ಸುದ್ಧಿ

ಕ್ಷೌರಿಕ ವೃತ್ತಿಯನ್ನು ಹಜಾಮತ್ ಎಂದ ರಾಜಣ್ಣನವರ ಹೇಳಿಕೆ ಖಂಡಿಸಿ ಬೆಂಗಳೂರು .

ಕ್ಷೌರಿಕ ವೃತ್ತಿಯನ್ನು ಹಜಾಮತ್ ಎಂದು ಹೇಳಿರುವ ರಾಜಣ್ಣನವರ ಹೇಳಿಕೆ ಖಂಡಿಸಿ ಬೆಂಗಳೂರು . ಕೆ.ಎನ್.ರಾಜಣ್ಣ ನವರು ಸವಿತಾ ಸಮೂದಾಯದ ಹೇಳಿಕೆಯನ್ನು ನೇರವಾಗಿ ಪ್ರಸಾರ ಮಾಡಿರುವ ಖಾಸಗಿ ನ್ಯೂಸ್ ಚಾನಲ್ ವಿರುದ್ಧ ಮತ್ತು ಕರ್ನಾಟಕ ದ್ವೇಷ ಅಪರಾಧ ತಡೆ ವಿಧೇಯಕ 2025 ನ್ನು ವಿಧಾನಸಭೆಯಲ್ಲಿ ಮಂಡಿಸಿರುವ ಬಗ್ಗೆ, ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ಖಂಡನೆ.
ಮಾಜಿ ಸಚಿವರು ಮತ್ತು ಮಧುಗಿರಿ ಶಾಸಕರಾದ ಕೆ ಎನ್ ರಾಜಣ್ಯನವರು ಖಾಸಗಿ ಟಿ.ವಿ ನ್ಯೂಸ್ ಚಾನೆಲ್ ನವರು ನೆಡೆಸಿಕೊಡುವ ಅತಿಥಿ ಸಂದರ್ಶನ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸವಿತಾ ಸಮೂದಾಯದವರು ಕ್ಷೌರಿಕ ವೃತ್ತಿ ಮಾಡುತ್ತಾರೆ ಎನ್ನುವ ಬದಲು ಹಜಾಮತ್ ಮಾಡುವವನು ಹಜಾಮತ್ ಮಾಡುತ್ತಾನೆ ಎಂದು ಹೇಳಿರುತ್ತಾರೆ. ರಾಜಣ್ಣ ನವರು ತಳಸಮುದಾಯದಿಂದ ಬಂದವರಾಗಿದ್ದು, ತಳಸಮುದಾಯಗಳ ಬಗ್ಗೆ ಕಾಳಜಿ ಇರುವ ಅದರಲ ಸವಿತಾ ಸಮುದಾಯದ ಮೇಲೆ ಅತ್ಯಂತ ಪ್ರೀತಿ ವುಳ್ಳವರಾಗಿದ್ದು, ಸವಿತಾ ಸಮೂದಾಯಕ್ಕೆ ಅನೇಕ ಅನುಕೂಲ ಮಾಡಿಕೊಟ್ಟಿರುತ್ತಾರೆ. ಇವರ ಬಾಯಲಿ ಸವಿತಾ ಸಮಾಜದ ನಿಷೇಧಿತ ಪದ ಬಳಕೆಯಾಗಿರುವುದು ಅತ್ಯಂತ ಆಶ್ಚರ್ಯ ದಿಮೆ ಆಘಾತಕಾರಿ ಯಾಗಿದ್ದು!. ಇದು ದುರಂತವೇ ಸರಿ.ಇದು ಸವಿತಾ ಸಮೂದಾಯಕ್ಕೆ ಮಾಡಿರುವ ಅಪಮಾನ. ಏಕೆಂದರೆ ಕ್ಷೌರಿಕ ವೃತ್ತಿ ಎಂದು ಹೇಳಲು ಅನುಕೂಲ ಇದ್ದರೂ ಸಹ ಹಜಾಮತ್ ಎಂದು ಹೇಳಿರುವ ರಾಜಣ್ಣ ನವರು ಅವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ಸವಿತಾ ಸಮಾಜ ಖಂಡಿಸುತ್ತದೆ.
