ಚಿತ್ತೂರಿನ ಸಂಸ್ಥಾನ ರಕ್ಷಣೆ ಮಾಡಿದ್ದ. ರಾಣಿ ಕರ್ಣಾವತಿ ಮಹಾನ್ ಚೇತನಕ್ಕೆ “79 ನೇ ” ಸ್ವಾತಂತ್ರ್ಯ ದಿನದಂದು ನೆನಪಿಸಿಕೊಳ್ಳೋಣ.

ಚಿತ್ತೂರಿನ ಸಂಸ್ಥಾನ ರಕ್ಷಣೆ ಮಾಡಿದ್ದ. ರಾಣಿ ಕರ್ಣಾವತಿ ಮಹಾನ್ ಚೇತನಕ್ಕೆ “79 ನೇ ” ಸ್ವಾತಂತ್ರ್ಯ ದಿನದಂದು ನೆನಪಿಸಿಕೊಳ್ಳೋಣ.
ಸ್ವಾತಂತ್ರ್ಯ ಪಡೆದು ಇಂದಿಗೆ “79 ” ವರ್ಷಗಳು ಕಳೆದರೂ, ಅಂದಿನ ವೀರ ಯೋಧರ ಬಲಿ ಮತ್ತು ರಕ್ತಪಾತ ಮಾಸದ ನೆನಪುಗಳ ಜೊತೆಗೆ ನಮ್ಮ ಇಂದಿನ ಪಯಣ . ಅಗಸ್ಟ್ ಹದಿನೈದು ಬಂತು ಅಂದ್ರೆ , ನಾಡಿನಾದ್ಯಂತ ಸಡಗರ ಸಂಭ್ರಮದ ಹಬ್ಬ. ಎಲ್ಲೆಡೆ ಹಾರುವ ಭಾರತಾಂಬೆಯ ಬಾವುಟ ನೋಡಲು ಕಣ್ಣೆರೆಡು ಸಾಲದು. ಇಂತಹ ಸಂಭ್ರಮಕ್ಕೆ ಕಾರಣಕರ್ತರಾದ ಕ್ರಾಂತಿಕಾರಿ ವೀರ ಯೋಧರ ಜೀವಗಳನ್ನು ಸ್ಮರಿಸಿ ಕೃತಜ್ಞತೆಗಳು ಸಲ್ಲುಸುವಂತ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸುವ ನಾಡಿನ ಹಬ್ಬವೆ ಸ್ವಾತಂತ್ರ್ಯ ದಿನಾಚರಣೆ.
ಈ ಸಂಭ್ರಮಕ್ಕೆ ಕಾರಣರಾದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವುದು ಅವರ ತ್ಯಾಗ ಬಲಿದಾನವನ್ನು ಸ್ಮರಿಸುವುದೇ
ಈ ದಿನದ ವಿಶೇಷವಾಗಿದೆ.ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮದೆಲ್ಲವೂ ಸಮರ್ಪಣೆ ಮಾಡದ ವೀರ ಯೋಧರು ಮತ್ತು ಚಳುವಳಿಯ ಸಂದರ್ಭದಲ್ಲಿ ಮನೆ ಮಠ ಕಳೆದುಕೊಂಡಿದ್ದ ಕ್ರಾಂತಿಕಾರಿ ಮಹಿಳೆಯರು ಮತ್ತು ಪುರುಷರು.ನಮ್ಮ ಭಾರತಮಾತೆಯನ್ನು ವೈರಿಗಳ ತಕ್ಕೆಯಿಂದ ಬಿಡಿಸಿಕೊಳ್ಳುವುದೇ ಮೊದಲ ಗುರಿಯಾಗಿತ್ತು . ಅದಕ್ಕಾಗಿ ಜಾತಿ – ಮತ ಮೇಲು – ಕೀಳು ಎಂಬ ಯಾವುದೇ ಭೇದಭಾವ ಇಲ್ಲದೆ ಒಗ್ಗಟ್ಟಾಗಿ ಹೋರಾಡುತ್ತಿದ್ದರು. ಏಕೆಂದರೆ ಬ್ರಿಟಿಷರ ಆಳ್ವಿಕೆಯಿಂದ ತತ್ತರಿಸಿ ಹೋಗಿತ್ತು ಭಾರತೀಯ ಮನುಕುಲ . ವ್ಯಾಪಾರಕ್ಕಾಗಿ ಭಾರತಕ್ಕೆ ಬಂದದ್ದು ತಮ್ಮ ಲಾಭಕ್ಕಾಗಿ.. ಇಲ್ಲಿಯ ಸಂಪನ್ನ ಭರಿತವಾದ ದೇಶದ ಸಮೃದ್ಧಿಯ ಜೀವನ ಕಂಡು ಮತ್ತು ಇಲ್ಲಿಯ ಮುಗ್ಧತೆಯ ಜನರನ್ನು ನೋಡಿ ಅವರ ಮೇಲೆ ದೌರ್ಜನ್ಯ ನಡೆಸಿದರು.ತಮ್ಮ ಆಳ್ವಿಕೆಯ ಸಮಯದಲ್ಲಿ ಭಾರತೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ಹಿಂಸಿಸುವ ಕ್ರೌರ್ಯ ಅವರದಾಗಿತ್ತು . ಅಲ್ಲದೆ ಭಾರತವನ್ನು ವಸಾಹತುಶಾಹಿ ವ್ಯಾಪಾರ ವಹಿವಾಟಿನ ಕೇಂದ್ರವಾಗಿ ಮಾಡಿಕೊಂಡು ದಿನ ದಿನಕ್ಕೂ ಭಾರತೀಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಾ ಹೋದವು . 200 ನೂರು ವರ್ಷಗಳಿಗೂ ಹೆಚ್ಚು ಕಾಲ. ದೇಶದ ಮೇಲೆ ಇವರುಗಳ
ಆಳ್ವಿಕೆ ನಡೆಸಿದರು .ಇವರ ದಬ್ಬಾಳಿಕೆಗೆ ಕಡಿವಾಣ ಹಾಕಲು ಕ್ರಾಂತಿಕಾರಿ ಸೈನ್ಯವನ್ನು ಒಗ್ಗೂಡಿಸಿದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ.ಮಂಗಲ್ ಪಾಂಡೆ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಸೈನ್ಯದಲ್ಲಿ ಸಿಪಾಯಿಯಾಗಿದ್ದ .
ಆದರೆ ದೇಶ ಪ್ರೇಮ ಹೃದಯದಲ್ಲಿ ತುಂಬಿತ್ತು .
ಹೀಗಾಗಿ ನಮ್ಮ ದೇಶದ ಜನರನ್ನು ನಡೆಸಿ ಕೊಳ್ಳುವ
ರೀತಿಯನ್ನು ನೋಡಿ ರಕ್ತ
ಕುದಿಯುತ್ತಿತ್ತು .
