ಕಲಬುರಗಿಯ ಮಾನವೀಯ ಕಲ್ಯಾಣ ಟ್ರಸ್ಟ್ನ ವತಿಯಿಂದ ಅಂತರರಾಷ್ಟ್ರೀಯ ಚಿಕಿತ್ಸಾರ್ಥಿಗಳಿಗೆ ಸೇವೆ ಬೆಂಗಳೂರು. ಕಲಬುರಗಿಯ

ಕಲಬುರಗಿಯ ಮಾನವೀಯ ಕಲ್ಯಾಣ ಟ್ರಸ್ಟ್ನ ವತಿಯಿಂದ ಅಂತರರಾಷ್ಟ್ರೀಯ ಚಿಕಿತ್ಸಾರ್ಥಿಗಳಿಗೆ ಸೇವೆ ಬೆಂಗಳೂರು. ಕಲಬುರಗಿಯ ಮಾನವೀಯ ಕಲ್ಯಾಣ ಟ್ರಸ್ಟ್ನ ವತಿಯಿಂದ ಅಂತರರಾಷ್ಟ್ರೀಯ ಚಿಕಿತ್ಸಾರ್ಥಿಗಳಿಗೆ ಸೇವೆ ಸೌಲಭ್ಯ ವಿದೇ ಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಕಲಬುರಗಿಯ ಅರುಜೀವ ಆಯುರ್ವೇದ ಆಸ್ಪತ್ರೆಗೆ ಪ್ರತಿಷ್ಠಿತ ಆಯುಷ್ ಕ್ವಾಲಿಟಿ ಮಾರ್ಕ್ ಮಾನ್ಯತೆ
ಜಾಗತಿಕ ಗುಣಮಟ್ಟದ ಆಯುರ್ವೇದ ಚಿಕಿತ್ಸೆಗೆ ಮನ್ನಣೆ; ವೈದ್ಯಕೀಯ ಮತ್ತು ವೆಲ್ನೆಸ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದ್ದೇವೆಂದು ತಿಳಿಸಿದರು.
ಕಲಬುರಗಿ: ಕರ್ನಾಟಕದ ಕಲಬುರಗಿಯ ಮಾನವೀಯ ಕಲ್ಯಾಣ ಟ್ರಸ್ಟ್ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರುಜೀವ ಆಯುರ್ವೇದ ಆಸ್ಪತ್ರೆಯು ಭಾರತ ಸರ್ಕಾರದ ಆಯುಷ್ ಸಚಿವಾಲಯದ ಪ್ರತಿಷ್ಠಿತ ಆಯುಷ್ ಕ್ವಾಲಿಟಿ ಮಾರ್ಕ್ (AYUSH Quality Mark) ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಮಾನ್ಯತೆ ಪಡೆದ ವಿಶ್ವದ ಪ್ರಥಮ ಹಾಗೂ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಅರುಜೀವ ಪಾತ್ರವಾಗಿದೆ ಎಂದು ಸಂಸ್ಥೆ ತಿಳಿಸಿದರು.
ಆಯುರ್ವೇದ ಚಿಕಿತ್ಸೆಯಲ್ಲಿ ಗುಣಮಟ್ಟ, ರೋಗಿಗಳ ಸುರಕ್ಷತೆ, ನೈತಿಕ ವೈದ್ಯಕೀಯ ಪದ್ಧತಿಗಳು ಮತ್ತು ಪರಿಣಾಮಕಾರಿ ನಿರ್ವಹಣಾ ವ್ಯವಸ್ಥೆಗಳಿಗೆ ಆದ್ಯತೆ ನೀಡುತ್ತಿರುವ ಅರುಜೀವ ಆಸ್ಪತ್ರೆಯ ಸಾಧನೆಗೆ ಈ ಮಾನ್ಯತೆ ಮತ್ತಷ್ಟು ಮನ್ನಣೆ ನೀಡಿದೆ. ಸಾಂಪ್ರದಾಯಿಕ ಆಯುರ್ವೇದ ಜ್ಞಾನವನ್ನು ಆಧುನಿಕ ಗುಣಮಟ್ಟದ ನಿರ್ವಹಣಾ ವ್ಯವಸ್ಥೆಗಳೊಂದಿಗೆ ಸಂಯೋಜಿಸಿ, ರೋಗಿಗಳಿಗೆ ಸುರಕ್ಷಿತ ಹಾಗೂ ಸಮಗ್ರ ಆರೋಗ್ಯ ಸೇವೆ ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಇದರೊಂದಿಗೆ, ಆಸ್ಪತ್ರೆಯು ಪ್ರತಿಷ್ಠಿತ QAI 7101 ಮಾನ್ಯತೆಯನ್ನೂ ಪಡೆದುಕೊಂಡಿದೆ. ಈ ಮಾನ್ಯತೆಗಳು ಆಯುರ್ವೇದ ಚಿಕಿತ್ಸಾ ಸೇವೆಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಬಲಪಡಿಸುವುದರ ಜೊತೆಗೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಕಳೆದ ಒಂದೂವರೆ ವರ್ಷದಲ್ಲಿ ಭಾರತ ಸೇರಿದಂತೆ ಯುರೋಪ್, ಅಮೆರಿಕ, ರಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಿಂದ ಆಗಮಿಸಿದ ಹಲವಾರು ಚಿಕಿತ್ಸಾರ್ಥಿಗಳಿಗೆ ಅರುಜೀವ ಆಸ್ಪತ್ರೆ ಸೇವೆ ಒದಗಿಸಿದೆ. ಪಂಚಕರ್ಮ, ಡಿಟಾಕ್ಸ್ ಚಿಕಿತ್ಸೆ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ನಿರ್ವಹಣೆ, ಪುನರ್ವಸತಿ, ತಡೆಗಟ್ಟುವ ಆರೋಗ್ಯ ಸೇವೆಗಳು ಹಾಗೂ ವೆಲ್ನೆಸ್ ಚಿಕಿತ್ಸೆಗಳು ಆಸ್ಪತ್ರೆಯ ಪ್ರಮುಖ ಸೇವೆಗಳಾಗಿವೆ ಎಂದು ತಿಳಿಸಿದರು. ವರದಿ. ಮಂಜುಳಾ ರೆಡ್ಡಿ.