ಕ್ಷೌರಿಕ ವೃತ್ತಿಯನ್ನು ಹಜಾಮತ್ ಎಂದು ಹೇಳಿರುವ ರಾಜಣ್ಣನವರ ಹೇಳಿಕೆಯನ್ನು ಸಂದರ್ಶನದಲ್ಲಿ ಹೇಳಿಕೆ ನೀಡಿದರೂ.ಅದೇ ರೀತಿ ಒಬ್ಬ ಜವಾಬ್ದಾರಿಯುತ ಮಾಧ್ಯಮದ ನಿರೂಪಕರಾಗಿ ಸವಿತಾ ಸಮಾಜದ ನಿಷೇಧಿತ ಪದ ಬಳಕೆ ಮಾಡಿದರೂ ಅದನ್ನು ತಕ್ಷಣ ಪ್ರಶ್ನಿಸದೆ ಮತ್ತು ಕಟ್ ಮಾಡದೆ ನೇರವಾಗಿ ಪ್ರಸಾರ ಮಾಡಿರುವುದು ನಿರೂಪಕರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025 ನ್ನು ಕರ್ನಾಟಕ ಸರ್ಕಾರ ವಿಧಾನ ಮಂಡಲದಲಿ… ಮಂಡಿಸಿದೆ. ಕರ್ನಾಟಕ ಸರ್ಕಾರಕ್ಕೆ ಸವಿತಾ ಸಮಾಜದಿಂದ ಅಭಿನಂದನೆಗಳು ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ನಮ್ಮಂತಹ ಧ್ವನಿ ಇಲ್ಲದ ಸಮೂದಾಯಕ್ಕೆ ಧ್ವನಿಯಾಗಲೂ ಈ ವಿಧೇಯಕ ತಂದಿದ್ದಾರೆ ಎಂದು ವಿಧೇಯಕ ನೋಡಿದಾಗ ಅರ್ಥವಾಗುತ್ತದೆ. ಏಕೆಂದರೆ ವಿಧೇಯಕದ ಪ್ರಕಾರ, ದ್ವೇಷ ಭಾಷಣ ಎಂದರೆ ಯಾವುದೇ ವ್ಯಕ್ತಿ (ಸತ್ಯವರು ಅಥವ ಜೀವಂತವಿರುವವರು), ಗುಂಪು ಅಥವಾ ಸಮುದಾಯದ ವಿರುದ್ಧ ಗಾಯ, ವೈಷಮ್ಮ ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಉಂಟುಮಾಡುವ ಉದ್ದೇಶದಿಂದ ಸಾರ್ವಜನಿಕವಾಗಿ ಪ್ರಸಾರ ಮಾಡುವ ಯಾವುದೇ ಮಾತು ಬರಹ, ಸಂಕೇತ, ದೃಶ್ಯ ನಿರೂಪಣೆ ಅಥವಾ ಎಲೆಕ್ಟ್ರಾನಿಕ್ ಸಂವಹನವನ್ನು ದ್ವೇಷ ಭಾಷಣ ಎಂದು ಪರಿಗಣಿಸಲಾಗುತ್ತದೆ. ವಿಧೇಯಕದಲಿ ಧರ್ಮ, ಜನಾಂಕ ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ ವಾಸಸ್ಥಳ, ಭಾಷೆ, ಅಂಗ ವೈಫಲಾ ಅಥವಾ ಬುಡಕಟ್ಟು ಆಧಾರದ ಮೇಲೆ ಮಾಡುವ ಯಾವುದೇ ತಾರತಮ್ಯದ ಮಾತುಗಳನ್ನು ‘ಪೂರ್ವಾಗ್ರಹದ ಆಸಕ್ತಿಗಳು’ ಎಂದು ವ್ಯಾಖ್ಯಾನಿಸಲಾಗಿದೆ.
