ಕಲ್ಬುರ್ಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಾಧಾಕೃಷ್ಣ ಆರ್ ದೊಡ್ಡಮನಿ.
ಕಲ್ಬುರ್ಗಿ ಲೋಕಸಭಾ ಚುನಾವಣೆ 2024 ಕಲ್ಬುರ್ಗಿ ಲೋಕಸಭಾ ಮೀಸಲು ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಾಧಾಕೃಷ್ಣ ಆರ್ ದೊಡ್ಡಮನಿಯವರ ಪರಿಚಯ ಚಿತ್ತಾಪುರ ತಾಲೂಕು ಸಂಪತ್ ಭರಿತವಾದದ್ದು ಇದು ಜೋಳ ತೊಗರಿ ಬೆಳೆಯುವದಕ್ಕೆ ತುಂಬಾ ಪ್ರಸಿದ್ಧವಾದುದು ಅಲ್ಲದೆ ಪರಿಸಿಕಲ್ಲು ಧಾರಾಳವಾಗಿ ದೊರೆಯುತ್ತದೆ ಮರಳು ಸಾಕಷ್ಟು ಇದೆ ಈ ತಾಲೂಕಿನ ಮಣ್ಣಿನ ಮಕ್ಕಳಾದ ರೈತರು ಸುಖ ಸಂತೋಷ ಶಾಂತಿ ಸಮೃದ್ಧಿಯಿಂದ ಇದ್ದಾರೆ ಈ ತಾಲೂಕಿನ ಗುಂಡುಗುರ್ತಿ ಗ್ರಾಮದ ಸುಪ್ರಸಿದ್ಧ ರೈತ ಮನೆತನದ ಯಜಮಾನರಾದ ರಾಜೇಂದ್ರಪ್ಪ ದೊಡ್ಡಮನಿ ಯವರದು ವ್ಯವಸಾಯಕ್ಕೆ ಹೆಸರಾದ ಮನೆತನ ಕೃಷಿ ಕೃತ್ಯದಲ್ಲಿ ತುಂಬಾ ಹೆಸರುವಾಸಿಯಾದುದು ವ್ಯವಸಾಯ ಪ್ರಧಾನವಾದ ಈ ಕುಟುಂಬ ಜಮೀನ್ದಾರಿ ಸಂಸ್ಕೃತಿಯಿಂದ ಕೂಡಿದ್ದು ಕುರಿ ಮೇಕೆ ಹಸು ದನ ಕರುಗಳಿಂದ ಹಾಗೂ ಎತ್ತು ಎಮ್ಮೆಗಳಿಂದ ಕೂಡಿದ ಸಿರಿವಂತ ಮನೆತನ ದಾನ ಧರ್ಮ ಪುಣ್ಯ ಪರೋಪಕಾರಕ್ಕೆ ಹೆಸರಾದ ಮನೆತನ ಇಂತಹ ಕುಟುಂಬದ ಯಜಮಾನ ಶ್ರೀ ರಾಜೇಂದ್ರಪ್ಪ ದೊಡ್ಡಮನಿಯವರ ದೊಡ್ಡ ಮನಸ್ಸು ದೊಡ್ಡ ಹೃದಯ ದೊಡ್ಡ ಕೆಲಸ ಕಾರ್ಯಗಳಿಂದ ಮತ್ತು ದೊಡ್ಡ ಮನೆ ಕಟ್ಟಿರುವುದರಿಂದ ದೊಡ್ಡಮನಿಯವರೆಂದೆ ಹೆಸರುವಾಸಿಯಾದವರು ತಾಲೂಕಿನಲ್ಲಿತಮ್ಮ ರಾಜಕೀಯ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡವರು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಗುಂಡಗುರ್ತಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬದುಕಿರುವ ತನಕ ಅದರ ಸದಸ್ಯರಾಗಿ ಅನೇಕ ಜನೋಪಕಾರಿ ಮತ್ತು ಪರೋಪಕಾರಿ ಕೆಲಸಗಳನ್ನು ಮಾಡುವ ಮೂಲಕ ಅತ್ಯುತ್ತಮ ಸಮಾಜ ಸೇವಕರೆನ್ನಿಸಿ ಕೊಂಡವರು ಇವರು ಚಿತ್ತಾಪುರ ತಾಲೂಕಿನಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಶಿವಮ್ಮನವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿ ದಾಂಪತ್ಯ ಜೀವನವನ್ನು ಮಾಡಿದವರು ಮುದ್ದಾದ ಮೂರು ಮಕ್ಕಳಿಗೆ ಜನ್ಮವನ್ನು ನೀಡಿದರು ಹಿರಿಯ ಮಗಳು ರಾಧಾಬಾಯಿ ಇವರು ಇಂದಿನ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮತ್ತು ರಾಷ್ಟ್ರಮಟ್ಟದ ನಾಯಕರಾಗಿರುವ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಡದಿಯಾಗಿ ಮನೆ ತುಂಬಿದರು ರಾಧಾ ಬಾಯಿಯವರು ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರ ಬಾಳ ಸಂಗಾತಿಯಾಗಿ ೧೯೬೮ರಲ್ಲಿ ಖರ್ಗೆ ಯವರ ಮನೆಯನ್ನು ಬಾಳಿ ಬೆಳಗಿದವರು ಇವರ ಬೆನ್ನು ಹಿಂದೆ ಜನಿಸಿದವರೆ ರಾಧಾಕೃಷ್ಣ ಆರ್ ದೊಡ್ಡಮನಿ ಮತ್ತು ಆರ್ ದತ್ತಾತ್ರೇಯ ಅವರು ಅವರು ರಾಧಾಕೃಷ್ಣ ಅವರು ಸೆಪ್ಟೆಂಬರ್ 16 1960 ರಲ್ಲಿ ಜನಿಸಿದರು ಇವರಿಗೆ ಈಗ 64 ವರ್ಷ ವಯಸ್ಸು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಮತ್ತು ಪ್ರೌಢಶಾಲಾ ಅಭ್ಯಾಸವನ್ನು ವಿಜಯ ವಿದ್ಯಾಲಯ ಕಲಬುರ್ಗಿಯಲ್ಲಿ ಮಾಡಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದರು ಅಕ್ಕ ರಾಧಾಬಾಯಿ ಅವರಿಗೆ ಅಕ್ಕರೆಯ ತಮ್ಮನಾಗಿ ಹಿರಿಯ ಮಗನಂತೆ ಅವರ ಮನೆಯಲ್ಲಿ ಉಳಿದುಕೊಂಡು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಿದರು ಪ್ರಾಯಕ್ಕೆ ಬಂದಾಗ ಸ್ವತಂತ್ರ ಉದ್ಯೋಗವನ್ನು ಮಾಡಿ ಬಾಳಿ ಬದುಕಬೇಕೆಂಬ ಹಂಬಲದೊಂದಿಗೆ ಬೆಂಗಳೂರಿನಲ್ಲಿ ಕನಿಷ್ಕಾ ಗ್ಯಾಸ್ ಏಜೆನ್ಸಿ ಪ್ರಾರಂಭಿಸಿದರು ವಾಣಿಜ್ಯೋದ್ಯಮದ ಜೊತೆಗೆ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷ ಪದವಿಯನ್ನು ಅಲಂಕರಿಸಿದರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರುಅಧ್ಯಕ್ಷರಾಗಿ ಕಲ್ಬುರ್ಗಿಯ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಭಾವ ಮಲ್ಲಿಕಾರ್ಜುನ್ ಖರ್ಗೆ ಅವರು 1972 ರಲ್ಲಿ ಗುರುಮಿಟ್ಕಲ್ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಮೊದಲ ಬಾರಿಗೆ ಶಾಸಕರಾದರು