ಮಂಗಲ್ ಪಾಂಡೆ ಅವರು ಬ್ಯಾರಕ್ ಪೋರಿನ್ ಮಿಲಿಟರಿ ಪದಾತಿವಳ “ದಲ್ಲಿ ಸೈನಿಕರಾಗಿದ್ದರು . ಹಸು ಮತ್ತು ಹಂದಿ ಕೊಬ್ಬನ್ನು ಹೊಂದಿರುವ ರೈಫಲ್ಗಳಲ್ಲಿ ಹೊಸ ಕಾಟ್ರಿಡ್ಜ್ಗಳ ಬಳಕೆ ಪ್ರಾರಂಭವಾಗಿದ್ದು ಇಲ್ಲಿಂದ. ಇದರಿಂದಾಗಿ ಸೈನಿಕರಲ್ಲಿ ಅಸಮಾಧಾನ ಹೆಚ್ಚಾಗಿ , ಇದರ ಪರಿಣಾಮವಾಗಿ ಫೆಬ್ರವರಿ 9/1857 ರಂದು ಮಂಗಲ್ ಪಾಂಡೆ ಅವರು ಹೊಸ ಕಾಂಟ್ರಿಡ್ಜ್ ಬಳಸಲು ನಿರಾಕರಿಸಿದರು. ಮಾರ್ಚ್ 29/1857 ರಂದು ಬ್ರಿಟಿಷ್ ಅಧಿಕಾರಿ ಮೇಜರ್ ಹ್ಯೂಸನ್ ಭಗತಸಿಂಗ ಅವರಿಂದ ತನ್ನ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಾರಂಭಿಸಿದರು.ಇದರಿಂದಾಗಿ ರೊಚ್ಚಿಗೆದ್ದ ಮಂಗಲ್ ಪಾಂಡೆ ಹ್ಯೂಮನ್ನನ್ನು ಕೊಂದನು.ಮತ್ತು ಬ್ರಿಟಿಷ್ ಅಧಿಕಾರಿ ಮೇಜರ್ ಲೆಪ್ಟಿನೆಂಟ್ ಬಾಬ್ನನ್ನು ಕೊಂದನು.ಈ ಕಾರಣಕ್ಕಾಗಿ ಏಪ್ರಿಲ್ 8/1857 ರಂದು ಗಲ್ಲಿಗೇರಿಸಲಾಯಿತು.
ಮಂಗಲ್ ಪಾಂಡೆ ಹುತಾತ್ಮದ ನಂತರ ಸ್ವಾತಂತ್ರ್ಯ ಹೋರಾಟವು ಪ್ರಾರಂಭವಾಯಿತು.
ಮಂಗಲ್ ಪಾಂಡೆ ನಂತಹ ಅನೇಕ ವೀರ ಯೋಧರು ತಮ್ಮ ಕಾರ್ಯವನ್ನು ಮುಂದುವರಿಸಿದರು .
ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಸುಖದೇವ್, ಗಾಂಧೀಜಿ ಹೀಗೆ ಇವರುಗಳ ಮುಂದಾಳತ್ವದಲ್ಲಿ ಅನೇಕ ಮಹಿಳೆಯರು ಮತ್ತು ಪುರುಷರು ಕ್ರಾಂತಿಕಾರಿ ಸೈನ್ಯವನ್ನು ಒಗ್ಗೂಡಿಸಿ ತಾಯಿ ನಾಡಿಗಾಗಿ ತನು ಮನ ಧನ ನೀಡಿ ತಮ್ಮ ಪ್ರಾಣವನ್ನು ಅರ್ಪಿಸಿದರು.
ಇನ್ನೂ ಹಿಂದಕ್ಕೆ ಹೋದಾಗ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ , ಸಂಗೋಳ್ಳಿ ರಾಯಣ್ಣನಂತಹ ಅಪ್ರತಿಮ ದೇಶಭಕ್ತ ವೀರ ಯೋಧರಿಂದ ಪಡೆದ ಸ್ವಾತಂತ್ರ್ಯ ನಮ್ಮದಾಗಿದೆ
ಆದರೆ , ಈಗ ಏನಾಗಿದೆ ರಾಜಕೀಯ ಚುಕ್ಕಾಣಿ ಹಿಡಿದಿರುವ ನಾಯಕರುಗಳಿಗೆ
ತಮ್ಮ ಅಧಿಕಾರ ಮತ್ತು ಕುರ್ಚಿ
ಉಳಿಸಿ ಕೊಂಡು ಹೋಗುವುದೇ ಒಂದು ದೊಡ್ಡ ಸವಾಲಾಗಿದೆ. ನಾಲ್ಕು ತಲೆಮಾರು ಕುಳಿತು ಉಂಡರು ಸವಿಯದಷ್ಟು ಆಸ್ತಿ ಮಾಡುವುದರಲ್ಲಿಯೇ ಸಮಯ ಕಳೆದು ಹೋಗುವುದು .ಬೇಲಿಯೇ ಎದ್ದು ಹೊಲ ಮೆದ್ದರೆ , ಪ್ರಜೆಗಳ ಹಿತರಕ್ಷಣೆಗೆ ಹೇಗೆ ಎಂಬುದು ಯಕ್ಷಪ್ರಶ್ನೆ ಆಗಿದೆ.” ತಾನು ತನಗಾಗಿ ಅಲ್ಲದೆ ಪರರಿಗಾಗಿ ಬಾಳುವುದೇ ನಮ್ಮ ಯೋಧರು ಕಾಯಕವಾಗಿತ್ತು.ಮನೆ ಮಠ ಸಂಬಂಧಗಳು ಯಾವುದು ಲೆಕ್ಕಕ್ಕೆ ಇರಲಿಲ್ಲ . ನಾವೆಲ್ಲರೂ ಒಂದೇ ಎಂಬ ಮಂತ್ರ ಪಠಿಸಿದರು.
ವೀರಾವೇಶದಿಂದ ಹೋರಾಡಿದರು.
ಅಂದು ಅವರುಗಳ ತ್ಯಾಗ ಬಲಿದಾನದಿಂದ ಇಂದು
ನಾವುಗಳು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ.
ಸ್ವಾತಂತ್ರ್ಯ ಹೋರಾಟಗಾರರು
ಸ್ವಾತಂತ್ರ್ಯ ಪಡೆದ ಮಧುರ ಕ್ಷಣಗಳ ಹಿಂದೆ ಎಷ್ಟೊಂದು ನೋವಿನ ಕಥೆಗಳು ಇವೆ .
ಹಸುವಿನಿಂದ ಬಳಲಿದ ಜೀವಗಳು ಎಷ್ಟೊ ರಾತ್ರಿ ನಿದ್ದೆ ಇಲ್ಲದೆ ಅಲೆದಾಡಿದ ಜೀವಗಳು , ಹೆಣ್ಣು ಗಂಡು ಎಂಬ ಭೇದ ಭಾವ ಇಲ್ಲದೆ ಏಕತೆಯಲ್ಲಿ ಮನೆಯನ್ನು ತೊರೆದು ಕಾಡಿನಲ್ಲಿ ಇದ್ದು ತಮ್ಮ ಜೀವ ಕೈಯಲ್ಲಿ ಹಿಡಿದು ಕೊಂಡು ಹೋರಾಡಿ ರಕ್ತದ ಓಕುಳಿ ಆಡಿದರು.
ಹೆತ್ತು ಹೊತ್ತು ಸಾಕಿದ ಮಕ್ಕಳು ತಮ್ಮ ಕಣ್ಣೆದುರಲೇ ನೇಣಿಗೆ ಶರಣಾದ ದೃಶ್ಯ ನೋಡಿ ಮರುಗಿದ ಜೀವಗಳೆಷ್ಟೋ . ಹೆಂಡತಿ ಮಕ್ಕಳು ಯಾವುದು ಲೆಕ್ಕಕ್ಕೆ ಇಲ್ಲದೆ ತಾಯಿ ನಾಡಿಗಾಗಿ ನಿರಂತರವಾಗಿ ಹೋರಾಡಿ ಸ್ವಾತಂತ್ರ್ಯವನ್ನು ಪಡೆದರು .
