ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ: ಡಾ. ರಂಗಾರೆಡ್ಡಿ ಅವರ ಹತ್ತು ವರ್ಷಗಳ ಸಮಾಜ ಸೇವೆ. ಕನಕಗಿರಿ.

ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ: ಡಾ. ರಂಗಾರೆಡ್ಡಿ ಅವರ ಹತ್ತು ವರ್ಷಗಳ ಸಮಾಜ ಸೇವೆ
ಕನಕಗಿರಿ: ಮನುಷ್ಯರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಪ್ರಾಣಿಗಳ ಮೇಲಿನ ಕಾಳಜಿಯನ್ನೂ ತೋರಿಸುತ್ತಿರುವ ಡಾ. ರಂಗಾರೆಡ್ಡಿ (BAMS) ಅವರು ಕಳೆದ ಸುಮಾರು ಹತ್ತು ವರ್ಷಗಳಿಂದ ಬೀದಿ ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡುವ ಮೂಲಕ ವಿಶಿಷ್ಟ ಸಮಾಜ ಸೇವೆ ಮಾಡುತ್ತಿದ್ದಾರೆ.
ಇದುವರೆಗೆ ಸುಮಾರು ನೂರಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರೇಬಿಸ್ ತಡೆ ಲಸಿಕೆ ನೀಡಿರುವ ಅವರು, ಪ್ರಾಣಿಗಳ ಆರೋಗ್ಯದೊಂದಿಗೆ ಸಾರ್ವಜನಿಕರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಈ ಸೇವೆ ಮುಂದುವರಿಸುತ್ತಿದ್ದಾರೆ. ಬೀದಿ ನಾಯಿಗಳಲ್ಲಿ ರೇಬಿಸ್ ರೋಗದ ಹರಡುವಿಕೆ ತಡೆಗಟ್ಟುವಲ್ಲಿ ಲಸಿಕೆ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಡಾ. ರಂಗಾರೆಡ್ಡಿ ಅವರ ಸೇವೆ ಗಮನಾರ್ಹವಾಗಿದೆ.
ಹಲವು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಡಾ. ರಂಗಾರೆಡ್ಡಿ ಅವರು ಸಾರ್ವಜನಿಕರ ಮೆಚ್ಚುಗೆ ಹಾಗೂ ಪ್ರೀತಿಗೆ ಪಾತ್ರರಾಗಿದ್ದಾರೆ. ಪ್ರಾಣಿಗಳ ಮೇಲಿನ ಕಾಳಜಿ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಅವರು ಮಾಡುತ್ತಿರುವ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಡಾ. ರಂಗಾರೆಡ್ಡಿ ಅವರ ಹತ್ತು ವರ್ಷಗಳ ಸಾಮಾಜಿಕ ಸೇವೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಗುರುತಿಸಿ, ಸೂಕ್ತ ಗೌರವ ಮತ್ತು ಪ್ರೋತ್ಸಾಹ ನೀಡಬೇಕು. ಇಂತಹ ಸಮಾಜಮುಖಿ ಕಾರ್ಯಗಳಿಗೆ ಉತ್ತೇಜನ ನೀಡುವುದರಿಂದ ಇನ್ನಷ್ಟು ಮಂದಿ ಪ್ರಾಣಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸೇವೆ ಸಲ್ಲಿಸಲು ಪ್ರೇರಣೆ ದೊರೆಯಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಾ. ರಂಗಾರೆಡ್ಡಿ ಅವರ ನಾಯಿ ಪ್ರೀತಿ ಹಾಗೂ ಸಮಾಜದ ಹಿತದೃಷ್ಟಿಯ ಸೇವೆ ಶ್ಲಾಘನೀಯವಾಗಿದೆ.
ಕಳೆದ ಸುಮಾರು ಹತ್ತು ವರ್ಷಗಳಿಂದ ಬೀದಿ ನಾಯಿಗಳಿಗೆ ರೇಬಿಸ್ ತಡೆ ಲಸಿಕೆ ನೀಡುವ ಮೂಲಕ ಪ್ರಾಣಿಗಳ ಆರೋಗ್ಯದ ಜೊತೆಗೆ ಸಾರ್ವಜನಿಕರ ಸುರಕ್ಷತೆಗೂ ಕೊಡುಗೆ ನೀಡುತ್ತಿದ್ದಾರೆ.
ನೂರಕ್ಕೂ ಹೆಚ್ಚು ಶ್ವಾನಗಳಿಗೆ ಲಸಿಕೆ ನೀಡಿರುವ ಅವರ ನಿಸ್ವಾರ್ಥ ಸೇವೆ ಮಾನವೀಯತೆ ಮತ್ತು ಪ್ರಾಣಿ ಪ್ರೀತಿಗೆ ಉತ್ತಮ ಮಾದರಿಯಾಗಿದೆ.
ಸಮಾಜದ ಹಿತಕ್ಕಾಗಿ ಅವರು ಮಾಡುತ್ತಿರುವ ಈ ವಿಶಿಷ್ಟ ಸೇವೆಯನ್ನು ಸಾರ್ವಜನಿಕರು ಮೆಚ್ಚಿ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಗುರುತಿಸಿ ಗೌರವಿಸಬೇಕೆಂದು ಆಶಿಸುತ್ತೇನೆ.
ಪಶುಪತಿ ಪಾಟೀಲ್ ಸ್ಥಳೀಯ ಮೆಡಿಕಲ್ ಪ್ರೊಪರೇಟರ್ ಕನಕಗಿರಿ
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ:8867257737.






