಿರಿ ತಾಲೂಕಿನ ಪೊಲೀಸ್ ಠಾಣೆಯ ಆವರಣದಲ್ಲಿ ಸಿಬ್ಬಂದಿಗಳೆಲ್ಲರೂ ಸೇರಿ ಪ್ರತಿನಿತ್ಯವೂ ಯೋಗ ಮಾಡುವುದರ ಮೂಲಕ ತಮ್ಮ ದೇಹವನ್ನು ಹಾಗೂ ಮನಸ್ಸನ್ನು ಚಂಚಲ ಹಾಗೂ ಒತ್ತಡಗಳಿಂದ ಕೂಡಿರುತ್ತದೆ ಅದಕ್ಕಾಗಿ ಪ್ರತಿಯೊಬ್ಬರು ಯೋಗಾಸನ ಮಾಡುವ ಮೂಲಕ ತಮ್ಮ ಮಾನಸಿಕ ಎಂದು ಯೋಗಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಿ ಐ ಎಂ ಡಿ ಫೈಸಿಲ್ ತಿಳಿಸಿದರು.

ನಂತರ ಯಾಗದ ಕುರಿತು ಮಾತನಾಡಿದ ಸಿಬ್ಬಂದಿ ಗಳಾದ ಮುತ್ತಣ್ಣ ಜೆಮೆದರ್ ಅವರು ಯೋಗದ ಬಗ್ಗೆ ಮಾಹಿತಿ ನೀಡಿ ಯೋಗವು ಮೂಲಭೂತವಾಗಿ ಒಂದು ಆಧ್ಯಾತ್ಮಿಕ ಶಿಸ್ತುಯಾಗಿದ್ದು ಅದು ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದೆ ಅದು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ವಿಜ್ಞಾನ ಮತ್ತು ಆರೋಗ್ಯಕರ ಮತ್ತು ಉತ್ತಮ ಜೀವನ ಕಲೆಯಾಗಿದೆ ಎಂದು ತಿಳಿಸಿದರು.

ಈ ವೇಳೆ ಕನಕಗಿರಿಯ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಎ ಎಸ್ ಐ ಲಕ್ಕಣ್ಣ ಮುತ್ತಪ್ಪ ಸಿದ್ದು ಕೊಪ್ಪಳ್ ಶೇಖರ್ ರಮೇಶ್ ಚೌಡಕಿ ಶ್ರೀಕಾಂತ್ ಪರಶುರಾಮ್ ಬೈಲಪ್ಪ ಗವಿಸಿದ್ದಯ್ಯ ಹಿರೇಮಠ್ ಸೋಮಶೇಖರ್ ಬಸವರಾಜ್ ಹನುಮಂತ ಮಾಂತೇಶ್ ಮುತ್ತಣ್ಣ ಹಿರೇಮನಿ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button