ಪರುಷರೊಡನೆ ಮಹಿಳೆಯರು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ ವೀರ ಮರಣವನ್ನು ಹೊಂದಿ ಅಮರತ್ವವನ್ನು ಪಡೆದ ವೀರ ನಾರಿಯರ ಸಾಲಿನಲ್ಲಿ ” ಕರ್ಣಾವತಿ “ಯೂ ಕೂಡ ಒಬ್ಬಳು. ತಮ್ಮ ತಾಯಿ ನಾಡಿಗಾಗಿ “ಅಂತರಾತ್ಮಾರ್ಪಣೆ ” ಮಾಡಿದ ರಾಣಿಯರಲ್ಲಿ ” ಕರ್ಣಾವತಿ” .ರಾಣಾ ವಿಕ್ರಮಜಿತ್ ಮತ್ತು ಉದಯಸಿಂಹರ ತಾಯಿ ಕರ್ಣಾವತಿ. ಈಕೆಗೆ ಶರ್ಮಾವತಿಯೆಂದು ಹೆಸರುಂಟು. ಮೇವಾಡದ ರಾಣಾ ಸಂಗ್ರಾಮಸಿಂಹನ ಧರ್ಮಪತ್ನಿ.ಸ್ವಾತಂತ್ರ್ಯ ರಕ್ಷಣೆಗಾಗಿ ಹೋರಾಟದಲ್ಲಿ ತೀವ್ರವಾಗಿ ಪೆಟ್ಟು ತಿಂದು ದೇಹದಲ್ಲಿ ಎಂಬತ್ತು ಗಾಯಗಳಾಗಿದ್ದರೂ ಧೈರ್ಯದಿ ಹೋರಾಡಿ ಸಂಗ್ರಾಮನ ಮರಣ ನಂತರವೂ ಕೆಂಗೆಡದೆ ಮುನ್ನಡೆಸಿಕೊಂಡು ಹೋದಳು ಕರ್ಣಾವತಿ .
ಬಾಲಕನಾದ ವಿಕ್ರಮಜಿತ್ ಮೇವಾಡದ ಗದ್ದುಗೆಯನ್ನೇರಿದ .1533 ರಲ್ಲಿ ಗುಜರಾತಿನ ಸುಲ್ತಾನ್ ಬಹುದ್ದೂರಷಹ ಚಿತ್ತೂರನ್ನು ಮುತ್ತಿದ . ಆದರೆ ತಂದೆಯ ಮರಣದ ನಂತರ ಕಳೆದು ಕೊಂಡಿದ್ದ ಮಾಲ್ವವನ್ನು ಪುನರ್ವಶಗೊಳಿಸಿ ಕೊಳ್ಳುವುದು ಈತನ ಮುಖ್ಯ ಧ್ಯೇಯವಾಗಿತ್ತು. ಹೀಗಿರಲು ರಾಣಾ ವಿಕ್ರಮಜಿತ್ ತನ್ನ ರಾಜಧಾನಿಯ ರಕ್ಷಣೆಯ ವಿಚಾರದಲ್ಲಿ ನಿರಸಕ್ತನಾಗಿದ್ದುದರಿಂದ ಇತರ ರಜಪೂತ ನಾಯಕರು ತಂತಮ್ಮ ಜಾಗೀರುಗಳಿಗೆ ಹಿಂದುರಿಗಿದರು . ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ” ರಾಜಾಮಾತೆ ಕರ್ಣಾವತಿ ಅವರು ಮೊಗಲ್ ಚಕ್ರವರ್ತಿ ಹೂಮಾಯೂನನ್ನು ತನ್ನ ಸೋದರನಾಗಿಸಿ ಭಾವಿಸಿ ತನ್ನ ತೋಳಬಂದಿಯನ್ನು ಕಳುಹಿಸಿ ಸಹಾಯಕ್ಕಾಗಿ ಯಾಚಿಸಿದಳು.ಕರ್ಣಾವತಿಯ ಬೇಡಿಕೆಯಂತೆ ಹುಮಾಯೂನ್ ಚಿತ್ತೂರಿನ ರಕ್ಷಣೆಗೆ ಧಾವಿಸುತ್ತಿದಾಗ ಬಹದ್ದೂರಷಹನಿಂದ ಪತ್ರ ಬಂತು. ಕಾಫರರ ಮೇಲೆ ಧರ್ಮಯುದ್ಧ ( ಜೀಹಾದ್ ) ಮಾಡುತ್ತಿರುವ ಮುಸ್ಲಿಂ ದೊರೆಯ ಮೇಲೆ ” ಅದೇ ಮತಕ್ಕೆ ಸೇರಿದ ನೀನು ಯುದ್ಧ ಮಾಡುವುದು ಉಚಿತವಲ್ಲವೆಂದು”ತಿಳಿಸಿದ. ಹೀಗಾಗಿ ಹುಮಾಯೂನ್ ಅವರ ಮಾತಿಗೆ ಮರುಳಾಗಿ ಕರ್ಣಾವತಿಗೆ ನೆರವು ನೀಡಲಿಲ್ಲ . ಸೋಲಿನಿಂದಾಗಿ ಚಿತ್ತೂರು ಮಾಲ್ಟವನ್ನು ಬಹುದ್ದೂರಷಹನಿಗೆ ಹಿಂತಿರುಗಿಸಬೇಕಾಯಿತು . ಪುತ್ತೂರಿನ ರಕ್ಷಣೆಗೆ ಸ್ವತಃ ರಾಣಿ ಕರ್ಣಾವತಿ ಕಂಕಣಬದ್ದವಾಗಿ ನಿಂತಳು.
ಅಪ್ರಯೋಜಕನಾಗಿದ ವಿಕ್ರಮಜಿತ್ತನನ್ನು ಅಲ್ಲಿಂದ ಸ್ಥಳಾಂತರಿಸಿ, ಎಲ್ಲಾ ರಜಪೂತ ನಾಯಕರನ್ನೂ ಯೋಧರನ್ನು ಹುರಿದುಂಬಿಸಿ ರಕ್ಷಣೆಗೆಹೊಣೆ ಹೊತ್ತು ನಿಂತಿರಲು ; ಮುಸ್ಲಿಂರ ಪ್ರಬಲ ಸೈನ್ಯ ಮತ್ತು ಪಿರಂಗಿದಳದ ಮುಂದೆ ರಜಪೂತ ಸೈನ್ಯ ಸೋತು ಹೋಯಿತು. ರಜಪೂತ ವೀರರೆಲ್ಲರೂ ರಣರಂಗದಲ್ಲಿ ಹೋರಾಡುತ್ತಾ ಮರಣ ಹೊಂದಿದರು. ಇದರಿಂದಾಗಿ ರಾಣಿ ಕರ್ಣಾವತಿ ಕುಸಿದು ಬಿಟ್ಟಳಾದರೂ ಅವಳ ನೇತೃತ್ವದಲ್ಲಿ 1535 ರ ಮಾರ್ಚ್ 8 ರಂದು 300 ಹೆಚ್ಚಿನ ರಜಪೂತ ವೀರಮಣಿಯರು ಜೋಹರ ಪದ್ದತಿಗನುಸಾರವಾಗಿ ಅಗ್ನಿ ಪ್ರವೇಶ ಮಾಡಿದರು. ತನ್ನ ಮಾತೆಯ ಮತ್ತು ವೀರ ಯೋಧರ ಧೈರ್ಯ ಸಾಹಸದಿಂದ ಜಾಗೃತನಾದ ವಿಕ್ರಮಜಿತ್ ಅವರು ಸ್ವಲ್ಪ ಸಮಯದಲ್ಲಿಯೇ ಮುಸ್ಲಿಂರನ್ನು ಹೊಡೆದಟ್ಟಿ ಚಿತ್ತೂರಿನ ರಕ್ಷಣೆ ಮಾಡಿ ಯಶಸ್ಸು ಸಾಧಿಸಿದ್ದ . ರಾಣಿ ಕರ್ಣಾವತಿ ವೀರಾವೇಶದಿಂದ ಹೋರಾಡಿದ ಮಹಾನ್ ಚೇತನಕ್ಕೆ ಇಂದು ಕೃತಜ್ಞತೆ ಸಲ್ಲಿಸೋಣ.
ಸ್ವಾತಂತ್ರ್ಯ ದಿನಾಚರಣೆಯ ಎಲ್ಲರಿಗೂ ಶುಭಾಶಯಗಳು.
ಬರಹ
ಶ್ರೀಮತಿ ಅಮರಾವತಿ ಹಿರೇಮಠ
9108259250.