ಅವರು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿರುವಾಗ ಅಕ್ಕ ರಾಧಾಬಾಯಿ ಮತ್ತು ಭಾವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ರಾಧಾಕೃಷ್ಣ ಅವರು ವಾಸಿಸತೊಡಗಿದರು ಖರ್ಗೆ ಅವರಿಗೆ ಒಟ್ಟು ಐದು ಜನ ಮಕ್ಕಳು ಇದ್ದಾರೆ ಮೊದಲ ಪುತ್ರಿ ಡಾ. ಜೈಶ್ರೀ ಅವರು ವೈದ್ಯರಾಗಿದ್ದಾರೆ ಎರಡನೆಯವರು ರಾಹುಲ್ ಕಂಪ್ಯೂಟರ್ ಇಂಜಿನಿಯರ್ ಆಗಿ ಸ್ವತಂತ್ರವಾಗಿ ಉದ್ಯೋಗವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಪ್ರಿಯಾಂಕ ಖರ್ಗೆಯವರು ಶಾಸಕ ಸಚಿವರಾಗಿ ಇಂದು ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ ನಾಲ್ಕನೆಯ ಮಗಳು ಪ್ರಿಯದರ್ಶಿನಿ ವೈದ್ಯರಾಗಿ ಸ್ವತಂತ್ರವಾಗಿ ತಮ್ಮ ಆಸ್ಪತ್ರೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಕೊನೆಯ ಮಗ ಮಿಲಿಂದ ಅವರು ಕಂಪ್ಯೂಟರ್ ಇಂಜಿನಿಯರ್ ಆಗಿ ಎಂಬಿಎ ಪದವಿಯನ್ನು ಅಮೆರಿಕದಲ್ಲಿ ಮುಗಿಸಿ ಈಗ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರ ಹಿರಿಯ ಪುತ್ರಿ ಡಾ. ಜೈ ಶ್ರೀ ಅವರನ್ನು ರಾಧಾಕೃಷ್ಣ ದೊಡ್ಡಮನಿಯವರೊಂದಿಗೆ ಬೆಂಗಳೂರು ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಮದುವೆಯನ್ನು ಮಾಡಿಕೊಟ್ಟರು ಈ ರಾಧಾಕೃಷ್ಣ ದಂಪತಿಗಳಿಗೆ ಪ್ರಾರ್ಥನಾ ಎಂಬ ಏಕೈಕ ಪುತ್ರಿ ಇದ್ದಾರೆ ಇವರು ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ವಕಾಲತ್ತು ವೃತ್ತಿಯನ್ನು ಕೈಗೊಂಡಿದ್ದಾರೆ ರಾಧಾಕೃಷ್ಣ ದೊಡ್ಡಮನಿ ಅವರು ಮೂಲತಃ ವಾಣಿಜ್ಯೋದ್ಯಮಿಗಳು ಮತ್ತು ಅನೇಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವುದರಿಂದ ದೀನ ದಲಿತ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಪಡೆಯುವಲ್ಲಿ ಉದಾರವಾಗಿ ನೆರವು ನೀಡಿದ್ದಾರೆ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ವಿಧಾನಸಭಾ ಸದಸ್ಯರಾಗಿ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡು ಅನೇಕ ರಾಜ್ಯ ಹಾಗೂ ರಾಷ್ಟ್ರದ ಸಚಿವ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಮಾಡಿದ ಸೇವೆ ಸ್ಮರಣೀಯ ನಂತರ ಈಗ ರಾಜ್ಯಸಭಾ ಸದಸ್ಯರಾಗಿ ವಿರೋಧ ಪಕ್ಷದ ನಾಯಕರಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ 2024ರ ಲೋಕಸಭಾ ಚುನಾವಣೆ ಅವರ ನೇತೃತ್ವದಲ್ಲಿ ಭಾರತ ದೇಶದಾದ್ಯಂತ ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಮತ್ತು ಹೆಮ್ಮೆ ಪಡುವಂತಾಗಿದೆ ಖರ್ಗೆ ಸಾಹೇಬರ ಈ ಎಲ್ಲ ಚುನಾವಣೆಗಳ ಗೆಲುವಿನ ಹಿಂದೆ ಹಗಲಿರುಳು ಸೇವೆ ಸಲ್ಲಿಸಿ ಜನಪ್ರಿಯರಾದವರು ರಾಧಾಕೃಷ್ಣ ಅವರು ಖರ್ಗೆಯವರ ಮನೆಯ ಅಳಿಯನಾಗಿ ಹಿರಿಯ ಮಗನಂತೆ ಅವರ ನೆರಳಾಗಿ ಅತ್ಯಂತ ವಿಶ್ವಾಸಾರ್ಹತೆಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬೆಳೆದವರು ಖರ್ಗೆ ಸಾಹೇಬರ ಇಡೀ ರಾಜಕೀಯ ವಲಯದ ಜನತೆ ಇವರಿಗೆ ಪರಿಚಯ ಇರುವುದರಿಂದ ಕರ್ನಾಟಕದ ತುಂಬಾ ಇರುವ ಎಲ್ಲಾ ರಾಜಕಾರಣಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಇವರ ಸಂಬಂಧಗಳು ಬಹಳಷ್ಟು ಅರ್ಥಪೂರ್ಣ ಹಾಗೂ ಮೌಲಿಕವಾಗಿವೆ 64 ವರ್ಷ ವಯಸ್ಸಿನ ರಾಧಾಕೃಷ್ಣ ಅವರಿಗೆ ಸುಮಾರು 45 ವರ್ಷಗಳ ರಾಜಕೀಯ ಅನುಭವವಿದೆ ಭಾವ ಮಲ್ಲಿಕಾರ್ಜುನ ಖರ್ಗೆ ಅವರ ಚುನಾವಣೆಗಳು ಮತ್ತುಅಳಿಯ ಪ್ರಿಯಾಂಕ ಖರ್ಗೆ ಅವರ ಚುನಾವಣೆಗಳು ನಿಭಾಯಿಸಿದ ಕೀರ್ತಿ ಇವರದಾಗಿದೆ ಇವರಿಬ್ಬರ ಗೆಲುವಿನ ಹಿಂದೆ ಇರುವ ರಾಧಾಕೃಷ್ಣ ಅವರು ಅಪಾರವಾದ ರಾಜಕೀಯ ಅನುಭವವನ್ನು ಹೊಂದಿದ್ದಾರೆ ರಾಧಾಕೃಷ್ಣ ಅವರದು ಮಾತು ಬೆಳ್ಳಿ ಮೌನ ಬಂಗಾರ ಎನ್ನುವಂತೆ ಮೃದು ಸ್ವಭಾವದವರು ಮೃದುವಚನಗಳೇ ಸಕಲ ಜಪತಪಂಗಳು ಎನ್ನುವಂತೆ ಇದ್ದಾರೆ ಮತ್ತು ಅಷ್ಟೇ ಶಾಂತ ಸ್ವಭಾವವನ್ನು ಅಳವಡಿಸಿಕೊಂಡವರು ತುಂಬಾ ಕಡಿಮೆ ಮಾತನಾಡುತ್ತಾರೆ ವಿಚಾರವಂತರೂ ಬುದ್ಧಿವಂತರಾಗಿದ್ದಾರೆ ನುಡಿದಂತೆ ನಡೆದುಕೊಳ್ಳುತ್ತಾರೆ ಜನರ ಕೆಲಸಗಳನ್ನು ಅತ್ಯಂತ ಪ್ರೀತಿ ಹಾಗೂ ಕಾಳಜಿಯಿಂದ ಮಾಡಿಕೊಡುತ್ತಾರೆ ಸಾರ್ವಜನಿಕರ ಕೆಲಸ ಕಾರ್ಯಗಳು ಮಾಡಿಕೊಡುವುದರ ಮೇಲೆ ಅಪಾರವಾದ ಕಾಳಜಿ ಇದೆ ತುಂಬಾ ಜನಪ್ರಿಯ ವ್ಯಕ್ತಿಯಾಗಿದ್ದು ತಮ್ಮ ಭಾವ ಖರ್ಗೆಯವರ ಆಪ್ತ ವಲಯ ತಮ್ಮದನಾಗಿಸಿಕೊಂಡಿದ್ದಾರೆ ರಾಧಾಕೃಷ್ಣ ಅವರು ನೇರವಾಗಿ ರಾಜಕೀಯ ಮಾಡದಿದ್ದರೂ ಖರ್ಗೆಯವರ ರಾಜಕೀಯ ಜೀವನದ ಹಿಂದಿನ ಕೇಂದ್ರ ಶಕ್ತಿಯೇ ಇವರಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಕಲ್ಬುರ್ಗಿ ಲೋಕಸಭಾ ಮತಕ್ಷೇತ್ರ ಇವರಿಗೆ ಹೊಸದಲ್ಲ ಗುಲ್ಬರ್ಗ ಉತ್ತರ ಜೇವರ್ಗಿ ಸೇಡಂ ಚಿತ್ತಾಪುರ ಗುರುಮಿಟ್ಕಲ್ ಆಫ್ಜಲ್ಪುರ್ ಈ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಶ್ರಮಿಸಿರುವುದರಿಂದ ಮತಕ್ಷೇತ್ರದ ಜನತೆ ಅವರನ್ನು ಸುಲಭವಾಗಿ ಗುರುತಿಸುತ್ತಾರೆ ಇವರು ಎಲ್ಲರಿಗೆ ತುಂಬಾ ಪರಿಚಿತರಾಗಿರುವುದರಿಂದ ಕಲ್ಬುರ್ಗಿ ಲೋಕಸಭಾ ಮೀಸಲು ಮತಕ್ಷೇತ್ರದ ಚುನಾವಣೆ ಸರಳವಾಗಿ ಗೆದ್ದು ತಮ್ಮ ಕೈವಶಕ್ಕೆ ಪಡೆದುಕೊಳ್ಳುತ್ತಾರೆ ಎಂದು ಜನಗಳು ಹೇಳುತ್ತಿದ್ದಾರೆ ಅಪಾರ ರಾಜಕೀಯ ಅನುಭವ ಹೊಂದಿರುವ ರಾಧಾಕೃಷ್ಣ ಅವರು ಸರಳ ಸಜ್ಜನ ಸ್ವಭಾವದ ವ್ಯಕ್ತಿಯಾಗಿದ್ದಾರೆ ಇವರ ಸರಳತೆ ಶಾಂತತೆಯೇ ಇವರ ಗೆಲುವಿಗೆ ಕಾರಣವಾಗಲಿವೆ ಖರ್ಗೆಯವರ ಇದುವರೆಗಿನ ರಾಜಕೀಯ ಮತ್ತು ಅವರ ಕೆಲಸ ಕಾರ್ಯಗಳು ಹಾಗೂ ಪ್ರಿಯಾಂಕ ಖರ್ಗೆ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರ ಕೆಲಸ ಕಾರ್ಯಗಳು ರಾಧಾಕೃಷ್ಣ ಅವರ ಗೆಲುವಿಗೆ … ಶ್ರೀರಕ್ಷೆಯಾಗಲಿವೆ ಕಳೆದ 52 ವರ್ಷಗಳಿಂದ ತಮ್ಮ ರಾಜಕೀಯ ಹಾಗೂ ಸಾರ್ವಜನಿಕ ಜೀವನದ ಫಲ ತಮ್ಮ ಅಳಿಯ ರಾಧಾಕೃಷ್ಣ ಅವರಿಗೆ ಧಾರೆಯರೆದು ಆಶೀರ್ವದಿಸಬೇಕೆಂದು ಕಲ್ಬುರ್ಗಿ ಲೋಕಸಭಾ ಮತದಾರ ಮಹಾಜನತೆಗೆ ಮನವಿ ಮಾಡಿಕೊಂಡಿದ್ದಾರೆ ಪ್ರಿಯಾಂಕ ಖರ್ಗೆ ಅವರು ತಮ್ಮ ಸೋದರ ಮಾವನ ಗೆಲುವಿಗಾಗಿ ತೊಂಕ ಕಟ್ಟಿ ಕಂಕಣ ಬದ್ಧರಾಗಿ ನಿಂತಿದ್ದಾರೆ ಖರ್ಗೆಯವರ ಆಶೀರ್ವಾದ ಪ್ರಿಯಾಂಕ ಖರ್ಗೆ ಅವರ ಬೆಂಬಲದಿಂದ ಕಲ್ಬುರ್ಗಿ ಲೋಕಸಭಾ ಸದಸ್ಯ ಸ್ಥಾನದಲ್ಲಿ ಗೆಲುವು ಸಾಧಿಸಿದರೆ ಅಶ್ಚರ್ಯ ಪಡಬೇಕಾಗಿಲ್ಲ ಕಲ್ಬುರ್ಗಿ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು ಸ್ಥಾನದಲ್ಲಿ ಮಾತ್ರ ಇವೆ ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಇರುವುದರಿಂದ ರಾಧಾಕೃಷ್ಣ ದೊಡ್ಡಮನಿಯವರ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ ಮಲ್ಲಿಕಾರ್ಜುನ ಖರ್ಗೆ ಅವರು ಸಾಧನೆಗಳ ಸರ್ದಾರರಾಗಿದ್ದಾರೆ ಅವರು ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕಾಗಿ ತಂದ 371 ಕಲಂ ಯಾರೂ ಮರೆಯದ ಐತಿಹಾಸಿಕ ಘಟನೆಯಾಗಿದೆ ಸುಮಾರು 50 ಎಕರೆ ಪ್ರದೇಶದಲ್ಲಿ ಕಲ್ಬುರ್ಗಿಯಲ್ಲಿ ಬುದ್ಧ ವಿಹಾರ ನಿರ್ಮಾಣ ಕಾರ್ಯ ಮೆಚ್ಚುವಂಥದ್ದು ಏಷ್ಯಾ ಖಂಡದಲ್ಲಿ ಇದು ಮೊದಲು ಎಂದು ಹೇಳಬಹುದು ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿ ವಿಮಾನ ನಿಲ್ದಾಣ ಇತಿಹಾಸಿಕ ಇಎಸ್ಐ ಹಾಸ್ಪಿಟಲ್ ಮೆಡಿಕಲ್ ಕಾಲೇಜ್ ಪೊಲೀಸ್ ಟ್ರೈನಿಂಗ್ ಸೆಂಟರ್ ಯಾದಗಿರಿಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಕಲ್ಬುರ್ಗಿ ಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕಲ್ಬುರ್ಗಿ ಜಿಲ್ಲೆಗೆ ವಿನೂತನವಾದ ಎಸ್ ಪಿ ಆಫೀಸ್ ಮತ್ತು ರಂಗಮಂದಿರ ಜಗತ್ ವೃತ್ತದಲ್ಲಿರುವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಆ ಸಂದರ್ಭದಲ್ಲಿ ರಾಷ್ಟ್ರ ನಾಯಕಿ ಇಂದಿರಾಗಾಂಧಿಯವರನ್ನು ಕರೆದು ಉದ್ಘಾಟನೆ ಮಾಡಿಸಿದ್ದು ಅವಿಸ್ಮರಣೀಯ ಇಂಥ ಹತ್ತಾರು ಕಾರ್ಯಗಳನ್ನು ಮಾಡಿದ ಮುಂದೆ ಮಾಡಲಿರುವ ಹಾಗೂ ಅವರು ಇದುವರೆಗೆ ತಂದ ಯೋಜನೆಗಳು ಹಾಗೂ ನಿಂತು ಹೋದ ಯೋಜನೆಗಳು ಅವುಗಳಿಗೆ ಪುನಹ ಜೀವ ಬರಬೇಕಾದರೆ ರಾಧಾ ಕೃಷ್ಣ ಅವರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ ಅದಕ್ಕಾಗಿ ಈ ಬಾರಿ ಮತದಾರರು ಖರ್ಗೆ ಅವರನ್ನು ಬೆಂಬಲಿಸಲು ಕಳೆದ ಬಾರಿ ಅವರನ್ನು ಸೋಲಿಸಿದ ಪಶ್ಚಾತಾಪಕ್ಕಾಗಿ ಈ ಬಾರಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಗೆಲ್ಲಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಸಂಪಾದಕರು



