ಸುದ್ಧಿ

ಯಾವ ಜನ್ಮದ ಮೈತ್ರಿ ಪುಸ್ತಕ ಲೋಕಾರ್ಪಣೆ – ವೇದಾವತಿ…..

ಯಾವ ಜನ್ಮದ ಮೈತ್ರಿ ಪುಸ್ತಕ ಲೋಕಾರ್ಪಣೆ – ವೇದಾವತಿ

                                    ಬೆಂಗಳೂರು .  ರಾಮನಾಮ ಪಾಯಸಕ್ಕೆ ಎಂದು   ಶುರುಮಾಡಿ  ಸಾಕು ಪ್ರಾಣಿಗಳನ್ನು  ರಾಮ ಎಂದು ಭಾವಿಸಿದ ಒಂದು ಭವ್ಯ ಭಾವನದ ಪುಸ್ತಕವನ್ನು  ನಗರದ ಚೆಂಚ್ರಿ ಕ್ಲಬ್ ನಲ್ಲಿ  ಭಂಡುಗಳ ನಡುವೆ ಬಿಡುಗಡೆ ಮಾಡಿದರು.
  ಯಾವ ಜನುಮದ ಮೈತ್ರಿ, ನಿನ್ನ ಪ್ರೀತಿಯ ಒಲವು! ನಮ್ಮ ಸಂಸಾರಕೆ ಮುಡುಪಾಯಿತೋ ನಾಕಾಣೆ ನಮ್ಮ ಮಕ್ಕಳೇ ಇರಲಿ, ನಮ್ಮವರೇ ಇರಲಿ, ನಾನಾದರಿರಲಿ, ನಮ್ಮ ಹಿಂದೆ ನೀನಿರುವೆ ಎಲ್ಲೆಡೆಯೂ. ಮನೆಯಿಂದ ಯಾರು ಹೋದರೂ ಸರಿಯೆ, ಯಾರು ಬಂದರು ಸರಿಯೇ, ಅವರ ಹಿಂದೆಯೇ ಹೋಗಿ ಬರುವೆ ಯಾವಾಗಲೂ! ನಿನ್ನ ಅನುರಾಗವನದೆಷ್ಟು ವರ್ಣಿಸಲಿ, ಎಷ್ಟು ಹೊಗಳಲಿ, ನನ್ನ ಊಹೆಗೂ ನಿಲುಕದ ವಿಷಯವದೂ! ನಿನ್ನ ಅಭಿಮಾನಕ್ಕೆ ಸಿಲುಕಿದ ನಾವೆಷ್ಟು ಧನ್ಯರೋ! ನಿನ್ನ ಪ್ರೇಮಾನುಭವವನ್ನು ಪಡೆದ ನಾವೇನು ಪುಣ್ಯವಂತರೋ ನಾವದನರಿಯೆವೊ॥ ನಿನ್ನ ಅವಿನಾಭಾವದ ಕರುಣೆಗೆ ನಾವೇನು ನೀಡಲು ಸಾಧ್ಯ ನಿನಗೆ? ರಾಮ್‌!

ನಿನ್ನ ವಾತ್ಸಲ್ಯಕ್ಕೆ ಸಮವೇನಿದೆ ಈ ಜಗದೊಳು, ನಿನ್ನ ಅಪಾರ ಪ್ರೀತಿಗೆ ಪಾತ್ರರಾದವರು ನಾವು! ನಿನ್ನ ಮಹಿಮೆಗೆ ಚಿರಋಣಿಗಳು ನಾವು! ಮತ್ತೆ ಹುಟ್ಟಿ ಬರಬಾರದೆ ರಾಮ ನಮ್ಮೆಡೆಗೆ! ಅದರಿಂದಲ್ಲವೇ ನಿನ್ನ ಮೇರುನಾಮ ನಮ್ಮ ಮನೆಗೆ! ಅದರಿಂದಲ್ಲವೇ ನಿನ್ನ ಪವಿತ್ರ ನಾಮ ನಮ್ಮಿ ನಾಯಿ ಮರಿಗಳಿಗೆಲ್ಲಾ ಶಾಶ್ವತವಾಗಿ ನೆಲೆಯಾಗಿರುವುದು! ಕೇವಲ ನಾಮದಿಂದಲೇ ನಿನ್ನನ್ನು ಸದಾ ಸ್ಮರಿಸಿ ಧನ್ಯರಾಗುವೆವು ನಾವೆಲ್ಲಾ ವೇದಾವತಿ ಅವರ ಅದ್ಭುತ ರಚನೆ . ಲೋಕಾರ್ಪಣೆ ವಾಯಿತು , ಈ ಕಾರ್ಯಕ್ರಮದಲ್ಲಿ ಶಿವಾನಂದ ಅವರು ಮತ್ತು , ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅ್ಯಕ್ಷರಾದ ಸಿದ್ದರಾಮಯ್ಯ ಮತ್ತು, ಪ್ರೆಸ್ ಕ್ಲಬ್ ನ ಮಾಜಿ ಅಧಯಕ್ಷರಾದ ಸತ್ಯನಾರಾಯಣ ಮುಂತಾದವರು ಉಪಶಿತಿಯಲ್ಲಿದ್ದರು. ವರದಿ. ಮಂಜುಳಾ ರೆಡ್ಡಿ.

Oplus_131072

Related Articles

Leave a Reply

Your email address will not be published. Required fields are marked *

Back to top button