ಹಿಂದುಳದ ವರ್ಗದವರ ಆಶಾಕಿರಣ – ಹೆಚ್. ಆಂಜನೆಯುಲು ಬೆಂಗಳೂರು.
ಹಿಂದುಳದ ವರ್ಗದವರ ಆಶಾಕಿರಣ – ಹೆಚ್. ಅಂಜೇನೆಯುಲು ಬೆಂಗಳೂರು. ವಿಧಾನಪರಿಷತ್ ಚುನಾವಣೆ ಹಿನ್ನಲಯಲ್ಲಿ ನಡೆಯಲಿರುವ ಮಾಜಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಹೆಚ್.ಆಂಜನೇಯ ರವರು 2013ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒಳಸಂಚಿನಿಂದ ಅಲ್ಲಮತದಿಂದ ಸೋತರೂ ಎದೆಗುಂದದೆ 2024ನೇ ಸಾಲಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿ ಸಮಾಜದ ಮುಖಂಡರನ್ನು ಕಾರ್ಯಕರ್ತರನ್ನು ಒಗ್ಗೂಡಿಸಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಮನವಿ ಮಾಡಿ ಕಾಂಗ್ರೆಸ್‌ಗೆ ಮತ ನೀಡಲು ಹಗಲಿರಳು ಹೋರಾಟ ಮಾಡಿ ಕಾಂಗ್ರೆಸ್ ಪಕ್ಷದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಎಂದು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ರಂಗಸ್ವಾಮಿ ಯವರು ತಿಳಿಸಿದರು . ದಿನಾಂಕ: 13-7-2024 ರಂದು ಒಟ್ಟು 11 ಸ್ಥಾನಗಳಿಗೆ ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ.
ಪಕ್ಷದ ಪರವಾಗಿ ಇವರ ಹೋರಾಟ, ದಿಟ್ಟತನ, ಎದೆಗಾರಿಕೆಯನ್ನು ಯಾರು ಅಲ್ಲಗಳೆಯುವಂತಿಲ್ಲ, ಅವರು ಸಚಿವರಾಗಿದ್ದಾಗ ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ ಜಾತಿಗಳಿಗೆ ಹೊಸ ಹೊಸ ಯೋಜನೆಯನ್ನು ಕೈಗೊಂಡು ಯೋಜನಾ ವೆಚ್ಚದ ಅರ್ಧ ಭಾಗದಷ್ಟು ಸಬ್ಸಿಡಿ ನೀಡಿ ಬಡವರ ದೀನ ದಲಿತರ, ಹಿಂದುಳದ ವರ್ಗದವರ ಆಶಾಕಿರಣ ಆಗಿದ್ದರು. ಇಡೀ ರಾಜ್ಯಾದ್ಯಂತ ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಮ್ ಭವನ, ವಾಲ್ಮೀಕಿ ಭವನ, ಕನಕ ಭವನ, ಬೆಂಗಳೂರಿನಲ್ಲಿ 100 ಕೋಟಿ ವೆಚ್ಚದ ಇಡೀ ಭಾರತದಲ್ಲಿ ಎಲ್ಲೂ ಇರದಂತಹ ಅದ್ಭುತವಾದ, ವಿಶಿಷ್ಟ ಶೈಲಿಯ ಬಾಬು ಜಗಜೀವನರಾಮ್ ಸಂಶೋಧನಾ ಮತ್ತು ತರಬೇತಿ ಕೇಂದ್ರವನ್ನು ಕಟ್ಟಿಸಿದ್ದಾರೆ. ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಎಸ್ ಸಿ ಪಿ/ ಟಿ .ಎಸ್. ಪೀ ಯೋಜನೆ ಅನುಷ್ಠಾನ ಮಾಡಿ ಈ ರಾಜ್ಯದಲ್ಲೇ ಮಾದರಿ ಆಗಿದ್ದಾರೆ. ಎಂದು ಲೋಕೇಶ್ ಕುಮಾರ್ ತಿಳಿಸಿದರು . ಹಾಸ್ಟೆಲ್ ಪ.ಜಾತಿ, ಅರ್ಥಿಕ ಮೀಸಲಾತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಿ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಮಾಡಿ, ದಲಿತರ ಹಾಗೂ ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಶ್ರಮಿಸಿರುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಮಾನತೆಯ ದೃಷ್ಟಿಯಿಂದ ಅಲೆಮಾರಿಗಳಿಗೆ ಪ್ರತ್ಯೇಕ ಅನುದಾನ ನೀಡಿದವರಲ್ಲಿ ಇವರು ಮೊದಲಿಗರಾಗಿದ್ದಾರೆ. ಇವರಿಗೆ ಕರ್ನಾಟಕದ ಮೂಲೆ ಮೂಲೆಯಲ್ಲಿ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿದ್ದು, ಇವರ ಸೇವೆ ಈ ರಾಜ್ಯಕ್ಕೆ ಇನ್ನು ಹೆಚ್ಚು ಹೆಚ್ಚು ಬೇಕಾಗಿದೆ. ಇವರನ್ನು ನಂಬಿಕೊಂಡಿರುವ, ಇವರಿಂದ ಸಹಾಯಕ್ಕಾಗಿ ಕಾದಿರುವ ಲಕ್ಷಗಟ್ಟಲೇ ಕಾರ್ಯಕರ್ತರಿದ್ದಾರೆ. ಎಲ್ಲಾ ಪ.ಜಾತಿಗಳಿಗೆ ಅವರವರ ಜಾತಿಗೆ ನಿಗಮಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಸಾಧನೆ ಬಗ್ಗೆ ಬರೆಯುವುದಾದರೆ ಪುಟಗಳು ಸಾಲದು. ಇವರ ನಾಲ್ಕುವರೆ ದಶಕಗಳ ಜನ ಸೇವೆ ಮತ್ತು ಪಕ್ಷ ನಿಷ್ಠೆಯನ್ನು ಪರಿಗಣಿಸಿ ಇವರನ್ನು ಕರ್ನಾಟಕ ವಿಧಾನ ಪರಿಷತ್ ಗೆ ಆಯ್ಕೆ ಮಾಡುವುದರ ಮುಖಾಂತರ ಕಾರ್ಯಕರ್ತರಿಗೆ, ಮತ್ತು ಪಕ್ಷದ ಸಂಘಟನೆಗೆ ಶಕ್ತಿ ತುಂಬಬೇಕಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನ ವನ್ನು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಹಿರಿಯ ನಾಯಕರಲ್ಲಿ ನಮ್ಮ ಸವಿನಯ ಮನವಿ ಎಂದು ಸಂಘದ ಅ್ಯಕ್ಷರಾದ ಹನುಮಂತಪ್ಪ ನವರು ಕೋರಿದರು. ವರದಿ. ಮಂಜುಳಾ ರೆಡ್ಡಿ.