ಮೇಲಿನ ವಿಧೇಯಕದಲಿ..ರುವ ವಿಷಯವನ್ನು ಗಮನಿಸಿದಾಗ ರಾಜ್ಯದ ಸವಿತಾ ಸಮಾಜದ ಬಂಧುಗಳು ರಾಜ್ಯದಲ್ಲಿ. ನಮ್ಮ ಸಮೂದಾಯದ ಮೇಲಿನ ಸಾಮಾಜಿಕ ದೌರ್ಜನ್ಮ ಕೊನೆಗೊಳ್ಳಬೇಕೆಂದರೆ ಈ ಕಾಯ್ದೆಯನ್ನು ರಾಜ್ಯದ ಸವಿತಾ ಸಮಾಜದ ಬಂಧುಗಳು ಉಪಯೋಗ ಮಾಡಿಕೊಳ್ಳುಬೇಕು. ಇನ್ನು ಮುಂದೆ ಯಾರೇ ಜಾತಿ ನಿಂದನೆ ಮತ್ತು ನಿಮ್ಮ ಮೇಲೆ ಸಾಮಾಜಿಕವಾದ ಯಾವುದೇ ರೀತಿಯಲಿ ಯಾರಾದರೂ ದೌರ್ಜನ್ಮ ನೆಡೆಸಿದರೂ ಈ ಕಾನೂನಿನ ಪ್ರಕಾರ FIR ಮಾಡಬಹುದು.
ಮಾಜಿ ಸಚಿವರು ಮತ್ತು ಮಧುಗಿರಿ ಶಾಸಕರಾದ ಕೆ.ಎನ್. ರಾಜಣ್ಯರವರ ಸವಿತಾ ಸಮೂದಾಯದ ಹೇಳಿಕೆ ವಿರುದ್ಧ ಕೆ.ಎನ್.ರಾಜಣ್ಯರವರ ಸವಿತಾ ಸಮೂದಾಯದ ಹೇಳಿಕೆಯನ್ನು ನೇರವಾಗಿ ಪ್ರಸಾರ ಮಾಡಿರುವ ಖಾಸಗಿ ನ್ಯೂಸ್ ಚಾನಲ್ ವಿರುದ್ಧ ಮತ್ತು ಕರ್ನಾಟಕ ದ್ವೇಷ ಅಪರಾಧ ತಡೆ ವಿಧೇಯಕ 2025 ನ್ನು ವಿಧಾನಸಭೆಯಲ್ಲಿ ಮಂಡಿಸಿರುವ ಬಗ್ಗೆ ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿರುವ ಹೇಳಿಕೆಯನ್ನು ವಿನಂತಿಸಿ ಕೊಂಡರು. ದ್ರುಳ್ವಪ್ಪ ನಾರಾಯಣ ಸ್ವಾಮಿ
ರಾಜ್ಯಕಾರ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಸವಿತಾ ಸಮಾಜ (ರಿ) ಪತ್ರಿಕಾಗೋಷ್ಠಿಯಲಿ ಭಾಗವಹಿಸುತ್ತಿರುವ ಸವಿತಾ ಸಮಾಜದ ವಿವಿಧ ಸಂಘಟನೆಯ ಮುಖಂಡರು
ವೇಣುಗೋಪಾಲ್, ಶ್ರೀಮತಿನಾಗವೇಣಿ
ರಾಘವೇಂದ್ರ.
ಅಧ್ಯಕ್ಷರು
ಜೆ ಆರ್ ಅಭಿಷೇಕ್
ರಾಜ್ಯ ಕಾರ್ಯಾಧ್ಯಕ್ಷರು, ಕರ್ನಾಟಕ ಸವಿತಾ ಕ್ಷೌರಿಕರ ಹಿತರಕ್ಷಣಾ ವೇದಿಕೆ (ದಿ) ಕೆ. ಬಾಲಕೃಷ್ಣ
ರಾಜ್ಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಸವಿತಾ ಕ್ಷೌರಿಕರ ಹಿತ ರಕ್ಷಣಾ ವೇದಿಕೆ (ರಿ)
ಮಹಿಳಾ ಮುಖಂಡರು
ಚಿಕ್ಕಬಳ್ಳಾಪುರ ಸವಿತಾ ಸಮಾಜ (ರಿ)ಅಧ್ಯಕ್ಷರು
ಯುವ ಘಟಕ ಬೆಂಗಳೂರು ಸವಿತಾ ಸಮಾಜ
ಬೆಂಗಳೂರು ನಗರ ಜಿಲ್ಲೆ, ಕರ್ನಾಟಕ ರಾಜ್ಯ ಸವಿತಾ ಸಮಾಜ
ವರದಿ. ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button