ಸುದ್ಧಿ

ಕಲ್ಯಾಣ ಕರ್ನಾಟಕ ಪ್ರದೇಶದ ಶಾಸಕರಿಗೆ ಎಚ್ಚರಿಕೆ. ಪ್ರೊ. ಶಿವರಾಜ್ ಪಾಟೀಲ್.

ಕಲ್ಯಾಣ ಕರ್ನಾಟಕ ಪ್ರದೇಶದ ಶಾಸಕರಿಗೆ ಎಚ್ಚರಿಕೆ ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ನಾಯಕರಾದ ವೈಜನಾಥ ಪಾಟೀಲ್ ಅವರ ಪ್ರಯತ್ನ ಹಾಗೂ ಲೋಕ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವರ್ಚಸ್ಸು ಹಾಗೂ ಪ್ರಭಾವದಿಂದ ಶಾಸನಬದ್ಧವಾಗಿ ಅಸ್ತಿತ್ವಕ್ಕೆ ಬಂದ 371 ಕಲಂ ಈಗ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಕಾಲ ಬಂದಿದೆ ಒಂದು ಕಾಲಕ್ಕೆ 371 ಕಲಂ ಜಾರಿಗೆ ತರುವುದಕ್ಕಾಗಿ ಹೋರಾಡಬೇಕಾಯಿತು ನಂತರ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೋರಾಡಬೇಕಾಯಿತು ಈಗ ಅದರ ಉಳುವಿಗಾಗಿ ಹೋರಾಟ ಮಾಡಬೇಕಾದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಬೆಂಗಳೂರಿನ ಪೀಣ್ಯದಲ್ಲಿರುವ ಒಂದು ಸಾಮಾನ್ಯ ಹಸಿರು ಪ್ರತಿಷ್ಠಾನವು ಜೂನ್ ಒಂದರಂದು ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ 371 ಕಲಂ ವಿರುದ್ಧ ಹೋರಾಟವನ್ನು ರೂಪಿಸಿದೆ 371 ಕಲಂ ದಿಂದ ಕೇವಲ ಏಳು ಜಿಲ್ಲೆಗಳಿಗೆ ಮಾತ್ರ ಉಪಯೋಗವಾಗುತ್ತದೆ ಕರ್ನಾಟಕದ ಉಳಿದ ಎಲ್ಲ ಜಿಲ್ಲೆಗಳಿಗೆ ಅನ್ಯಾಯವಾಗುತ್ತದೆ ಎಂಬುದು ಅವರ ವಾದವಾಗಿದೆ 371 ಕಲಂ ವಿರುದ್ಧ ಕರ್ನಾಟಕ ರಾಜ್ಯಪಾಲರಿಗೆ ಮನವಿ ಸಲ್ಲಿಸುವದಾಗಿ ಪತ್ರಿಕೆ ಹೇಳಿಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಹರಿಯ ಬಿಟ್ಟಿದ್ದಾರೆ ಇದು ಕಲ್ಯಾಣ ಕರ್ನಾಟಕದ ಜನತೆಗೆ ಮಾಡುತ್ತಿರುವ ಬಹುದೊಡ್ಡ ಅನ್ಯಾಯವಾಗಿದೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ನಾವು ಎಲ್ಲ ರೀತಿಯಿಂದ ಹಳೆ ಮೈಸೂರಿನ ಜನರಿಗೆ ಸಿಗುವ ಸೌಲತ್ತನ್ನು ಕುರಿತು ಪ್ರಶ್ನಿಸಿಲ್ಲ ಆದರೆ ಇಂದು ನಮಗೆ ದೊರೆಯುವ ರಾಜಕೀಯ ಸೌಲತ್ತಿನ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿದ್ದಾರೆ ಮೈಸೂರು ರಾಜ್ಯ ಆದಾಗಿನಿಂದ ಮೈಸೂರು ಅರಸದಿಂದ ಹಿಡಿದು ಸಿದ್ದರಾಮಯ್ಯ ನವರವರೆಗೆ ಕಲ್ಯಾಣ ಕರ್ನಾಟಕದ ಜನತೆಗೆ ಅನ್ಯಾಯ ಆಗುತ್ತಲೇ ಬಂದಿದೆ ಮತ್ತು ನಾವು ದ್ವಿತೀಯ ದರ್ಜೆಯ ಪ್ರಜೆಗಳೆಂದು ಅವರು ಭಾವಿಸಿದ್ದಾರೆ ಈಗ 371 ಕಲ್ಲಮದಿಂದ ದೊರೆಯುವ ರಾಜಕೀಯ ಸವಲತ್ತುಗಳನ್ನು ಕಸಿದುಕೊಳ್ಳಲು ಹೊರಟಿದ್ದಾರೆ ಅಂದು ನಾವು ಕರ್ನಾಟಕ ಏಕೀಕರಣದಲ್ಲಿ ಹೋರಾಟ ಮಾಡಿ ಕರ್ನಾಟಕದ ಒಳಗೆ ಸೇರಿಕೊಳ್ಳಬೇಕಾಯಿತು ಇಂದು ಪ್ರತ್ಯೇಕೀಕರಣಕ್ಕಾಗಿ ಹೋರಾಟ ಮಾಡಬೇಕಾದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಹಳೆ ಮೈಸೂರಿನ ಜನತೆಯ ಧೋರಣೆ ಹೀಗೆ ಮುಂದುವರೆದರೆ ನಾವು ಖಂಡಿತ ಸಿಡಿಲಿ ಹೇಳಬೇಕಾಗುತ್ತದೆ ಮತ್ತು ಪ್ರತ್ಯೇಕ ಕರ್ನಾಟಕದ ಬೇಡಿಕೆ ಇಡಬೇಕಾಗುತ್ತದೆ ಇದು ಕರ್ನಾಟಕ ಒಡೆಯುವುದಲ್ಲ ಕರ್ನಾಟಕ ಕಟ್ಟುವುದಕ್ಕಾಗಿ ಬೆಳೆಯುವುದಕ್ಕಾಗಿ ಮುಂದುವರೆಯುವುದಕ್ಕಾಗಿ ಮತ್ತು ರಾಜಕೀಯ ಸೌಲತ್ತುಗಳನ್ನು ಪಡೆಯುವುದಕ್ಕಾಗಿ ಈಗ ತುರ್ತಾಗಿ ಹೋರಾಟ ಮಾಡಬೇಕಾದ ಪ್ರಸಂಗ ನಿರ್ಮಾಣವಾಗಿದೆ ಕಲ್ಯಾಣ ಕರ್ನಾಟಕದ ವಿಧಾನಸಭಾ ಸದಸ್ಯರು ಹಾಗೂ ವಿಧಾನಪರಿಷತ್ತಿನ ಸದಸ್ಯರು ಹಾಗೂ ಲೋಕಸಭಾ ಸದಸ್ಯರು ಒಂದಾಗಿ ಚೆಂದಾಗಿ ವ್ಯವಸ್ಥಿತವಾಗಿ ಹೋರಾಟ ಮಾಡಬೇಕಾದ ಪ್ರಸಂಗ ನಿರ್ಮಾಣವಾಗಿದೆ ಶಾಸಕರು ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಒಂದು ವೇಳೆ ಯಾವುದೇ ಶಾಸಕರು ಈ ಹೋರಾಟದಲ್ಲಿ ಭಾಗವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನದ ಬಗ್ಗೆ ಹಾಗೂ ಜನಪ್ರತಿನಿಧಿಯಾಗುವ ಬಗ್ಗೆ ಜನತೆ ವಿಚಾರ ಮಾಡಬೇಕಾದ ಪ್ರಸಂಗ ನಿರ್ಮಾಣವಾಗುತ್ತದೆ ಈ ಹೋರಾಟಕ್ಕೆ ಬೆಂಬಲಿಸದಿದ್ದರೆ ಅವರಿಗೆ ನಾವು ಬೆಂಬಲಿಸುವ ಪ್ರಶ್ನೆಯೇ ಬರುವುದಿಲ್ಲ ಕಲ್ಯಾಣ ಕರ್ನಾಟಕದ ಶಾಸಕರು ಈಗ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಜನ ತಿರುಗಿ ಬೀಳುವ ರೆಂಬುದನ್ನು ಅರವಿನಲ್ಲಿಟ್ಟುಕೊಳ್ಳಬೇಕು ಈಗ ಕಲ್ಯಾಣ ಕರ್ನಾಟಕದ ಹೋರಾಟಗಳ ಸಮನ್ವಯ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನ ಸೇರಬೇಕಾಗಿದೆ 371 ಕಲಂ ಉಳಿಸಿಕೊಳ್ಳಬೇಕಾಗಿದೆ ಈಗ ಉಳುವಿಗಾಗಿ ಹೋರಾಟ ಮಾಡಬೇಕಾದಂತ ಕೆಟ್ಟ ಸಂದರ್ಭ ನಿರ್ಮಾಣವಾಗಿದೆ ಕಲ್ಯಾಣ ಕರ್ನಾಟಕದ ಶಾಸಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ ಈ ಹೋರಾಟದಲ್ಲಿ ತಾವು ವ್ಯವಸ್ಥಿತವಾಗಿ ಪಾಲ್ಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಶಾಸಕ ಸಚಿವ ಸ್ಥಾನಕ್ಕೆ ಕುತ್ತು ಬರುವುದರಲ್ಲಿ ಸಂದೇಹವಿಲ್ಲ ವಿಧಾನಸಭೆ ಲೋಕಸಭೆಗೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಸಂವಿಧಾನದ ಯಾವುದೇ ತಿದ್ದುಪಡಿ ಒಂದು ಬಾರಿ ಅಸ್ತಿತ್ವಕ್ಕೆ ಬಂದರೆ ಅದನ್ನು ತೆಗೆದುಹಾಕುವ ಅಧಿಕಾರ ಯಾರಿಗೂ ಇಲ್ಲ ಮತ್ತೆ ಅದು ಲೋಕಸಭೆಗೆ ರಾಜ್ಯಸಭೆಗೆ ಹೋಗಬೇಕು ಇದನ್ನು ವಿರೋಧಿಸುವವರೆಗೆ ನಾವು ಧಿಕ್ಕಾರ ಹೇಳಬೇಕಾಗಿದೆ ಹಸಿರು ಪ್ರತಿಷ್ಠಾನಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡಲು ನೀಡಿದ ಸ್ಥಳಾವಕಾಶವನ್ನು ಕೂಡಲೇ ರದ್ದು ಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಸರ್ಕಾರದ ಈ ದ್ವಿಮುಖ ಧೋರಣೆ ಖಂಡನೀಯ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಯಾಣ ಕರ್ನಾಟಕ

Related Articles

Leave a Reply

Your email address will not be published. Required fields are marked *

Back to top button