ಬಂಡಾಯ ಸಾಹಿತಿ ಶಾಂತರಸರವರ ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ – ಗೌಡರ ಬದುಕಿನ ಆಧಾರಿತವಾಗಿ ಅವರ ಕಾದಂಬರಿ.

ಕನ್ನಡ ಗಜಲ ಪಿತಾಮಹ ಬಂಡಾಯ ಸಾಹಿತಿ ಶಾಂತರಸರವರ ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ – ಗೌಡರ ಬದುಕಿನ ಆಧಾರಿತವಾಗಿ ಅವರ ಕಾದಂಬರಿ
– ಸಣ್ಣ ಗೌಡಸಾನಿ ನಾಟಕ ನಿನ್ನೆ –
ಒತ್ತು ಮುಳುಗುವ ಸಮಯದಲ್ಲಿ S.M. ಪಂಡಿತ ರಂಗಮಂದಿರದಲ್ಲಿ ರಂಗಾಯಣ ಕಲಬುರಗಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಕೂಡಿ ರೇಪಟೇರ ಕಲಾವಿದರು ಜೀವ ತುಂಬಿ ಅಭಿನಯಿಸಿದ
“ಜನನವು ನಾನು ಬಯಸಿದ್ದಲ್ಲ” –
“ಮರಣವು ನನ್ನ ಇಚ್ಛೆಯದಲ್ಲ” –
“ಎಂಥ ಮೋಜು – ಇದು ಎಂಥಾ ಮೋಜು” –
“ಸಗಮಪ – ಗಮಗಗಸಾ ಎಂಬ –
“ಗೀತೆಯೊಂದಿಗೆ”
ನಾಟಕದಲ್ಲಿ ಪಾತ್ರ ಮಾಡುವ ಜಾತಗಾರ ಜನಾಂಗದ ಮಹೇಬೂಬಿಜಾನಳನ್ನು ತನ್ನ ಬುಟ್ಟಿಗೆ ಹಾಕಿ ಕೊಳ್ಳಲು ಗ್ರಾಮದ ಸಾಹುಕರ ಗಂಗಪ್ಪ ಮತ್ತು ಪೊಲೀಸ್ ಗೌಡ ಸುಗನಗೌಡ ನಡುವೆ ಜಗಳ ಉಂಟಾಗುತ್ತದೆ. ಕೊನೆಗೆ ಮಹೇಬೂಬಿಜಾನ್ ಸುಗನಗೌಡನಿಗೆ ಒಲಿಯುತ್ತಾಳೆ. ದೊಡ್ಡಗೌಡಸಾನಿ ಪಾರ್ವತಿ ಅವಳನ್ನು ಸವತಿಯಂತೆ ನೋಡದೆ ತಂಗಿಯಂತೆ ಕಾಣುತ್ತಾಳೆ. ತನಗೆ ಮಾಬಿ ಸಿಗಲಿಲ್ಲವೆಲ್ಲ ಎಂದು ಕೊಂಡ ಸಾಹುಕಾರ ಗಂಗಪ್ಪ ಗೌಡನ ಬಣವಿಗೆ ಬೆಂಕಿ ಹಚ್ಚಿಸುತ್ತಾನ . ಹೀಗೆ ಗೌಡ, ಕುಲಕರ್ಣಿ, ಸ್ವಾಮಿ ಹಾಳು ಮಹಿಳೆ ಮತ್ತು ಮಕ್ಕಳು ಸೇರಿ ಎರಡು ಗುಂಪುಗಳಾಗಿ ಊರಿನ ನೆಮ್ಮದಿಯೇ ಹಾಳಾಗುತ್ತದೆ. ಸುಗನಗೌಡನ ವಿರುದ್ಧ ದ್ವೇಷ ಸಾಧಿಸಲು ಊರು ಸಾಹುಕಾರ ಆತನ ಮಗನ ಮೂಲಕವೇ ಮನೆ ಒಡೆಯುವ ಕೆಲಸ ಮಾಡುತ್ತಾನೆ. ಸುಗನಗೌಡನ ಮರಣ ಹೊಂದಿದ ಮೇಲೆ ಮಹೇಬೂಬಿಜಾನ್ ಗೌಡನ ಮನೆ ಬಿಟ್ಟು ಹೋಗುವವೇಳೆ ನಾಟಕ ಮುಗಿಯುತ್ತದೆ.
50-60 ರ ದಶಕದ ಹಳ್ಳಿಗಾಡಿನ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ವ್ಯವಸ್ಥೆ ಬಿಚ್ಚಿಡುವ ಈ ನಾಟಕ ಜಮೀನದಾರರ ಪದ್ಧತಿಯಿಂದ ನಲುಗಿದ ಹಳ್ಳಿ ಜೀವನ ಉಳ್ಳವರ ಬಡವರು ದೀನ ದಲಿತರು ಹಿಂದುಳಿದ ವರ್ಗದ ಮಹಿಳೆಯರ ಶೋಷಣೆ, ಪುರೋಹಿತಶಾಹಿ ವ್ಯವಸ್ಥೆಯ ಕುತಂತ್ರದ ಮಧ್ಯೆ ಮಹಬೂಬಿಜಾನ್ (ಸಣ್ಣಗೌಡಸಾನಿ) ಮಾನವನ ಪ್ರೇಮ ಹಂಚುವುದೇ ಈ ನಾಟಕದ ಸತ್ಯಕತೆ ಆಗಿತ್ತು ಇದೆ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕಿ – ಡಾ|| ಸುಜಾತ ಜಂಗಮಶೆಟ್ಟಿ ಮಹಾಂತೇಶ ನವಲಕಲ್ ರಂಗರೂಪ ರಾಘವಕುಮಾರ್ ಅವರ ಸಂಗೀತ ಸಂಯೋಜನೆ ಪ್ರವೀಣರೆಡ್ಡಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ನಾಟಕವು ಹೈದರಾಬಾದ್ ಕರ್ನಾಟಕ ಪ್ರದೇಶದ ಗ್ರಾಮೀಣ ಬದುಕನ್ನು ಸತ್ಯಘಟನೆ ಈ ನಾಟಕದಲ್ಲಿ ಕಂಡು ಬಂತು ಅನೇಕೆ ಜನರು ನಾಟಕವನ್ನು ಪ್ರದರ್ಶಿದರು.
ಪಿಡ್ಡಪ್ಪ ಜಾಲಗಾರ್ ಸುರಪುರ
ಬಂಡಾಯ ಸಾಹಿತಿ ಕಲಬುರಗಿ




